Just In
Don't Miss!
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- News
ಬಿಟ್ ಕಾಯಿನ್ ಮೌಲ್ಯ $60,000 ನಂತೆ ಸ್ಥಿರ, ಟ್ರೇಡರ್ಸ್ಗೆ ನೆಮ್ಮದಿ
- Movies
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಕಂಗನಾ ರಣಾವತ್ ಯೂ-ಟರ್ನ್?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇಂಧನ ಬೆಲೆ ಹೆಚ್ಚಳ ಪರಿಣಾಮ ಭರ್ಜರಿ ಬೇಡಿಕೆ ಪಡೆದುಕೊಂಡ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು
ಮುಂಬೈ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಸ್ಟ್ರೋಮ್ ಮೋಟಾರ್ಸ್ ತನ್ನ ಮೊದಲ ತ್ರಿಚಕ್ರದ ಆರ್3 ಎಲೆಕ್ಟ್ರಿಕ್ ಕಾರಿನ ಖರೀದಿಗೆ ಪ್ರಿ-ಬುಕ್ಕಿಂಗ್ ಅನ್ನು ಇತ್ತೀಚೆಗೆ ಆರಂಭಿಸಿತು. ಈ ಪುಟ್ಟ ಎಲೆಕ್ಟ್ರಿಕ್ ಕಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಅಲ್ಲದೇ ಭಾರತದಲ್ಲಿ ನಿರಂತರ ಇಂಧನ ಬೆಲೆ ಏರಿಕೆಯಿಂದ ವಾಹನ ಸವಾರರು ತತ್ತರಿಸಿದ್ದಾರೆ. ಇದರಿಂದ ಹಲವರು ಎಲೆಕ್ಟ್ರಿಕ್ ಕಾರಿನ ಕಡೆ ಮುಖ ಮಾಡುತ್ತಿದಾರೆ. ಇನ್ನು ಇದರಿಂದಾಗಿ ಭಾರತೀಯರು ಇದೀಗ ಎಲೆಕ್ಟ್ರಿಕ್ ಕಾರುಗಳ ಖರೀದಿ ಬಗ್ಗೆ ಗಮನಹರಿಸಿದ್ದಾರೆ. ಇದರಿಂದಾಗಿ ಸ್ಟ್ರೋಮ್ ಆರ್3 ತ್ರಿಚಕ್ರದ ಎಲೆಕ್ಟ್ರಿಕ್ ಕಾರು ಕೇವಲ ನಾಲ್ಕು ದಿನಗಳಲ್ಲಿ ರೂ.7.5 ಕೋಟಿ ಮೌಲ್ಯದ ಆರ್ಡರ್ ಅನ್ನು ಪಡೆದುಕೊಂಡಿದೆ.

ಈ ಮಿನಿ ಎಲೆಕ್ಟ್ರಿಕ್ ಕಾರು 2020ರ ಮಾರ್ಚ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬೇಕಿತ್ತು ಎಂದು ಹೇಳಲಾಗುತ್ತಿತ್ತು, ಆದರೆ ಇದೀಗ ಮತ್ತೆ ಇದರ ಬಿಡುಗಡೆಯನ್ನು ಮುಂದೂಡಲಾಗಿದೆ. ಸ್ಟ್ರೋಮ್ ಆರ್3 ಮಿನಿ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ. 4.5 ಲಕ್ಷಗಳಾಗಿರರುತ್ತದೆ ಎಂದು ವರದಿಗಳಾಗಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಎಲೆಕ್ಟ್ರಿಕ್ ಕಾರಿಗೆ ಬೇಡಿಕೆ ಹೆಚ್ಚಾಗುವುದರಿಂದ ಇದೇ ವರ್ಷದಲ್ಲಿ ಸ್ಟ್ರೋಮ್ ಆರ್3 ಮಾದರಿಯು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಬಿಡುಗಡೆ ಮುನ್ನ ಈ ಪುಟ್ಟ ಎಲೆಕ್ಟ್ರಿಕ್ ಕಾರು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಈ ಹೊಸ ಮಿನಿ ಎಲೆಕ್ಟ್ರಿಕ್ ಕಾರು 2 ಸೀಟುಗಳು 3-ಚಕ್ರ ವಾಹನವಾಗಿದೆ. ಇನ್ನು ಈ ಸ್ಟ್ರೋಮ್ ಆರ್3 2,907 ಎಂಎಂ ಉದ್ದ, 1,450 ಎಂಎಂ ಅಗಲ ಮತ್ತು 1,572 ಎಂಎಂ ಎತ್ತರವನ್ನು ಹೊಂದಿದೆ. ಇದು ಸನ್‌ರೂಫ್ ಮತ್ತು ಹಿಂಭಾಗದ ಸ್ಪಾಯ್ಲರ್ ಅನ್ನು ಪಡೆಯುತ್ತದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಸ್ಟ್ರೋಮ್ ಆರ್3 ನಾಲ್ಕು 3-ಟೋನ್ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವರಲಿದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ 155 ಇಂಚಿನ ಟೈರ್‌ಗಳೊಂದಿಗೆ 13 ಇಂಚಿನ ವ್ಹೀಲ್ ಗಳು ಹೊಂದಿರುತ್ತದೆ. ಇದು ಮುಂಭಾಗದಲ್ಲಿ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಸ್ಟ್ಯಾಂಪ್ ಮಾಡಿದ ಸ್ಟೀಲ್ ವ್ಹೀಲ್ ಪಡೆಯುತ್ತದೆ.

ಸ್ಟ್ರೋಮ್ ಆರ್3 ಮಿನಿ ಎಲೆಕ್ಟ್ರಿಕ್ ಕಾರಿನ ಒಳಭಾಗದಲ್ಲಿ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್, 3-ಸ್ಪೋಕ್ ಸ್ಟೀರಿಂಗ್ ವ್ಹೀಲ್, 4.3-ಇಂಚಿನ ಟಚ್‌ಸ್ಕ್ರೀನ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 12-ವೇ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 7.0-ಇಂಚಿನ ಆಧಾರಿತ ಟಚ್‌ಸ್ಕ್ರೀನ್ ಹೆಡ್-ಯೂನಿಟ್ ಅನ್ನು ಪಡೆಯುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಐಒಟಿ-ಶಕ್ತಗೊಂಡ ನಿರಂತರ ಮಾನಿಟರಿಂಗ್ ಸಿಸ್ಟಮ್ ಮತ್ತು 4ಜಿ ಕನೆಕ್ಟಿವಿಟಿ, ವಾಯ್ಸ್ ಕಂಟ್ರೋಲ್, ಗೆಸ್ಚರ್ ಕಂಟ್ರೋಲ್, 20 ಜಿಬಿ ಆನ್‌ಬೋರ್ಡ್ ನ್ಯಾವಿಗೇಷನ್ ಹೊಂದಿದೆ. ಅದರ ಕೆಳಗೆ 2.4-ಇಂಚಿನ ಟಚ್‌ಸ್ಕ್ರೀನ್ ಸಹ ಹೊಂದಿರುತ್ತದೆ.

ಈ ಕಾರು ಸಂಪೂರ್ಣ ಗ್ರಾಹಕೀಯಗೊಳಿಸಬಹುದಾದ ಬಳಕೆದಾರ ಇಂಟರ್ಫೇಸ್ ಅನ್ನು ಪಡೆಯುತ್ತದೆ. ಇದು ಪವರ್ ವಿಂಡೋಗಳು, ಕ್ಲೈಮೇಟ್ ಕಂಟ್ರೋಲ್, ರಿಮೋಟ್ ಕೀಲೆಸ್ ಎಂಟ್ರಿ ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿವೆ.

ಇನ್ನು ಈ ಹೊಸ ಸ್ಟ್ರೋಮ್ ಆರ್3 ಮಿನಿ ಎಲೆಕ್ಟ್ರಿಕ್ ಕಾರಿನ ಹಿಂಭಾಗದಲ್ಲಿ 300 ಲೀಟರ್ ಲಗೇಜ್ ಸ್ಪೇಸ್ ಮತ್ತು ಮುಂಭಾಗದಲ್ಲಿ 100 ಲೀಟರ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಈ ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಮೋಟಾರ್ ನಿಂದ 20 ಬಿಹೆಚ್‍ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇದರೊಂದಿಗೆ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿರುತ್ತದೆ. ಇನ್ನು ಈ ಕಾರಿನಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋಟ್ಸ್ ಎಂಬ ಮೂರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿರುತ್ತದೆ ಮತ್ತು ಪುನರುತ್ಪಾದಕ ಬ್ರೇಕಿಂಗ್‌ನೊಂದಿಗೆ ಬರಲಿದೆ.

ಇನ್ನು ಹೊಸ ಸ್ಟ್ರೋಮ್ ಆರ್3 ಮಿನಿ ಎಲೆಕ್ಟ್ರಿಕ್ ಕಾರು ಗಂಟೆಗೆ 80 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಇನ್ನು 200 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ, ಅಂದರೆ 3 ಗಂಟೆಗಳ ಅವಧಿಯಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಆದರೆ 200 ಕಿ.ಮೀ ವರೆಗೂ ಚಲಿಸಬಹುದು. ಇನ್ನು ಬಹುಬೇಡಿಕೆಯ ಈ ಮಿನಿ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.