ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ Mini ಎಲೆಕ್ಟ್ರಿಕ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹಲವು ಜನಪ್ರಿಯ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ. ಇದೇ ಸಂದರ್ಭದಲ್ಲಿ ಜನಪ್ರಿಯ ಕಾರು ತಯಾರಕರಾದ ಮಿನಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಮಿನಿ ಇಂಡಿಯಾ ಕಂಪನಿಯು ಹೊಸ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಇತ್ತೀಚೆಗೆ ಪ್ರಾರಂಭಿಸಿತ್ತು. ಈ ಎಲೆಕ್ರ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಟೋಕನ್ ಮೊತ್ತ ರೂ.1 ಲಕ್ಷ ನಿಗದಿಪಡಿಸಲಾಗಿದೆ. ಮೊದಲ ಬ್ಯಾಚ್‌ನಲ್ಲಿ ನಿಗದಿಪಡಿಸಿದ ಎಲ್ಲಾ ಮಾದರಿಗಳನ್ನು ಮಾರಾಟ ಮಾಡಲಾಗಿದೆ ಎಂದು ವಾಹನ ತಯಾರಕರು ಈಗ ದೃಢಪಡಿಸಿದ್ದಾರೆ. ಮಿನಿ ಇಂಡಿಯಾ ತನ್ನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಎಲ್ಲಾ 30 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಈ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಸಂಪೂರ್ಣ ಲೋಡ್ ಮಾಡಲಾದ ರೂಪಾಂತರದಲ್ಲಿ ಸಿಬಿಯು ಆಗಿ ಭಾರತಕ್ಕೆ ಬರಲಿದೆ. ಮಿನಿ ಕೂಪರ್ ಎಸ್‌ಇ ಬಿಎಂಡಬ್ಲ್ಯು ಗ್ರೂಪ್‌ನಿಂದ ಭಾರತದಲ್ಲಿ ಮಾರಾಟವಾಗುವ ಮೊದಲ ಆಲ್-ಎಲೆಕ್ಟ್ರಿಕ್ ಮಾದರಿಯಾಗಿದೆ. ಕೂಪರ್ ಎಸ್‌ಇ 3-ಡೋರಿನ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ,

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಈ ಮಿನಿ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಹೊಸ ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಮುಂದಿನ ವರ್ಷದ ಏಪ್ರಿಲ್‌ನಿಂದ ಪ್ರಾರಂಭವಾಗುತ್ತವೆ. 2019 ರಲ್ಲಿ ಜಾಗತಿಕವಾಗಿ ಪರಿಚಯಿಸಲಾದ ಬ್ರ್ಯಾಂಡ್‌ನ ಮೊದಲ ಆಲ್-ಎಲೆಕ್ಟ್ರಿಕ್ ಕಾರ್ ಕೂಪರ್ ಎಸ್‌ಇ.

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಈ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮಿನಿ ಎಲೆಕ್ಟ್ರಿಕ್ ಮಿನಿ ಕೂಪರ್‌ನ ನಿಖರವಾದ ಪ್ರತಿರೂಪವಾಗಿ ಕಂಡುಬರುತ್ತದೆಯಾದರೂ ಕೆಲವು ಸಣ್ಣ ವ್ಯತ್ಯಾಸಗಳಿವೆ. ಅವುಗಳಲ್ಲಿ ಪ್ರಮುಖವಾದವು ಫಾಕ್ಸ್ ಫ್ರಂಟ್ ಗ್ರಿಲ್ ಆಗಿದ್ದು, ಇದು ರೇಡಿಯೇಟರ್‌ಗೆ ತಾಜಾ ಗಾಳಿಯನ್ನು ಬಿಡುವ ಬದಲು ಕಾರಿನ ಏರೋಡೈನಾಮಿಕ್ ಗುಣಗಳನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಮಿನಿ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮಿನಿ ಎಲೆಕ್ಟ್ರಿಕ್ ಮಿನಿ ಕೂಪರ್‌ನ ನಿಖರವಾದ ಪ್ರತಿರೂಪವಾಗಿ ಕಂಡುಬರುತ್ತದೆಯಾದರೂ ಕೆಲವು ಸಣ್ಣ ವ್ಯತ್ಯಾಸಗಳಿವೆ. ಅವುಗಳಲ್ಲಿ ಪ್ರಮುಖವಾದವು ಫಾಕ್ಸ್ ಫ್ರಂಟ್ ಗ್ರಿಲ್ ಆಗಿದ್ದು, ಇದು ರೇಡಿಯೇಟರ್‌ಗೆ ತಾಜಾ ಗಾಳಿಯನ್ನು ಬಿಡುವ ಬದಲು ಕಾರಿನ ಏರೋಡೈನಾಮಿಕ್ ಗುಣಗಳನ್ನು ಹೆಚ್ಚಿಸುತ್ತದೆ. ಆದರೆ ಮಿನಿ ಐಕಾನಿಕ್ ಸುತ್ತಿನ ಹೆಡ್‌ಲೈಟ್‌ಗಳನ್ನು ಇಂಟಿಗ್ರೇಟೆಡ್ ಸರ್ಕ್ಯುಲರ್ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಉಳಿಸಿಕೊಂಡಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ಹಾಟ್ ಹ್ಯಾಚ್ ಕಾರು ಹೊಸ 17-ಇಂಚಿನ ಕರೋನಾ ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವೀಲ್ ವಿನ್ಯಾಸವನ್ನು ಹಳದಿ-ಬಣ್ಣದ ರಿಮ್‌ಗಳನ್ನು ಹೊಂದಿದ್ದು ಅದು ಆಕರ್ಷಕವಾಗಿ ಕಾಣುವಂತೆ ಮಾಡಿದೆ, ಈ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಒಟ್ಟಾರೆ ಡ್ಯಾಶ್‌ಬೋರ್ಡ್ ವಿನ್ಯಾಸವು ಸ್ಟ್ಯಾಂಡರ್ಡ್ ಕೂಪರ್ ಹ್ಯಾಚ್‌ಬ್ಯಾಕ್‌ಗೆ ಹೋಲುತ್ತದೆ. ಪ್ರಮುಖ ಹೈಲೈಟ್ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಆಗಿದೆ,

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಕೂಪರ್ ಎಸ್‌ಇ ಒಂದನ್ನು ಹೊಂದಿದ ಮೊದಲ ಮಿನಿಯಾಗಿದೆ. ಬಹು-ಹಂತದ ಬ್ರೇಕ್-ಪುನರುತ್ಪಾದನೆ ಸಿಸ್ಟಂಗಾಗಿ ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಟಾಗಲ್ ಸ್ವಿಚ್ ಮಾತ್ರ ಇತರ ವ್ಯತ್ಯಾಸವಾಗಿದೆ. ಇನ್ನು ಒಳಭಾಗದ ಡ್ಯಾಶ್‌ಬೋರ್ಡ್ 5.5-ಇಂಚಿನ ಅಂಡಾಕಾರದ ಆಕಾರದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಮಧ್ಯದಲ್ಲಿ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಸಹ ಹೊಂದಿರುತ್ತದ.

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಡಿಸ್‌ಪ್ಲೇ ವ್ಯಾಪಕವಾದ ಕನೆಕ್ಟೆಡ್ ಕಾರ್ ಫೀಚರ್‌ಗಳು ಮತ್ತು ಕನ್ಸಿಯರ್ಜ್ ಸೇವೆಗಳನ್ನು ನೀಡುತ್ತದೆ. ಇವುಗಳಲ್ಲಿ ರಿಮೋಟ್ ಕಾರ್ ಲಾಕಿಂಗ್/ಅನ್‌ಲಾಕ್ ಮತ್ತು ಒಬ್ಬರ ಸ್ಮಾರ್ಟ್‌ಫೋನ್‌ನಿಂದ ಒಳಾಂಗಣದ ಪ್ರಿ-ಕಂಡೀಷನಿಂಗ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ. ಇನ್ನು ಯೆಲ್ಲೋ ಅಸ್ಸೆಂಟ್ ಒಳಭಾಗಕ್ಕೂ ಸಾಗಿಸಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಹೊಸ ಪವರ್‌ಟ್ರೇನ್‌ನಿಂದ ಆಂತರಿಕ ಮತ್ತು ಬೂಟ್ ಸ್ಥಳವು ಹೆಚ್ಚಾಗಿ ಪರಿಣಾಮ ಬೀರುವುದಿಲ್ಲ ಎಂದು ಮಿನಿ ಹೇಳುತ್ತಾರೆ. ಇನ್ನು ಪಿಲ್ಲರ್‌ಗಳನ್ನು ಎಲ್ಲಾ ಬಣ್ಣದ ಟ್ರಿಮ್‌ಗಳಲ್ಲಿ ಬ್ಲ್ಯಾಕ್ ಅಂಶಗಳನ್ನು ಹೊಂದಿದೆ. ಇದು ಕಾರಿಗೆ ಆಕರ್ಷಕ ಲುಕ್ ನೀಡುತ್ತದೆ.ಈ ಮಿನಿ ಎಲೆಕ್ಟ್ರಿಕ್ ಮೋಟಾರ್ ಅನ್ನು ನೀಡಿದ್ದು, ಇದರೊಂದಿಗೆ 32.6 ಕಿವ್ಯಾಟ್ ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಡಬ್ಲ್ಯುಎಲ್‌ಟಿಪಿ ವ್ಹೀಲ್ ಪ್ರಕಾರ ಒಂದೇ ಚಾರ್ಜ್‌ನಲ್ಲಿ ಬ್ಯಾಟರಿಯು 203 ರಿಂದ 235-270 ಕಿಲೋಮೀಟರ್‌ಗಳ ವೆರೆಗಿನ ರೇಂಜ್ ಅನ್ನು ಹೊಂದಿರುತ್ತದೆ.ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಎಲೆಕ್ಟ್ರಿಕ್ ಪವರ್‌ಟ್ರೇನ್ 184 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 7.3 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಮಿನಿ ಎಲೆಕ್ಟ್ರಿಕ್ ಕಾರು 150 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಅದರ ಐಸಿ ಎಂಜಿನ್ ಪ್ರತಿರೂಪದಂತೆ, ಇದು ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಏಕೈಕ ಮೋಟರ್‌ನೊಂದಿಗೆ FWD ಆಗಿ ಬರುತ್ತದೆ. ಹೆಚ್ಚಿನ ಮಿನಿ ಗಳಂತೆ, ಆಲ್-ಎಲೆಕ್ಟ್ರಿಕ್ ಕೂಪರ್ ಒಬ್ಬರ ಕಾರಿನ ಅನುಭವವನ್ನು ಹಗುರಗೊಳಿಸಲು ಟನ್ಗಟ್ಟಲೆ ಗಿಜ್ಮೊಗಳನ್ನು ಪಡೆಯುತ್ತದೆ. ಇವುಗಳಲ್ಲಿ ಅಡಾಪ್ಟಿವ್ ಎಲ್ಇಡಿ ಹೆಡ್‌ಲೈಟ್‌ಗಳು ಮ್ಯಾಟ್ರಿಕ್ಸ್ ಫಂಕ್ಷನ್‌ನೊಂದಿಗೆ ಹೈ ಭೀಮ್, ಹೀಟೆಡ್ ಸ್ಟೀಯರಿಂಗ್ ವೀಲ್, ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, ಹೆಡ್-ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ,

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ಸೋಲ್ಡ್ ಔಟ್ ಆದ MINI ಎಲೆಕ್ಟ್ರಿಕ್ ಕಾರು

ಇನ್ನು ಭಾರತದಲ್ಲಿ ಹೊಸ ಮಿನಿ ಎಲೆಕ್ಟ್ರಿಕ್ ಕಾರು ಸಂಪೂರ್ಣವಾಗಿ ಬಿಲ್ಟ್ ಯುನಿಟ್ ಅಗಿ (ಸಿಬಿಯು) ಬರುತ್ತದೆ. ಈ ಹೊಸ ಮಿನಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

Most Read Articles

Kannada
Read more on ಮಿನಿ mini
English summary
New mini cooper se sold out in india before launch find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X