ಭಾರತದಲ್ಲಿ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿ ಬಿಡುಗಡೆ
ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.19 ಕೋಟಿಯಾಗಿದೆ.

ಈ ಹೊಸ ಎಸ್‌ವಿಆರ್ ರೇಂಜ್ ರೋವರ್ ಸ್ಪೋರ್ಟ್‌ನ ಟಾಪ್ ವೆರಿಯೆಂಟ್ ಆಗಿದೆ. ಈ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು ಬ್ರ್ಯಾಂಡ್‌ನ ವೆಬ್‌ಸೈಟ್ ಅಥವಾ ದೇಶಾದ್ಯಂತದ ಇರುವ ಬ್ರ್ಯಾಂಡ್‌ನ ಡೀಲರುಗಳ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯ ಭಾರತದಲ್ಲಿ ಸಿಬಿಯು(ಕಂಪ್ಲೀಟ್ಲಿ ಬಿಲ್ಟ್-ಅಪ್ ಯುನಿಟ್) ಆಗಿ ಬರುತ್ತದೆ. ಈ ಎಸ್‍ಯುವಿಯಲ್ಲಿ 5.0 ಲೀಟರ್ ಸೂಪರ್ ಚಾರ್ಜ್ಡ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 567 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇನ್ನು ಈ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯು ಕೇವಲ 4.5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಸ್‍ಯುವಿಯು 283 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಎಸ್‌ವಿಆರ್ ಎಲೆಕ್ಟ್ರಾನಿಕ್ ಏರ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಈ ಏರ್ ಸಸ್ಪೆಂಕ್ಷನ್ ಆಯಾ ಡ್ರೈವಿಂಗ್ ಮೋಡ್‌ಗಳ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಎಸ್‍ಯುವಿಯಲ್ಲಿ ಕಂಫರ್ಟ್, ಗ್ರಾಸ್/ಗ್ರ್ಯಾವೆಲ್/ಸ್ನೊ, ಮಡ್, ರುಟ್ಸ್, ಸ್ಯಾಂಡ್ ಮತ್ತು ಇಕೋ ಎಂಬ ಡ್ರೈವಿಂಗ್ ಮೋಡ್ ಗಳಿವೆ,

ರೇಂಜ್ ರೋವರ್ ಸ್ಪೋರ್ಟ್‌ನ ಇತರ ಮಾದರಿಗೆ ಹೋಲಿಸಿದರೆ ಎಸ್‌ವಿಆರ್ ವೆರಿಯೆಂಟ್ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಡಿಆರ್‌ಎಲ್‌ಗಳೊಂದಿಗಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್ ಗಳು, ಬೂಟ್ ಲಿಡ್ ನಲ್ಲಿ ಕಾರ್ಬನ್ ಫೈಬರ್ ಮತ್ತು ಎಸ್‌ವಿಆರ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಇನ್ನು ಈ ಎಸ್‍ಯುವಿಯಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಬ್ಲ್ಯಾಕ್ ಕಾಂಟ್ರಸ್ಟ್ ರೂಫ್ ಅನ್ನು ಹೊಂದಿದೆ. ಎಸ್‌ವಿಆರ್ ವೆರಿಯೆಂಟ್ ಇಂಟಿರಿಯರ್ ನಲ್ಲಿಯು ಕೂಡ ಸ್ಪೋರ್ಟಿ ಥೀಮ್ ಅನ್ನು ಹೊಂದಿದೆ. ದೂರ ಪ್ರಯಾಣದಲ್ಲಿ ಉತ್ತಮ ಕಂಫರ್ಟ್ ನೀಡುವಂತಹ ಸೀಟುಗಳು ಮತು ಹಿಂಬಾಗದಲ್ಲಿ ಹೆಚ್ಚಿನ ಲೆಗ್ ರೂಂ ಅನ್ನು ಹೊಂದಿದೆ.

ಇಂಟಿರಿಯರ್ ನಲ್ಲಿ 19-ಸ್ಪೀಕರ್ ಮೆರಿಡಿಯನ್ ಸರೌಂಡ್ ಆಡಿಯೋ ಸಿಸ್ಟಂ, ಡ್ಯುಯಲ್-ಚಾನೆಲ್ ಸಬ್ ವೂಫರ್ 10-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಸಿಸ್ಟಂ, ಕ್ಕ್ಲೈಮೇಂಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಮತ್ತು 10 ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಒಳಗೊಂಡಿದೆ.

ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್(ಇಬಿಡಿ), ಎಲೆಕ್ಟ್ರಾನಿಕ್ ಟ್ರ್ಯಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ರೋಲ್ ಸ್ಟೆಬಿಲಿಟಿ ಕಂಟ್ರೋಲ್, 8 ಏರ್ ಬ್ಯಾಗ್ ಗಳು ಸೇರಿದಂತೆ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿವೆ.


Click it and Unblock the Notifications








