ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಸ್ಕೋಡಾ ತನ್ನ ಬಹುನಿರೀಕ್ಷಿತ 2021ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ (Skoda Kodiaq facelift) ಎಸ್‍ಯುವಿಯು ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಸ್ಕೋಡಾ ಕಂಪನಿಯು ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಲಾಯಿತು ಮತ್ತು ಕಳೆದ 5 ವರ್ಷಗಳಲ್ಲಿ ಪ್ರಪಂಚದಾದ್ಯಂತ 6 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಇದೀಗ ಈ ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲೇ ಬಿಡುಗಡೆಯಾಗಬಹುದು ಎಂವ ವದಂತಿಗಳಿತ್ತು. ಇದೀಗ ಸ್ಕೋಡಾ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಜ್ಯಾಕ್ ಹೊಲಿಸ್ ಅವರು ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು 2022ರ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಬಹಿರಂಗಪಡಿಸಿದ್ದಾರೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಇನ್ನು ಸ್ಕೋಡಾ ಕಂಪನಿಯು ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಈ ಎಸ್‍ಯುವಿಯ ಉತ್ಪಾದನೆಯನ್ನು ಆರಂಭಿಸಲಿದೆ ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಪರಿಷ್ಕೃತ ಗ್ರಿಲ್ ಅನ್ನು ಹೊಂದಿದೆ. ಇದು ಹೆಚ್ಚು ನೇರವಾದ ಪ್ರೊಫೈಲ್ ನೀಡುತ್ತದೆ. ಗ್ರಿಲ್ ಅನ್ನು ಸ್ಲಿಮ್ಮರ್ ಹೆಡ್‌ಲ್ಯಾಂಪ್ ಯುನಿಟ್ ನಿಂದ ಸುತ್ತುವರಿಯಲಾಗುತ್ತದೆ. ಈ ಯುನಿಟ್ ಅಡಿಯಲ್ಲಿ ಪ್ರತ್ಯೇಕ ಎಲ್ಇಡಿ ಮಾಡ್ಯೂಲ್ ಅನ್ನು ಹೊಂದಿದೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಇದರ ಹೊಸ ಹೆಡ್‌ಲ್ಯಾಂಪ್ ಸೆಟಪ್ ಹೊಸ ಫೋರ್-ಹೈಡ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿ ಕ್ರಿಸ್ಟಲ್ ಎಫೆಕ್ಟ್ ಹೊಂದಿರುವ ಎಲ್ಇಡಿ ಟೈಲ್-ಲ್ಯಾಂಪ್ ಗಳನ್ನು ಕೂಡ ಪಡೆಯುತ್ತದೆ.ಇನ್ನು ಈ ಹೊಸ ಕೊಡಿಯಾಕ್ ಎಸ್‍ಯುವಿಯು ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಈ ಹೊಸ ಎಸ್‍ಯುವಿಯಲ್ಲಿ 20 ಇಂಚಿನ ಹೊಸ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ. ಗ್ಲೋಸ್ ಬ್ಲ್ಯಾಕ್‌ನಲ್ಲಿ ಹೊಸ ರಿಯರ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ, ಇದು ಬ್ರೇಕ್ ಲೈಟ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. 2021ರ ಕೊಡಿಯಾಕ್ ಮಾದರಿಯ ಕ್ಯಾಬಿನ್ ಒಳಗೆ ಹೊಸ ಅಲಂಕಾರಿಕ ಸ್ಟ್ರೀಪ್ ಗಳನ್ನು ಪಡೆಯುತ್ತದೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಈ ಎಸ್‍ಯುವಿ ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್‌ಗಳಲ್ಲಿ ಸ್ಟ್ರೀಚಿಂಗ್ ಅನ್ನು ಕೂಡ ಪಡೆಯುತ್ತದೆ. ಕೊಡಿಯಾಕ್ ಮಾದರಿಯು 7-ಸೀಟರ್ ಮಾದರಿಯಾಗಿದೆ. ಇದರಲ್ಲಿ ವೆಂಟಿಲೆಟಡ್ ಸೀಟುಗಳು ಸೇರಿದಂತೆ ಮಸಾಜ್ ಫಂಕ್ಷನ್ ಅನ್ನು ಹೊಂದಿದೆ. ಇದು ದೂರ ಪ್ರಯಾಣಗಳಲ್ಲಿ ಮಾಡುವಾಗ ಹೆಚ್ಚು ಸಹಕಾರಿಯಾಗುವ ಕೂಲ್ ಫೀಚರ್ ಇದಾಗಿದೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಇನ್ನು ಮೊದಲ ಬಾರಿಗೆ ಕೊಡಿಯಾಕ್ ಮಲ್ಟಿ-ವೇ ಎಲೆಕ್ಟ್ರಿಕ್ ಸೀಟ್ ಹೊಂದಾಣಿಕೆಯ ಜೊತೆ ಮಸಾಜ್ ಫಂಕ್ಷನ್ ಪಡೆದುಕೊಂಡಿದೆ. ಕ್ಯಾಂಟನ್ ಸೌಂಡ್ ಸಿಸ್ಟಂ ಮತ್ತು ಈಗ ಹತ್ತು ಸ್ಪೀಕರ್‌ಗಳನ್ನು ನೀಡುತ್ತದೆ. ಈ ಎಸ್‍ಯುವಿಯಲ್ಲಿ ವರ್ಚುವಲ್ ಕಾಕ್‌ಪಿಟ್‌ನಲ್ಲಿ 10.25-ಇಂಚಿನ ಡಿಸ್ ಪ್ಲೇ ಮತ್ತು ಇದು ನಾಲ್ಕು ವಿಭಿನ್ನ ವಿನ್ಯಾಸಗಳಿವೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಟಾಪ್-ಆಫ್-ಲೈನ್ ಸ್ಕೋಡಾ ಕೊಡಿಯಾಕ್ ಆರ್‌ಎಸ್ ರೂಪಾಂತರದಲ್ಲಿ ಹೊಸ 2.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 245 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಹಿಂದಿನ ಬಿಟುರ್ಬೊ ಡೀಸೆಲ್ ಎಂಜಿನ್ ಗಿಂತ 5 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಟಿಡಿಐ ಎಂಜಿನ್ ಗಿಂತ 60 ಕೆಜಿಗಿಂತ ಹೆಚ್ಚು ಹಗುರವಾಗಿದೆ. ಇನ್ನು ಇತರ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳು ಕೂಡ ಲಭ್ಯವಿದೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಇದರಲ್ಲಿ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ 190 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು 2.0-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಕೂಡ ಹೊಂದಿರಲಿದೆ. ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರೊಂದಿಗೆ 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಹೊಂದಿರುತ್ತದೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಸ್ಕೋಡಾ ತನ್ನ ಬಹುನಿರೀಕ್ಷಿತ ಸ್ಲಾವಿಯಾ ಸೆಡಾನ್ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಸ್ಕೋಡಾ ತನ್ನ ಸ್ಲಾವಿಯಾ ಸೆಡಾನ್ ಕಾರಿನ ಚಿತ್ರವನ್ನು ಅಧಿಕೃತವಾಗಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ವರ್ಷಾಂತ್ಯದಲ್ಲಿ ಅನಾವರಣಗೊಳಿಸಲು ನಿರ್ಧರಿಸಲಾಗಿರುವ ಹೊಸ ಸ್ಲಾವಿಯಾ ಸೆಡಾನ್ ಹೋಂಡಾ ಸಿಟಿ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಫೋಕ್ಸ್‌ವ್ಯಾಗನ್ ಗ್ರೂಪ್‌ನ ಇಂಡಿಯಾ ಪ್ಲಾನ್ 2.0 ಅಡಿಯಲ್ಲಿ ಇದು ಬ್ರಾಂಡ್‌ನ ಎರಡನೇ ಮಾದರಿಯಾಗಿದೆ, ಇದು ಹೊಸ ಹೂಡಿಕೆ ಮತ್ತು ಉತ್ಪನ್ನಗಳ ಶ್ರೇಣಿಯನ್ನು ತರುತ್ತದೆ. ರ‍್ಯಾಪಿಡ್ ಸೆಡಾನ್ ಅನ್ನು ಬದಲಿಸಲು, ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಹೆಚ್ಚು ಸ್ಥಳೀಕರಿಸಿದ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರ್ಮ್ ವಿವಿಧ ದೇಹದ ಶೈಲಿಗಳು ಮತ್ತು ಎಂಜಿನ್ ಆಯ್ಕೆಗಳನ್ನು ಸರಿಹೊಂದಿಸಲು ಸಾಕಷ್ಟು ಬಹುಮುಖವಾಗಿದೆ.

ಹೊಸ Skoda Kodiaq ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಈ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಹೊಂದಿರಲಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಈ ಎಸ್‍ಯುವಿಯು ಮಾದರಿಯು ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‌ಯುವಿಗಳಲ್ಲಿ ಕೂಡ ಒಂದಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
New skoda kodiaq facelift suv india launch to be january 2022 details
Story first published: Wednesday, October 13, 2021, 14:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X