ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ಸ್ಕೋಡಾ ಕಂಪನಿಯು ತನ್ನ ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸ್ಕೋಡಾ ಕಂಪನಿಯು ಔರಂಗಾಬಾದ್‌ನ ಘಟಕದಲ್ಲಿ ತನ್ನ ಆಕ್ಟೀವಿಯಾ ಕಾರಿನ ಉತ್ಪಾದನೆಯನ್ನು ಈಗಗಾಲೇ ಪ್ರಾರಂಭಿಸಿದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ಇನ್ನು ಸ್ಕೋಡಾ ಆಕ್ಟೀವಿಯಾದ ಹಿಂದಿನ ತಲೆಮಾರಿನಕಾರನ್ನು 2013ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿದ್ದರು. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯೊಂದಿಗೆ ಉತ್ತಮ ಮಾರಾಟವನ್ನು ಕಂಡಿತ್ತು. ಆದರೆ ಸ್ಕೋಡಾ ಕಂಪನಿಯು ಈ ಆಕ್ಟೀವಿಯಾ ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿತಿಲ್ಲ. ಕಳೆದ ವರ್ಷದಲ್ಲೇ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಆಕ್ಟೀವಿಯಾ ಕಾರನ್ನು ಬಿಡುಗಡೆಗೊಳಿಸಬೇಕಿತ್ತು.

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ಆದರೆ ಸ್ಕೋಡಾ ಕಂಪನಿಯು ಈ ಕಾರಿನ ಬಿಡುಗಡೆಯನ್ನು ಈ ವರ್ಷಕ್ಕೆ ಮುಂದೂಡಿದರು. ಇದೀಗ ಈ ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಇದರ ಸೈ ಚಿತ್ರಗಳು ಬಹಿರಂಗವಾಗಿವೆ. ಇದರಿಂದ ಈ ಹೊಸ ಆಕ್ಟೀವಿಯಾ ಕಾರು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ನಾಲ್ಕನೇ ತಲೆಮಾರಿ ಸ್ಕೋಡಾ ಆಕ್ಟೀವಿಯಾ ಕಾರು ಹಲವು ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಸ್ಕೋಡಾ ಆಕ್ಟೀವಿಯಾ ಕಾರಿನ ಹಿಂದಿನ ಮಾದರಿಗೆ ಹೋಲಿಸಿದರೆ ನಯವಾದ ವಿನ್ಯಾಸವನ್ನು ಹೊಂದಿದೆ. ಈ ಹೊಸ ಕಾರಿನ ಗ್ರೀಲ್ ಅಗಲವಾಗಿ ಮತ್ತು ಅಗ್ರೇಸಿವ್ ಆಗಿದೆ. ಮುಂಭಾಗದ ಬಂಪರ್ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ಇನ್ನು ಮುಂಭಾಗದಲ್ಲಿ ವಿಶಾಲವಾದ ಏರ್ ಡ್ಯಾಮ್ ಜೊತೆಗೆ ಸಮತಲವಾದ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಎರಡೂ ಬದಿಗಳಲ್ಲಿ ಇರಿಸಲಾಗಿದ್ದು, ಎರಡು ಯುನಿಟ್ ಗಳನ್ನು ಕನೆಕ್ಟ್ ಮಾಡುವ ತೆಳುವಾದ ಕ್ರೋಮ್ ಸ್ಟ್ರಿಪ್ ಇದೆ. ಇದು ಕಂಪನಿಯ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲೈಟ್ ಅನ್ನು ಕೂಡ ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ಹಿಂಭಾಗದಲ್ಲಿ ಅಗ್ರೇಸಿವ್ ಆಗಿ ಕಾಣುವ ಬೂಟ್ ಲಿಡ್ ಅನ್ನು ಹೊಂದಿದೆ. ಇನ್ನು ಹೊಸ ದಪ್ಪ ಅಕ್ಷರಗಳಲ್ಲಿ ಬೂಟ್ ಲಿಡ್ ಉದ್ದಕ್ಕೆ ಸ್ಕೋಡಾ ಎಂದು ಬರೆಯಲಾಗಿದೆ. ಈ ಸೆಡಾನ್ ಹೊಸ ಅಲಾಯ್ ವೀಲ್ ವಿನ್ಯಾಸವನ್ನು ಸಹ ಪಡೆಯುತ್ತದೆ, ಇದು ಬಹಳ ಆಕರ್ಷಕವಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಒಳಭಾಗದಲ್ಲಿ ಹೊಸ ಕ್ಯಾಬಿನ್ ವಿನ್ಯಾಸವನ್ನು ಪಡೆಯುತ್ತದೆ. ಆಡಿಯೋ ಮತ್ತು ಇತರ ಕಾರ್ಯಗಳಿಗಾಗಿ ಮೌಂಟಡ್ ಕಂಟ್ರೋಲ್ ಗಳೊಂದಿಗೆ ಹೊಸ ಎರಡು-ಸ್ಪೋಕ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ಇನ್ನು ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಈಗ ಬ್ರ್ಯಾಂಡ್‌ನ ಕಾಕ್‌ಪಿಟ್ ವಿನ್ಯಾಸವನ್ನು ಒಳಗೊಂಡ 10.25-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಗಾಗಿ ಸೆಡಾನ್ ಮತ್ತೊಂದು 10.25-ಇಂಚಿನ ಡಿಸ್ ಪ್ಲೇಯನ್ನು ಕೂಡ ಹೊಂದಿರಲಿದೆ.

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ ವಿಡಬ್ಲ್ಯೂ ಗ್ರೂಪ್‌ನ 2.0 ಎಲ್ ಟಿಎಸ್‌ಐ ಟರ್ಬೋಚಾರ್ಜ್ಡ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರಲಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ಇನ್ನು ಈ ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ 1.5-ಲೀಟರ್ ಟಿಎಸ್ಐ, ನಾಲ್ಕು ಸಿಲಿಂಡರ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 148 ಬಿಹೆಚ್‌ಪಿ ಪವರ್ ಮತ್ತು 320 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ,

ಡೀಲರ್ ಬಳಿ ಕಾಣಿಸಿಕೊಂಡ 2021ರ ಸ್ಕೋಡಾ ಆಕ್ಟೀವಿಯಾ ಕಾರು

ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಉತ್ತಮ ಕಾರ್ಯಕ್ಷಮತೆಯನ್ನು ಸೆಡಾನ್ ಆಗಿರಲಿದೆ. ಇದರಿಂದ ಹೊಸ ಆಕ್ಟೀವಿಯಾ ಪರ್ಫಾಮೆನ್ಸ್ ಕಾರು ಪ್ರಿಯರನ್ನು ಕೂಡ ಸೆಳೆಯಬಹುದು. ಇನ್ನು ಯುರೋ ಎನ್‍‍‍ಸಿ‍ಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ಕೋಡಾ ಆಕ್ಟೀವಾ ಸಂಪೂರ್ಣ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದರಿಂದ ಈ ಸೆಡಾನ್ ಉತ್ತಮ ಪರ್ಫಾಮೆನ್ಸ್ ಜೊತೆಗೆ ಹೆಚ್ಚಿನ ಸುರಕ್ಷತೆಯನ್ನು ಹೊಂದಿರುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
You Can Soon See The 2021 Octavia At Your Nearest Skoda Dealer. Read In Kannada.
Story first published: Monday, April 12, 2021, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X