ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು

ಸ್ಕೋಡಾ ಕಂಪನಿಯು ತನ್ನ ಆಕ್ಟೀವಿಯಾ ಸೆಡಾನ್‌ನ ಪ್ರೊ (ಲಾಂಗ್-ವ್ಹೀಲ್-‌ಬೇಸ್) ಆವೃತ್ತಿಯನ್ನು ಚೀನಾ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಆವೃತ್ತಿಯು ಚೀನಾ ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಲಭ್ಯವಾಗಲಿದೆ. ಈ ಆವೃತ್ತಿಯು ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಮಾದರಿಗೆ ಹೋಲುತ್ತದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಪ್ರೊ (ಲಾಂಗ್-ವ್ಹೀಲ್-‌ಬೇಸ್) ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ ಅದೇ ಹೆಡ್‌ಲ್ಯಾಂಪ್‌ಗಳು, ಫ್ರಂಟ್ ಗ್ರಿಲ್, ಟೈಲ್‌ಲೈಟ್‌ಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ, ಕೆಲವು ಸ್ಟೈಲಿಂಗ್ ಅಂಶಗಳು ಸ್ಪೋರ್ಟಿ ಆಕ್ಟೀವಿಯಾ ಆರ್‍ಎಸ್ ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಇನ್ನು ಮುಂಭಾಗ ಮತ್ತು ಹಿಂಭಾಗದ ಬಂಪರ್ ಬ್ಲ್ಯಾಕ್ಡ್ ಔಟ್ ಆಗಿದೆ. ಬ್ಲ್ಯಾಕ್ ಒಆರ್ವಿಎಂ ಕ್ಯಾಪ್ ಮತ್ತು 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ಈ ಅಂಶಗಳು ಕಾರಿಗೆ ಸ್ಪೋರ್ಟಿ ಲುಕ್ ಅನ್ನು ನೀಡಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು 2,730 ಎಂಎಂ ಉದ್ದದ ವ್ಹೀಲ್‌ಬೇಸ್ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಕಾರ್‌ಗಿಂತ 44 ಎಂಎಂ ಉದ್ದ ಹೆಚ್ಚಿದೆ. ಉದ್ದದ ವ್ಹೀಲ್‌ಬೇಸ್‌ನ ದೊಡ್ಡ ಅನುಕೂಲವೆಂದರೆ ಹಿಂಭಾಗದ ಪ್ರಯಾಣಿಕರಿಗೆ ಉತ್ತಮ ಲೆಗ್ ರೂಂ ಲಭ್ಯವಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು

ಇನ್ನು ಈ ಹೊಸ ಕಾರಿನ ಇಂಟಿರಿಯರ್ ನಲ್ಲಿ 12 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಿದೆ. ಇನ್ನು ಮುಂಭಾಗದ ಸೀಟುಗಳು ವೆಂಟಿಲೆಟಡ್ ಜೊತೆಗೆ ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುದಾಗಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರಿನಲ್ಲಿ 10.25-ಇಂಚಿನ ಫುಲ್ ಡಿಜಿಟಲ್ ಕನ್ಸೋಲ್ ಮತ್ತು ಹೆಡ್-ಅಪ್ ಡಿಸ್ ಪ್ಲೇ ಗಳನ್ನು ಒಳಗೊಂಡಿದೆ. ಇನ್ನು ಈ ಕಾರಿನಲ್ಲಿ 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು

ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಡಬ್ಲ್ಯೂನ ಶಿಫ್ಟ್-ಬೈ-ವೈರ್ ತಂತ್ರಜ್ಙಾನದೊಂದದಿಗೆ 7-ಸ್ಪೀಡ್ ಡಿಎಸ್ಜಿಯನ್ನು ಜೋಡಿಸಲಾಗುತ್ತದೆ. ಕುತೂಹಲಕಾರಿ ವಿಷಯವೆಂದರೆ, ಸ್ಕೋಡಾ ಚೀನಾದ ಮಾರುಕಟ್ಟೆಯಲ್ಲಿ ಹೊಸ ಮಾದರಿಯೊಂದಿಗೆ ಮೂರನೇ ತಲೆಮಾರಿನ ಆಕ್ಟೀವಿಯಾವನ್ನು ಮಾರಾಟ ಮಾಡುವುದನ್ನು ಮುಂದುವರಿಸುತ್ತದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಇಂಡಿಯಾ ಕಂಪನಿಯು ಹೊಸ ತಲೆಮಾರಿನ ಆಕ್ಟೀವಿಯಾ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಯುರೋಪ್ ಮಾರುಕಟ್ಟೆಗಳಲ್ಲಿ ಈಗಾಗಲೇ ಈ ಹೊಸ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರು ಮಾರಾಟವಾಗುತ್ತಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು

ಹಿಂದಿನ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರನ್ನು 2013ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿದ್ದರು. ಈ ಕಾರು ಉತ್ತಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ಆದರೆ ಸ್ಕೋಡಾ ಕಂಪನಿಯು ಈ ಆಕ್ಟೀವಿಯಾ ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ. ಆದರೆ ಕಳೆದ ವರ್ಷದ ಕೊನೆಯಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಆಕ್ಟೀವಿಯಾ ಕಾರನ್ನು ಬಿಡುಗಡೆಗೊಳಿಸಬೇಕಿತ್ತು.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು

ಆದರೆ ಸ್ಕೋಡಾ ಕಂಪನಿಯು ಈ ಕಾರಿನ ಬಿಡುಗಡೆಯನ್ನು ಈ ವರ್ಷಕ್ಕೆ ಮುಂದೂಡಿದರು. ಈ ಹೊಸ ಆಕ್ಟೀವಿಯಾ ಕಾರನ್ನು ಈ ವರ್ಷದ ಮಧ್ಯಂತರ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ಸ್ಕೋಡಾ ಕಂಪನಿಯು ಹೇಳಿದೆ. ಸ್ಕೋಡಾ ಕಂಪನಿಯು ಹೊಸ ತಲೆಮಾರಿನ ಆಕ್ಟೀವಿಯಾ ಕಾರನ್ನು ಈ ವರ್ಷದ ಜೂನ್ ತಿಂಗಳಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಸ್ಕೋಡಾ skoda
English summary
2021 Skoda Octavia Pro (Long Wheelbase Model) Unveiled. Raed In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X