ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ
ಸ್ಕೋಡಾ ಕಂಪನಿಯು ತನ್ನ 2021ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಹಲವಾರು ಕಾಸ್ಮೆಟಿಕ್ ವಿನ್ಯಾಸ ಬದಲಾವಣೆಗಳನ್ನು ಪಡೆದುಕೊಂಡಿದೆ.

ಸ್ಕೋಡಾ ಕಂಪನಿಯು ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಲಾಯಿತು ಮತ್ತು ಕಳೆದ 5 ವರ್ಷಗಳಲ್ಲಿ ಪ್ರಪಂಚದಾದ್ಯಂತ 6 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಇದೀಗ ಈ ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು 2021ರ ಮೂರನೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಎಂದು ಸೋಡಿಯಾ ಮೀಡಿಯಾದಲ್ಲಿ ಸ್ಕೋಡಾ ಆಟೋ ಇಂಡಿಯಾದ ನಿರ್ದೇಶಕ ಝ್ಯಾಕ್ ಲಿಸ್ ಅವರು ಪೋಸ್ಟ್ ಮಾಡಿದ್ದಾರೆ.

ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಪರಿಷ್ಕೃತ ಗ್ರಿಲ್ ಅನ್ನು ಹೊಂದಿದೆ. ಇದು ಹೆಚ್ಚು ನೇರವಾದ ಪ್ರೊಫೈಲ್ ನೀಡುತ್ತದೆ. ಗ್ರಿಲ್ ಅನ್ನು ಸ್ಲಿಮ್ಮರ್ ಹೆಡ್‌ಲ್ಯಾಂಪ್ ಯುನಿಟ್ ನಿಂದ ಸುತ್ತುವರಿಯಲಾಗುತ್ತದೆ. ಈ ಯುನಿಟ್ ಅಡಿಯಲ್ಲಿ ಪ್ರತ್ಯೇಕ ಎಲ್ಇಡಿ ಮಾಡ್ಯೂಲ್ ಇದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಹೆಡ್‌ಲ್ಯಾಂಪ್ ಸೆಟಪ್ ಹೊಸ ಫೋರ್-ಹೈಡ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿ ಕ್ರಿಸ್ಟಲ್ ಎಫೆಕ್ಟ್ ಹೊಂದಿರುವ ಎಲ್ಇಡಿ ಟೈಲ್-ಲ್ಯಾಂಪ್ ಗಳನ್ನು ಕೂಡ ಪಡೆಯುತ್ತದೆ.ಇನ್ನು ಈ ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.

ಹೊಸ ಈ ಎಸ್‍ಯುವಿಯಲ್ಲಿ 20 ಇಂಚಿನ ಹೊಸ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ. ಗ್ಲೋಸ್ ಬ್ಲ್ಯಾಕ್‌ನಲ್ಲಿ ಹೊಸ ರಿಯರ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ, ಇದು ಬ್ರೇಕ್ ಲೈಟ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. 2021ರ ಕೊಡಿಯಾಕ್ ಮಾದರಿಯ ಕ್ಯಾಬಿನ್ ಒಳಗೆ ಹೊಸ ಅಲಂಕಾರಿಕ ಸ್ಟ್ರೀಪ್ ಗಳನ್ನು ಪಡೆಯುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದರ ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್‌ಗಳಲ್ಲಿ ಸ್ಟ್ರೀಚಿಂಗ್ ಅನ್ನು ಕೂಡ ಪಡೆಯುತ್ತದೆ. ಕೊಡಿಯಾಕ್ ಮಾದರಿಯು 7-ಸೀಟರ್ ಮಾದರಿಯಾಗಿದೆ. ಇದರಲ್ಲಿ ವೆಂಟಿಲೆಟಡ್ ಸೀಟುಗಳು ಸೇರಿದಂತೆ ಮಸಾಜ್ ಫಂಕ್ಷನ್ ಅನ್ನು ಹೊಂದಿದೆ. ಇದು ದೂರ ಪ್ರಯಾಣಗಳಲ್ಲಿ ಮಾಡುವಾಗ ಹೆಚ್ಚು ಸಹಕಾರಿಯಾಗುವ ಕೂಲ್ ಫೀಚರ್ ಇದಾಗಿದೆ.

ಮೊದಲ ಬಾರಿಗೆ ಕೊಡಿಯಾಕ್ ಮಲ್ಟಿ-ವೇ ಎಲೆಕ್ಟ್ರಿಕ್ ಸೀಟ್ ಹೊಂದಾಣಿಕೆಯ ಜೊತೆ ಮಸಾಜ್ ಫಂಕ್ಷನ್ ಪಡೆದುಕೊಂಡಿದೆ. ಕ್ಯಾಂಟನ್ ಸೌಂಡ್ ಸಿಸ್ಟಂ ಮತ್ತು ಈಗ ಹತ್ತು ಸ್ಪೀಕರ್‌ಗಳನ್ನು ನೀಡುತ್ತದೆ. ಈ ಎಸ್‍ಯುವಿಯಲ್ಲಿ ವರ್ಚುವಲ್ ಕಾಕ್‌ಪಿಟ್‌ನಲ್ಲಿ 10.25-ಇಂಚಿನ ಡಿಸ್ ಪ್ಲೇ ಮತ್ತು ಇದು ನಾಲ್ಕು ವಿಭಿನ್ನ ವಿನ್ಯಾಸಗಳಿವೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಟಾಪ್-ಆಫ್-ಲೈನ್ ಸ್ಕೋಡಾ ಕೊಡಿಯಾಕ್ ಆರ್‌ಎಸ್ ರೂಪಾಂತರದಲ್ಲಿ ಹೊಸ 2.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 245 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಹಿಂದಿನ ಬಿಟುರ್ಬೊ ಡೀಸೆಲ್ ಎಂಜಿನ್ ಗಿಂತ 5 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಟಿಡಿಐ ಎಂಜಿನ್ ಗಿಂತ 60 ಕೆಜಿಗಿಂತ ಹೆಚ್ಚು ಹಗುರವಾಗಿದೆ.

ಇನ್ನು ಇತರ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳು ಕೂಡ ಲಭ್ಯವಿದೆ. ಇದರಲ್ಲಿ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 190 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ, ಇನ್ನು 2.0-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಕೂಡ ಹೊಂದಿರಲಿದೆ.

ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಕೊಡಿಯಾಕ್ ಎಸ್‍ಯುವಿಯಲ್ಲಿ 2.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 190 ಬಿಹೆಚ್ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಹೊಂದಿರುತ್ತದೆ.

ಈ ಕೊಡಿಯಾಕ್ ಎಸ್‍ಯುವಿಯು ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಹೊಂದಿರಲಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಮಾದರಿಯು ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‌ಯುವಿಗಳಲ್ಲಿ ಒಂದಾಗಿದೆ.


Click it and Unblock the Notifications