ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ತನ್ನ ರ‍್ಯಾಪಿಡ್ ಮ್ಯಾಟ್ ಎಡಿಷನ್( Skoda Rapid Matte) ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಕಳೆದ ವರ್ಷದ ಆಟೋ ಎಕ್ಸ್‌ಪೋದಲ್ಲಿ ರ‍್ಯಾಪಿಡ್ ಮ್ಯಾಟ್ ಎಡಿಷನ್ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿದ್ದರು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಇದನ್ನು ಉತ್ಪಾದನೆ-ಸಿದ್ಧ ಆವೃತ್ತಿಗೆ ಹೋಲಿಸಿದರೆ ಕೆಲವು ಕಾಸ್ನೆಟಿಕ್ ಬದಲಾವಣೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಬೆಲೆಯ ವಿಷಯದಲ್ಲಿ, ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಎಡಿಶನ್ ರೇಂಜ್-ಟಾಪಿಂಗ್ ಸ್ಟೈಲ್ ಟ್ರಿಮ್ ಮೇಲೆ ಸುಮಾರು ರೂ.50,000 ವರೆಗೂ ಹೆಚ್ಚಿರಬಹುದು. ಈ ಹೊಸ ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಎಡಿಷನ್ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈ ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಎಡಿಶನ್ ಬ್ರಾಂಡ್‌ನ ಮೊದಲ ಫ್ಯಾಕ್ಟರಿ ಬಣ್ಣ ಹೊಂದಿರುವ ಮ್ಯಾಟ್ ಬಣ್ಣದ ಮಾದರಿಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಈ ಕಾನ್ಸೆಪ್ಟ್ ನಂತೆಯೇ ಅಂತಿಮ ಮಾದರಿಯು ಮುಂಭಾಗದ ಗ್ರಿಲ್ ಮತ್ತು ಒಆರ್‌ವಿಎಮ್‌ಗಳಲ್ಲಿ ಕಪ್ಪು ಇನ್ ಸರ್ಟ್ಸ್ ಮತ್ತು ಫಾಂಗಿ ಹೆಡ್‌ಲ್ಯಾಂಪ್‌ಗಳು ಮತ್ತು ಫಾಂಗ್ ಲ್ಯಾಂಪ್ ಗಳನ್ನು ಹೊಂದಿರುತ್ತದೆ. ಇನ್ನು ಇದರೊಂದಿಗೆ ಬ್ರೇಕ್ ಕ್ಯಾಲಿಪರ್ಸ್, ಮಿರರ್ ಕ್ಯಾಪ್ಸ್, ಸೈಡ್ ಮೋಲ್ಡಿಂಗ್, ರಿಯರ್ ಡಿಫ್ಯೂಸರ್ ಮತ್ತು ಟ್ರಂಕ್ ಲಿಡ್ ಸ್ಪಾಯ್ಲರ್ ಮೇಲೆ ಕೆಂಪು ಬಣ್ಣದ ಹೈಲೆಟ್ ಗಳನ್ನು ಹೊಂದಿದ್ದು, ಅದು ಅದಕ್ಕೆ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಇನ್ನು ಸಾಮಾನ್ಯ ಮಾದರಿಯಿಂದ ಇದನ್ನು ಮತ್ತಷ್ಟು ಪ್ರತ್ಯೇಕಿಸುವುದು ಬ್ಲ್ಯಾಕ್-ಔಟ್, ಹೊಸದಾಗಿ ವಿನ್ಯಾಸಗೊಳಿಸಿದ 17 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು 'ರಾಪಿಡ್' ಬ್ಯಾಡ್ಜ್‌ನೊಂದಿಗೆ ಸ್ಟೇನ್ಲೆಸ್-ಸ್ಟೀಲ್ ಸ್ಕಫ್ ಪ್ಲೇಟ್‌ಗಳನ್ನು ಒಳಗೊಂಡಿವೆ.ಈ ಹೊಸ ರ‍್ಯಾಪಿಡ್ ಮ್ಯಾಟ್ ಎಡಿಷನ್ ಟೆಲ್ಯುಲರ್ ಗ್ರೇ ಇಂಟಿರಿಯರ್ ಥೀಮ್ ಪ್ರೀಮಿಯಂ ಬ್ಲಾಕ್ ಅಲ್ಕಾಂಟರಾ ಸೀಟ್ ಕವರ್‌ಗಳನ್ನು ಕಾನ್ಸೆಪ್ಟ್ ಮಾದರಿಯಿಂದ ಉಳಿಸಿಕೊಳ್ಳಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಇದು ಲೆದರ್ ಸುತ್ತಿದ ಸ್ಟೀಯರಿಂಗ್ ವ್ಹೀಲ್ ಮತ್ತು ಗೇರ್‌ಶಿಫ್ಟ್‌ನೊಂದಿಗೆ ಬರುತ್ತದೆ. ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಹೊಸ ರ‍್ಯಾಪಿಡ್ ಮ್ಯಾಟ್ ಎಡಿಶನ್ ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಆಟೋಮ್ಯಾಟಿಕ್ ಎಸಿ ಯುನಿಟ್, ಕ್ರೂಸ್ ಕಂಟ್ರೋಲ್, 4 ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಹಿಲ್ ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಇಬಿಡಿಯೊಂದಿಗೆ ಎಬಿಎಸ್ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ರ‍್ಯಾಪಿಡ್ ಸೆಡಾನ್ ಅನ್ನು ಬದಲಾಯಿಸಿ ಹೊಸ ಮಿಡ್‌ಸೈಜ್ ಸೆಡಾನ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಸ್ಕೋಡಾ ಮಿಡ್ ಸೈಜ್ ಸೆಡಾನ್ ಕಾರಿಗೆ ಸ್ಲಾವಿಯಾ ಎಂಬ ಹೆಸರನ್ನು ನೀಡಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಸ್ಕೋಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರನ್ನು ಈ ವರ್ಷದ ಅಂತ್ಯದ ಮೊದಲು ಅನಾವರಣಗೊಳಿಸಿಸಲಿದೆ ಎಂದು ಹೇಳಿದೆ. ಸ್ಕೋಡಾ ಸ್ಲಾವಿಯಾ ಸೆಡಾನ್ ಮಾದರಿಯನ್ನು ಹೊಸ ವಿನ್ಯಾಸ ರೂಪದಲ್ಲಿ ಬಿಡುಗಡೆಗೊಳಿಸಲಿದೆ.ಮುಂಬರುವ ಮಿಡ್ ಸೈಜ್ ಸೆಡಾನ್‌ನ ವಿನ್ಯಾಸ ರೇಖಾಚಿತ್ರವನ್ನು ಕಂಪನಿಯು ಬಿಡುಗಡೆ ಮಾಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಮುಂಬರುವ ಸ್ಲಾವಿಯಾ ಸೆಡಾನ್ ಇಂಡಿಯನ್ 2.0 ಕಾರ್ಯತಂತ್ರದ ಅಡಿಯಲ್ಲಿ ಬಿಡುಗಡೆಯಾದ ಬ್ರಾಂಡ್‌ನ ಎರಡನೇ ಮಾದರಿಯಾಗಿದೆ. ಇದರ ಪರಿಣಾಮವಾಗಿ ಸೆಡಾನ್ ಅದೇ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಇದು ಇತ್ತೀಚೆಗೆ ಬಿಡುಗಡೆಯಾದ ಸ್ಕೋಡಾ ಕುಶಾಕ್ ಎಸ್‍ಯುವಿಗೆ ಆಧಾರವಾಗಿದೆ. ಇದರ ಒಳಭಾಗದಲ್ಲಿ ಹೆಚ್ಚಿನ ಸ್ಪೇಸ್ ಅನ್ನು ಹೊಂದಿರುತ್ತದೆ. ಇದು ಅತಿದೊಡ್ಡ ಬೂಟ್‌ಸ್ಪೇಸ್ ಮತ್ತು ವಿಭಾಗದ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ. ಸದ್ಯ ಮಾರಾಟವಾಗುತ್ತಿರುವ ರ‍್ಯಾಪಿಡ್ ಕಾರು ಪಿಕ್ಯೂ 25 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿ ಕುಸಿತವಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ರ‍್ಯಾಪಿಡ್ ಕಾರು 2011ರಲ್ಲಿ ಭಾರತದಲ್ಲಿ ಬಿಡುಗಡೆಯಾದಗಿನಿಂದ ಯಾವುದೇ ಬದಲಾಗದೆ ಉಳಿದಿವೆ. ಇನ್ನು ಹೊಸ ಸ್ಲಾವಿಯಾ ಕಾರು ವಿದೇಶದಲ್ಲಿ ಮಾರಾಟವಾಗುವ ಮಾದರಿಗಳ ಅಂಶಗಳನ್ನು ಹೊಸ ಸೆಡಾನ್ ಹೊಂದಿರುತ್ತದೆ. ಇದು ಮರುವಿನ್ಯಾಸಗೊಳಿಸಲಾದ ಬಟರ್‌ಫ್ಲೈ ಫ್ರಂಟ್ ಗ್ರಿಲ್, ಸ್ಪೋರ್ಟಿ ಫಾಗ್ ಲ್ಯಾಂಪ್‌ಗಳು ಮತ್ತು ವಿಶಾಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ತೆಳ್ಳನೆಯ ಹೆಡ್‌ಲ್ಯಾಂಪ್ ಕ್ಲಸ್ಟರ್ ಹೊಂದಿರಲಿದೆ.

ಈ ಎಂಜಿನ್ 110 ಬಿಹೆಚ್‌ಪಿಗಿಂತ ಹೆಚ್ಚು ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಈ ಹೊಸ ಸೆಡಾನ್ ಟಾಪ್-ಎಂಡ್ ರೂಪಾಂತರಗಳಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್, 6-ಸ್ಪೀಡ್ ಟಾರ್ಕ್ ಕರ್ನ್'ವಾಟರ್ ಮತ್ತು 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಆಯ್ಕೆಗಳನ್ನು ಕೂಡ ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Skoda Rapid Matte ಎಡಿಷನ್

ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಎಡಿಷನ್ ನಲ್ಲಿ ಅದೇ ಬಿಎಸ್6- ಪ್ರೇರಿತ 1.0ಎಲ್, 3-ಸಿಲಿಂಡರ್ TSI ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದ್ದು ಅದು ಸಾಮಾನ್ಯ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸುತ್ತದೆ. ಈ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಲ್ ಉತ್ಪಾದಿಸುವಂತೆ ಟ್ಯೂನ್ ಮಾಡಲಾಗಿದೆ. ಇದು ಸುಮಾರು 20 ಕಿ.ಮೀ ಮೈಲೇಜ್ ನೀಡುತ್ತದೆ, ಇದು ಅದರ ಬಿಎಸ್4 ಆವೃತ್ತಿಗಿಂತ ಶೇ.20 ರಷ್ಟು ಹೆಚ್ಚಾಗಿದೆ. ವಿಶೇಷ ಮಾದರಿಯನ್ನು 6-ಸ್ಪೀಡ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಎರಡನ್ನೂ ನೀಡಬಹುದು.

Most Read Articles

Kannada
Read more on ಸ್ಕೋಡಾ skoda
English summary
New skoda rapid matte edition launch soon details
Story first published: Saturday, September 18, 2021, 15:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X