ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಇಕ್ಯೂಬಿ ಎಸ್‌ಯುವಿಯನ್ನು ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಬಿ ಎಸ್‍ಯುವಿಯು ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಕೆಲವೇ ದಿನಗಳ ಹಿಂದೆ ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಸ್‍ಯುವಿಯು ಕೂಡ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತು. ಆದರೆ ಇಕ್ಯೂಬಿ ಐಷಾರಾಮಿ ಎಲೆಕ್ಟ್ರಿಕ್ ಎಸ್‍ಯುವಿಯ ಅಂಕಗಳು ಇಕ್ಯೂಎಸ್ ಮಾದರಿಗೆ ಹೋಲಿಸಿದರೆ ಸಣ್ಣ ಅಂತರವಿದೆ. ಮರ್ಸಿಡಿಸ್ ಬೆಂಝ್ ಇಕ್ಯೂಬಿ ಎಸ್‍ಯುವಿಯು ವಯಾಸ್ಕ ಪ್ರಯಾಣಿಕರ ವಿಭಾಗದಲ್ಲಿ 95 ಪ್ರತಿಶತ ಅಂಕಗಳನ್ನು ಗಳಿಸಿದರೆ, ಮಕ್ಕಳ ವಿಭಾಗದಲ್ಲಿ 91 ಪ್ರತಿಶತ ಅಂಕಗಳನ್ನು ಗಳಿಸಿದೆ. ಈ ಎಸ್‍ಯುವಿಯು ದುರ್ಬಲ ರಸ್ತೆ ಬಳಕೆದಾರರ ಫಲಿತಾಂಶವು ಶೇಕಡಾ 78 ರಷ್ಟಿದೆ ಮತ್ತು ಸುರಕ್ಷತಾ ಅಸಿಸ್ಟ್ ವಿಭಾಗದಲ್ಲಿ ಶೇಕಡಾ 74 ರಷ್ಟು ಅಂಕವನ್ನು ಗಳಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಒಟ್ಟಾರೆಯಾಗಿ, ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಲೆಕ್ಟ್ರಿಕ್ ಎಸ್‍ಯುವಿಯು ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಗರಿಷ್ಠ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಎಲ್ಲಾ ವಿಭಾಗಗಳಲ್ಲಿ ಉತ್ತಮ ಸ್ಕೋರ್‌ಗಳನ್ನು ಹೊಂದಿದೆ. ಇಕ್ಯೂಎಸ್ ಮಾದರಿಗೆ ಹೋಲಿಸಿದರೆ ಹೆಚ್ಚುವರಿ ಕ್ರ್ಯಾಶ್ ಪರೀಕ್ಷೆಗಳಿಂದ ಒಂದೇ ರೀತಿಯ ರಚನೆ ಮತ್ತು ಡೇಟಾವನ್ನು ಹೊಂದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿಮರ್ಸಿಡಿಸ್ ಬೆಂಝ್ ಇಕ್ಯೂಬಿ ಎಸ್‍ಯುವಿಗೆ ಪಾಲುದಾರ ಮಾದರಿಯಾಗಿದೆ ಮತ್ತು ಅವುಗಳ ರಚನೆಯು ಪ್ರಾಯೋಗಿಕವಾಗಿ ಒಂದೇ ಆಗಿರುತ್ತದೆ ಎಂದು ಹೇಳಿದೆ. ಮರ್ಸಿಡಿಸ್ ಬೆಂಝ್ ಇಕ್ಯೂಬಿ ಸುರಕ್ಷತೆಯ ಮಟ್ಟವನ್ನು ಮೂರು ವಿಭಿನ್ನ ಪರೀಕ್ಷೆಗಳ ಮೂಲಕ ಪರೀಕ್ಷಿಸಲಾಯಿತು.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಇದು ಫ್ರಂಟ್-ಇಂಪ್ಯಾಕ್ಟ್, ಸೈಡ್ ಇಂಪ್ಯಾಕ್ಟ್ ಮತ್ತು ಪೋಲ್ ಟೆಸ್ಟ್ ಆಗಿದೆ. ಮುಂಭಾಗದ ಟೆಸ್ಟ್‌ನಲ್ಲಿ ಇಕ್ಯೂಬಿಯು 50 ಪ್ರತಿಶತದಷ್ಟು ಅಗಲದಲ್ಲಿ ತಡೆಗೋಡೆಯಾಗಿ ಹೊಡೆಯಲಾಯಿತು, ಇದು 50 ಕಿ,ವೀ ವೇಗದಲ್ಲಿ ಟೆಸ್ಟ್ ಮಾಡಲಾಗಿದೆ. ಸೈಡ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ 60 ಕಿ.ವೇ ವೇಗದಲ್ಲಿ ಪರೀಕ್ಷಿಸಿದೆ, ಪೋಲ್ ಪರೀಕ್ಷೆಯಲ್ಲಿ, ಪರೀಕ್ಷಾ ಕಾರನ್ನು 32 ಕಿ.ಮೀ ವೇಗದಲ್ಲಿ ಪರೀಕ್ಷಿಸಿದೆ

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಬಿ ಎಸ್‍ಯುವಿಯು ಯುರೋಪಿಯನ್ ಮಾರುಕಟ್ಟೆಯಲ್ಲಿ ಆಡಿ ಕ್ಯೂ4 ಇ-ಟ್ರಾನ್ ಎಲೆಕ್ಟ್ರಿಕ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಹೊಸ ಇಕ್ಯೂಬಿ ಎಸ್‍ಯುವಿಯನ್ನು ಹಂಗೇರಿಯದ ಕೆಕ್ಸ್‌ಕೆಮೆಟ್‌ನಲ್ಲಿ ತಯಾರಿಸಲಾಗಿದೆ. ಇದರ ಪೆಟ್ರೋಲ್ ಚಾಲಿತ ಜಿಎಲ್‌ಬಿ ಎಸ್‍ಯುವಿಯನ್ನು ಕೂಡ ಇಲ್ಲೇ ತಯಾರಿಸಲಾಗುತ್ತಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಮರ್ಸಿಡಿಸ್ ಬೆಂಜ್ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯು ಮರ್ಸಿಡಿಸ್ ಜಿಎಲ್‌ಬಿ ಮಾದರಿಗೆ ಹೆಚ್ಚಾಗಿ ಹೋಲುತ್ತದೆ. ಈ ಎರಡನ್ನೂ ಪ್ರತ್ಯೇಕಿಸಲು ಕೆಲವು ವಿಶಿಷ್ಟವಾದ ಸಣ್ಣ ಬದಲಾವಣೆಗಳಿವೆ. ವಿಶಿಷ್ಟವಾದ ಬಿಟ್‌ಗಳಲ್ಲಿ ಸಂಪೂರ್ಣವಾಗಿ ಗ್ಲೋಷ್-ಗ್ರಿಲ್, ಹೊಸ ಬಂಪರ್‌ಗಳು, ಎರಡು ಹೆಡ್‌ಲ್ಯಾಂಪ್‌ಗಳನ್ನು ಕನೆಕ್ಟ್ ಮಾಡುವ ಎಲ್‌ಇಡಿ ಸ್ಟ್ರಿಪ್‌ಗಳು, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಶಿಷ್ಟವಾದ ಗ್ರಾಫಿಕ್ಸ್, ಅಲ್ಯೂಮಿನಿಯಮ್ ಬಿಟ್‌ಗಳಿಂದ ಸುತ್ತುವರೆದ ಎಸಿ ವೆಂಟ್ಸ್ ಗಳಿವೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಇಕ್ಯೂಬಿ 350 4ಮ್ಯಾಟಿಕ್ ಎಸ್‍ಯುವಿಯು ಎರಡು ಎಲೆಕ್ಟ್ರಿಕ್ ಮೋಟಾರ್ ಗಳನ್ನು ಹೊಂದಿವೆ. ಈ ಎಲೆಕ್ಟ್ರಿಕ್ ಮೋಟರ್‌ಗಳು ಅಸಮಕಾಲಿಕ ಮತ್ತು ಸಿಂಕ್ರೊನಸ್ ಮೋಟರ್‌ಗಳಾಗಿವೆ, ಇವುಗಳನ್ನು ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳ ಮೇಲೆ ಜೋಡಿಸಲಾಗಿದೆ. ಒಟ್ಟಾಗಿ ಇವುಗಳು 288 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಈ ಹೊಸ ಮರ್ಸಿಡಿಸ್ ಬೆಂಜ್ ಇಕ್ಯೂಬಿ 350 4ಮ್ಯಾಟಿಕ್‌ನಲ್ಲಿನ ಡಿಸಿ ಸೆಟಪ್‌ನಲ್ಲಿ ಗರಿಷ್ಠ 100 ಕಿ.ವ್ಯಾಟ್ ಮತ್ತು ಎಸಿ ಸೆಟಪ್‌ನಲ್ಲಿ 11 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದಾರೆ. ಈ ಹೊಸ ಇಕ್ಯೂಬಿ 350 4ಮ್ಯಾಟಿಕ್ ಕೇವಲ 6.0 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ.

ಆದರೆ ಪವರ್ ಉತ್ಪಾದನೆಯನ್ನು ವಿಭಿನ್ನವಾಗಿ ಉತ್ಪಾದಿಸುವ ರೀತಿ ಟ್ಯೂನ್ ಮಾಡಲಾಗಿದೆ. ಇನ್ನು ಇಕ್ಯೂಬಿ 250 ವೆರಿಯೆಂಟ್ 188 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಮೋಟರ್ ಬಳಸಿ ಮತ್ತು ಮುಂಭಾಗದ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಇಕ್ಯೂಎಸ್ ಮಾದರಿಗಿಂತ ಭಿನ್ನವಾಗಿ, ಈ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬೆಸ್ಪೋಕ್ ಇವಿ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿಲ್ಲ, ಬದಲಿಗೆ ಇದು ಮರ್ಸಿಡಿಸ್ ಬೆಂಜ್ ಜಿಎಲ್‌ಬಿಯ ಮಾರ್ಪಡಿಸಿದ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಇನ್ನು ಕೆಲವು ದಿನಗಳ ಹಿಂದಷ್ಟೇ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟವನ್ನು ಸರಳಗೊಳಿಸಲು ಹೊಸ ಯೋಜನೆಯೊಂದನ್ನು ಜಾರಿಗೊಳಿಸಿತ್ತು. ಕಂಪನಿಯು ಹೊಸ ಮಾದರಿಯ ಮಾರಾಟ ವೈಶಿಷ್ಟ್ಯತೆಗಳನ್ನು ಒಳಗೊಂಡ ರಿಟೇಲ್ ಆಫ್ ದಿ ಫ್ಯೂಚರ್(ROTF) ಎಂಬ ಪ್ಲ್ಯಾಟ್‌ಫಾರಂ ಅನ್ನು ತೆರೆದಿದೆ. ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರಂ ಕಾರ್ಯನಿರ್ವಹಣೆಯನ್ನು ಅಧಿಕೃವಾಗಿ ಜಾರಿಗೆ ತಂದಿರುವ ಕಂಪನಿಯು ಈ ಹೊಸ ಪ್ಲ್ಯಾಟ್‌ಫಾರಂ ಮೂಲಕ ತನ್ನ ಐಷಾರಾಮಿ ಕಾರು ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದ Mercedes Benz EQB ಎಸ್‍ಯುವಿ

ಇದರ ಪರಿಣಾಮವಾಗಿ, ಬೂಟ್ ಸ್ಪೇಸ್ ಸುಮಾರು 75-ಲೀಟರ್‌ಗಳಷ್ಟು ಕಡಿಮೆಯಾಗಿದೆ. ಹೆಚ್ಚಿನ ಬೂಟ್ ಸ್ಪೇಸ್ ಅಗತ್ಯವಿದ್ದರೆ ಹಿಂಭಾಗದಲ್ಲಿ ಸೀಟುಗಳನ್ನು ಮಡಿಚಿದಾಗ 1710-ಲೀಟರ್‌ಗೆ ವಿಸ್ತರಿಸಬಹುದು. ಈ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಬಿ ಎಲೆಕ್ಟ್ರಿಕ್ ಎಸ್‍ಯುವಿಗೆ ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಸಿಗುವ ಮೂಲಕ ಸುರಕ್ಷತಾ ಮಾದರಿ ಎಂದು ಗುರುತಿಸಿಕೊಂಡಿದೆ.

Article Published On: Wednesday, December 22, 2021, 17:18 [IST]
English summary
New mercedes benz eqb gets 5 star rating in euro ncap crash test details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+