ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ನ್ಯೂ ಜನರೇಷನ್ ಸ್ಕೋಡಾ ಫ್ಯಾಬಿಯಾ
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಸ್ಕೋಡಾ ಕಂಪನಿಯು ತನ್ನ ನಾಲ್ಕನೇ ತಲೆಮಾರಿನ ಫ್ಯಾಬಿಯಾ ಹ್ಯಾಚ್‌ಬ್ಯಾಕ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ನಾಲ್ಕನೇ ತಲೆಮಾರಿನ ಸ್ಕೋಡಾ ಫ್ಯಾಬಿಯಾ ಕಾರು ಆಕರ್ಷಕ ವಿನ್ಯಾಸ ಮತ್ತು ಸುಧಾರಿತ ಫೀಚರ್ಸ್ ಗಳನ್ನು ಪಡೆದುಕೊಂಡಿದೆ.

ಹೊಸ ಸ್ಕೋಡಾ ಫ್ಯಾಬಿಯಾ ಕಾರು ಫೋಕ್ಸ್‌ವ್ಯಾಗನ್ ಗ್ರೂಪ್ಸ್ ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಫೋಕ್ಸ್‌ವ್ಯಾಗನ್ ಪೊಲೊ, ವರ್ಟಸ್, ನಿವಸ್ ಕೂಪೆ ಎಸ್‌ಯುವಿ, ಟಿ-ಕ್ರಾಸ್ ಮತ್ತು ಸ್ಕೋಡಾ ಕಾಮಿಕ್ ಮಾದರಿಗಳು ಕೂಡ ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಭಾರತದಲ್ಲಿ ಈ ಪ್ಲಾಟ್‌ಫಾರ್ಮ್ ಅನ್ನು ಎಂಕ್ಯೂಬಿ ಎಒ ಐಎನ್ ಎಂದು ಕರೆಯಲಾಗುತ್ತದೆ. ಹೊಸ ಫೋಕ್ಸ್‌ವ್ಯಾಗನ್ ಟೈಗಮ್ ಮತ್ತು ಸ್ಕೋಡಾ ಕುಶಾಕ್ ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಹೊಸ ಸ್ಕೋಡಾ ಫ್ಯಾಬಿಯಾ 4,108 ಎಂಎಂ ಉದ್ದ, 1,780 ಎಂಎಂ ಅಗಲ ಮತ್ತು 1,459 ಎಂಎಂ ಎತ್ತರದಲ್ಲಿದೆ, ಇದು ಹಿಂದಿನ ಮಾದರಿಗಿಂತ ಗಮನಾರ್ಹವಾಗಿ ದೊಡ್ಡದಾಗಿದೆ. ಹ್ಯಾಚ್‌ಬ್ಯಾಕ್ 380-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದು ಈಗ ಹಿಂದಿನ ಮಾದರಿಗಿಂತ 50-ಲೀಟರ್ ಹೆಚ್ಚಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಕಾರಿನ ಎರಡನೇ ಸಾಲಿನ ಸೀಟ್ ಗಳನ್ನು ಮಡಿಚಿದರೆ 1,190-ಲೀಟರ್‌ಗೆ ವಿಸ್ತರಿಸಬಹುದು. ಇನ್ನು ಈ ಕಾರಿನಲ್ಲಿ ವ್ಹೀಲ್‌ಬೇಸ್‌ನ್ನು 94 ಎಂಎಂ ನಿಂದ 2,564 ಎಂಎಂಗೆ ಹೆಚ್ಚಿಸಲಾಗಿದೆ. ಸ್ಕೋಡಾ ಫ್ಯಾಬಿಯಾವನ್ನು ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ 3 ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ನಾಲ್ಕನೇ ತಲೆಮಾರಿನ ಸ್ಕೋಡಾ ಫ್ಯಾಬಿಯಾ ಕಾರು ಹೊಸ ಮತ್ತು ಹೆಚ್ಚು ಆಧುನಿಕ ವಿನ್ಯಾಸದೊಂದಿಗೆ ಬರುತ್ತದೆ, ಇದರಲ್ಲಿ ಬಾನೆಟ್‌ನಲ್ಲಿ ಸ್ಕಪಡ್ಡ್ ಮತ್ತು ಬಾಡಿ ಸುತ್ತಲೂ ತೀಕ್ಷ್ಣವಾದ ಕ್ರೀಸ್‌ಗಳಿವೆ. ಹ್ಯಾಚ್‌ಬ್ಯಾಕ್ ಕ್ರೋಮ್ ಔಟ್ ಲೈನ್‌ನೊಂದಿಗೆ ದೊಡ್ಡ ಸಿಗ್ನೇಚರ್ ಗ್ರಿಲ್ ಅನ್ನು ಪಡೆಯುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದು ಸಮಗ್ರ ಎಲ್-ಆಕಾರದ ಎಲ್ಇಡಿ ಡಿಆರ್ಎಲ್ ತೀಕ್ಷ್ಣವಾಗಿ ಕಾಣುವ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್ ಗಳೊಂದಿಗೆ ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಂ ಅನ್ನು ಪಡೆಯುತ್ತದೆ. ಸ್ಕೋಡಾ ಕ್ರಿಸ್ಟ್ ಲೈನ್ ಅಂಶಗಳೊಂದಿಗೆ ಎಲ್ಇಡಿ ಟೈಲ್-ಲ್ಯಾಂಪ್ ಗಳನ್ನು ಪಡೆಯುತ್ತದೆ.

ಇನ್ನು ಹೊಸ ಸ್ಕೋಡಾ ಫ್ಯಾಬಿಯಾ ಕಾರಿನ ಒಳಭಾಗದಲ್ಲಿ ಕಾಂಟ್ರಾಸ್ಟಿಂಗ್ ಹೊಲಿಗೆ ಪಡೆಯುತ್ತದೆ. ಹೊಸ ಎಲ್ಇಡಿ ಆಂಬಿಯೆಂಟ್ ಲೈಟಿಂಗ್ ಡ್ರೈವರ್‌ಗೆ ಡ್ಯಾಶ್‌ಬೋರ್ಡ್‌ನಲ್ಲಿ ಅಲಂಕಾರಿಕ ಟ್ರಿಮ್ ಅನ್ನು ಹೊಂದಿದೆ. ಆಂಬಿಯೆಂಟ್ ಲೈಟಿಂಗ್ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್ಇಡಿ ರೀಡಿಂಗ್ ಲ್ಯಾಂಪ್ ಗಳನ್ನು ಒಳಗೊಂಡಿದೆ.
MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಇದು ಡಿಎಸ್‌ಜಿಗೆ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಹೊಸ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ. ಸ್ಟೀಯರಿಂಗ್ ವ್ಹೀಲ್ ಮತ್ತು ಹೀಟಡ್ ವಿಂಡ್‌ಸ್ಕ್ರೀನ್ ಅನ್ನು ಸಹ ಹೊಂದಿದೆ. ಹೊಸ ಫ್ಯಾಬಿಯಾ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಪಡೆಯುತ್ತದೆ.

ಹೊಸ ಸ್ಕೋಡಾ ಫ್ಯಾಬಿಯಾ ಕಾರಿನಲ್ಲಿ 5 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.0-ಲೀಟರ್, 3-ಸಿಲಿಂಡರ್ ಎಂಪಿಐ ಇವಿಒ ಎಂಜಿನ್ ಅನ್ನು ಪಡೆಯುತ್ತದೆ, ಈ ಎಂಜಿನ್ ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಇದು 64 ಬಿಹೆಚ್‌ಪಿ ಮತ್ತು 79 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸಲಾಗುತ್ತದೆ.

ಇನ್ನು 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಕೂಡ 94 ಬಿಹೆಚ್‌ಪಿ ಮತ್ತು 109 ಬಿಹೆಚ್‌ಪಿ ನಂತೆ ಎರಡು ರೀತಿಯಲ್ಲಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ

ಈ ಎಂಜಿನ್ 148 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಎಸಿಟಿ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಇನ್ನು ಹೊಸ ಸ್ಕೋಡಾ ಫ್ಯಾಬಿಯಾ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಅಸಿಸ್ಟ್, ಹ್ಯಾಂಡ್ಸ್-ಆನ್ ಡಿಟೆಕ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಟ್, ಪಾರ್ಕ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಮತ್ತು ಇತರ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿದೆ.


Click it and Unblock the Notifications








