ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ಜಪಾನಿನ ವಾಹನ ತಯಾರಕ ಕಂಪನಿಯಾದ ಸುಜುಕಿ ತನ್ನ ನ್ಯೂ ಜನರೇಷನ್ ಆಲ್ಟೋ ಎಂಟ್ರಿ ಲೆವೆಲ್ ಕಾರನ್ನು ತಾಯಿನಾಡು ಜಪಾನ್ ನಲ್ಲಿ ಅನಾವರಣಗೊಳಿಸಿದೆ. ಜಪಾನೀಸ್-ಸ್ಪೆಕ್ ಮಾಡೆಲ್ ಆಲ್ಟೋ ಭಾರತದಲ್ಲಿ ಮಾರಾಟದಲ್ಲಿರುವ ಮಾರುತಿ ಸುಜುಕಿ ಆಲ್ಟೋಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ಹೆಸರನ್ನು ಹೊರತುಪಡಿಸಿ, ಎರಡೂ ಕಾರುಗಳು ವಿಭಿನ್ನ ವಿನ್ಯಾಸ, ಇಂಟಿರಿಯರ್ ಮತ್ತು ಪವರ್‌ಟ್ರೇನ್ ಅನ್ನು ಹೊಂದಿವೆ. ನ್ಯೂ ಜನರೇಷನ್ ಆಲ್ಟೋ ಹೊಸ ಬಾಡಿ ಪ್ಯಾನೆಲ್‌ಗಳು ಮತ್ತು ವಿನ್ಯಾಸದ ಅಂಶಗಳೊಂದಿಗೆ ಬರುತ್ತದೆ. ಅದರೆ ಒಟ್ಟಾರೆ ಪೆಟ್ಟಿಗೆಯ ಆಕಾರವನ್ನು ಉಳಿಸಿಕೊಳ್ಳಲಾಗಿದೆ. ವಾಹನವು ಹಿಂದಿನದಕ್ಕಿಂತ ಹೆಚ್ಚು ದುಂಡಗಿನ ಅಂಚುಗಳನ್ನು ಪಡೆಯುತ್ತದೆ. ಮುಂಭಾಗದ ಫಾಸಿಕ ದೊಡ್ಡ ಟ್ರೆಪೆಜೋಡಲ್ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ ಮತ್ತು ಹೆಡ್‌ಲ್ಯಾಂಪ್‌ಗಳ ನಡುವೆ ಕ್ರೋಮ್ ಬಾರ್‌ನೊಂದಿಗೆ ಸಣ್ಣ ಮುಂಭಾಗದ ಗ್ರಿಲ್ ಅನ್ನು ಇರಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ಈ ಸಣ್ಣ ಕಾರು ಗಾಳಿಯ ಅನುಭವಕ್ಕಾಗಿ ದೊಡ್ಡ ವಿಂಡೋ ಗ್ಲಾಸ್‌ಗಳನ್ನು ಮತ್ತು ದೊಡ್ಡ ಎ-ಪಿಲ್ಲರ್ ಅನ್ನು ಪಡೆಯುತ್ತದೆ. ಹಿಂಭಾಗದಲ್ಲಿ, ಹೊಸ ಆಲ್ಟೋ ಹೊಸ ಟೈಲ್‌ಗೇಟ್, ಬಂಪರ್ ಮತ್ತು ಹೊಸ ನೇರವಾದ ಟೈಲ್-ಲೈಟ್‌ಗಳನ್ನು ಪಡೆಯುತ್ತದೆ. ವಾಹನವು 7-ಸ್ಪೋಕ್ ವ್ಹೀಲ್ ಗಳನ್ನು ಪಡೆಯುತ್ತದೆ ಮತ್ತು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ಸುತ್ತುವರಿಯಲ್ಪಟ್ಟಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ಜಪಾನೀಸ್ ಮಾರುಕಟ್ಟೆಗೆ ನ್ಯೂ ಜನರೇಷನ್ ಆಲ್ಟೋ ಹೊಸ ಇಂಟಿರಿಯರ್ ನೊಂದಿಗೆ ಬರುತ್ತದೆ. ಇದು ಹಿಂದಿನ ಮಾದರಿಗಿಂತ ಉತ್ತಮವಾಗಿ ಸಜ್ಜುಗೊಂಡಿದೆ. ಸೆಂಟ್ರಲ್ ಕನ್ಸೋಲ್ ಸಣ್ಣ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಲಂಬವಾಗಿ ಜೋಡಿಸಲಾದ ಏರ್ ಕಾನ್ವೆಂಟ್‌ಗಳು, ಹೊಸ ಎಸಿ ಬಟನ್‌ಗಳು ಇತ್ಯಾದಿಗಳನ್ನು ಹೊಂದಿದೆ. ಇದು ಆಡಿಯೋ ಮತ್ತು ಬ್ಲೂಟೂತ್ ಟೆಲಿಫೋನಿಗೆ ಕಂಟ್ರೋಲ್ ಗಳೊಂದಿಗೆ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಅನ್ನು ಸಹ ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ಒಂಬತ್ತನೇ ತಲೆಮಾರಿನ ಆಲ್ಟೋ ಸುಜುಕಿ ಸುರಕ್ಷತಾ ಬೆಂಬಲದ ಅಡಿಯಲ್ಲಿ ಆಕ್ಟಿವ್ ಡ್ರೈವರ್ ಆಸಿಸ್ಟ್ ನೊಂದಿಗೆ ಬರುತ್ತದೆ.ಇದು ಲೇನ್ ಡಿಪರ್ಚರ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್ ಮತ್ತು ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್ ಮತ್ತು ಹೈ ಬೀಮ್ ಅಸಿಸ್ಟ್ ಫೀಚರ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ನ್ಯೂ ಜನರೇಷನ್ ಆಲ್ಟೋ ಕಾರಿನಲ್ಲಿ 660 ಸಿಸಿ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದೆ, ಇಂಟಿಗ್ರೇಟೆಡ್ ಸ್ಟಾರ್ಟ್ ಜನರೇಟರ್ (ISG) ಮತ್ತು ಸಣ್ಣ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಕಂಪನಿಯು ಪವರ್ ಅಂಕಿಅಂಶಗಳು ಮತ್ತು ಗೇರ್ ಬಾಕ್ಸ್ ಆಯ್ಕೆಗಳ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ಈ SHVS ಮೈಲ್ಡ್ ಹೈಬ್ರಿಡ್ ಸಿಸ್ಟಂ ಆಲ್ಟೋದ ಒಟ್ಟಾರೆ ಇಂಧನ ದಕ್ಷತೆಯನ್ನು ಇನ್ನಷ್ಟು ಸುಧಾರಿಸುತ್ತದೆ. ಇದು ತನ್ನ ವರ್ಗದಲ್ಲಿ ಹೆಚ್ಚು ಇಂಧನ ದಕ್ಷತೆಯ ಕಾರುಗಳಲ್ಲಿ ಒಂದಾಗಿದೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ಮಾರುತಿ ಸುಜುಕಿ ಭಾರತದಲ್ಲಿ ನ್ಯೂ ಜನರೇಷನ್ ಆಲ್ಟೋವನ್ನು ಪರೀಕ್ಷಿಸಲು ಪ್ರಾರಂಭಿಸಿದೆ, ಹೊಸ ಮಾದರಿಯು ಗಮನಾರ್ಹವಾಗಿ ದೊಡ್ಡದಾಗಿದೆ ಮತ್ತು ಹೆಚ್ಚು ವಿಶಾಲವಾಗಿರುತ್ತದೆ ಎಂದು ಸ್ಪೈ ಚಿತ್ರಗಳು ಬಹಿರಂಗಪಡಿಸುತ್ತವೆ. ಇದು ಅಸ್ತಿತ್ವದಲ್ಲಿರುವ ಮಾದರಿಗಿಂತ ಉದ್ದ, ಅಗಲ ಮತ್ತು ಎತ್ತರವಾಗಿರುತ್ತದೆ, ಇದು ಕ್ಯಾಬಿನ್‌ನೊಳಗೆ ಹೆಚ್ಚಿನ ಸ್ಥಳವನ್ನು ರಚಿಸಲು ಸಹಾಯ ಮಾಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ನ್ಯೂ ಜನರೇಷನ್ ಮಾರುತಿ ಸುಜುಕಿ ಆಲ್ಟೋ ಮುಂದಿನ ವರ್ಷದ ಮಧ್ಯಾಂತರ ಅವಧಿಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಈ ಹೊಸ ಕಾರು ಬಿಡುಗಡೆ ವಿಳಂಬದ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಕರೋನಾ ಮಹಾಮಾರಿ ಮುಖ್ಯ ಕಾರಣವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ನ್ಯೂ ಜನರೇಷನ್ ಮಾರುತಿ ಸುಜುಕಿ ಆಲ್ಟೋ ಮಾದರಿಯು ಒಟ್ಟಾರೆ ಪ್ರೊಫೈಲ್ ಅನ್ನು ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸುತ್ತೇವೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಸಣ್ಣ ಓವರ್‌ಹ್ಯಾಂಗ್‌ಗಳನ್ನು ಒಳಗೊಂಡಿರುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಸಣ್ಣ ಓವರ್‌ಹ್ಯಾಂಗ್‌ಗಳನ್ನು ಒಳಗೊಂಡಿರುತ್ತದೆ. ಈ ಹೊಸ ಕಾರಿನಲ್ಲಿ ಹೆಡ್‌ಲ್ಯಾಂಪ್‌ಗಳು, ಹೆಚ್ಚು ಪ್ರಮುಖವಾದ ಗ್ರಿಲ್ ಮತ್ತು ಹೊಸ ಟೈಲ್-ಲ್ಯಾಂಪ್ ಕ್ಲಸ್ಟರ್‌ಗಳ ವಿಷಯದಲ್ಲಿ ಹ್ಯಾಚ್‌ಬ್ಯಾಕ್ ಗಮನಾರ್ಹ ವಿನ್ಯಾಸ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ನ್ಯೂ ಜನರೇಷನ್ ಮಾರುತಿ ಸುಜುಕಿ ಆಲ್ಟೋ ಕಾರು ಹಾರ್ಟ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ವರದಿಯಾಗಿದೆ, ಇದು ಹೊಸ ಎಸ್-ಪ್ರೆಸ್ಸೊ ಮತ್ತು ವ್ಯಾಗನ್ಆರ್ ಕಾರುಗಳನ್ನು ಸಹ ಆಧಾರವಾಗಿದೆ. ಇನ್ನು ಈ ಕಾರಿನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನೀಡಲಾಗುತ್ತದೆ. ಇದರಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಫೀಚರ್ಸ್ ಅನ್ನು ನೀಡಬಹುದು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ಈ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಡ್ರೈವರ್ ಮತ್ತು ಕೋ-ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸ್ಪೀಡ್ ಅಲರ್ಟ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ನೀಡಬಹುದು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ Suzuki Alto ಕಾರು

ಹೊಸ ಆಲ್ಟೊ ಹ್ಯಾಚ್‌ಬ್ಯಾಕ್ ನಲ್ಲಿ ಅದೇ 796 ಸಿಸಿ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೀಡಬಹುದು, ಈ ಎಂಜಿನ್ 48 ಬಿಹೆಚ್‌ಪಿ ಮತ್ತು 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಒಳಗೊಂಡಿರಬಹುದು. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್‌ಗಳನ್ನು ನೀಡಲಾಗುತ್ತದೆ. ಫ್ಯಾಕ್ಟರಿ ಕಿಟಡ್ ಸಿಎನ್‌ಜಿ ಕಿಟ್ ಅನ್ನು ಸಹ ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಒಟ್ಟಿನಲ್ಲಿ ನ್ಯೂ ಜನರೇಷನ್ ಮಾರುತಿ ಸುಜುಕಿ ಆಲ್ಟೋ ಕಾರು ಕೆಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಬಹುದು.

Most Read Articles

Kannada
English summary
New suzuki alto 2022 revealed in japan design features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X