ಆಕರ್ಷಕ ಫೀಚರ್ಸ್, ಪವರ್‌ಫುಲ್ ಎಂಜಿನ್‌ನೊಂದಿಗೆ 2021ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು ಬಿಡುಗಡೆ
ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸುಜುಕಿ ತನ್ನ 2021ರ ಸ್ವಿಫ್ಟ್ ಸ್ಪೋರ್ಟ್ ಕಾರನ್ನು ಸಿಂಗಪುರದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಮಾದರಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಪರ್ಫಾಮೆನ್ಸ್ ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಸ್ಪೋರ್ಟ್ ಮಾದರಿಯ ಎಂಜಿನ್ ಗಾಗಿ ಸುಜುಕಿ ಕಂಪನಿಯು ಸಿಂಗಪುರದ ಮಾರುಕಟ್ಟೆಯಲ್ಲಿ ಚಾಂಪಿಯನ್ ಮೋಟರ್ ನೊಂದಿಗೆ ಪಾಲುದಾರಿಕೆ ಹೊಂದಿದೆ. ಸಿಂಗಾಪುರ್-ಸ್ಪೆಕ್ 2021ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ 1.4-ಲೀಟರ್, ಟರ್ಬೋಚಾರ್ಜ್ಡ್, ಇನ್ಲೈನ್ -4 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 129 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಪವರ್ ಪ್ಲಾಂಟ್ ಇತ್ತೀಚಿನ ಯುರೋ6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ವಿಫ್ಟ್ ಸ್ಪೋರ್ಟ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ತಯಾರಕರ ಪ್ರಕಾರ ಈ ಹ್ಯಾಚ್‌ಬ್ಯಾಕ್ ಕೇವಲ 9.1 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಇನ್ನು ಈ ಸ್ವಿಫ್ಟ್ ಸ್ಪೋರ್ಟ್ ಕಾರು ಒಟ್ಟಾರೆ 21.2 ಕಿಲೋಮೀಟರ್ ಮೈಲೇಜ್ ಅನ್ನು ಒದಗಿಸುತ್ತದೆ.

ಸುಜುಕಿ ವಿಶೇಷವಾಗಿ ವಿನ್ಯಾಸಗೊಳಿಸಿದ ಟ್ರೈಯಿಂಗ್ ಆರ್ಮ್ ಸಹ ಒಳಗೊಂಡಿದೆ, ಮುಂಭಾಗದ ಸಸ್ಪೆಂಕ್ಷನ್ ಸೆಟಪ್ ಮ್ಯಾಕ್ಫೆರ್ಸನ್ ಸ್ಟ್ರಟ್ ಅನ್ನು ಕಾಯಿಲ್ ಸ್ಪ್ರಿಂಗ್‌ಗಳೊಂದಿಗೆ ಹೊಂದಿರುತ್ತದೆ, ಹಿಂಭಾಗದಲ್ಲಿ ಟ್ರಿಸನ್ ಬೀಮ್ ಸಿಸ್ಟಂ ಅನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

2021ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನಲ್ಲಿ ಆಟೋಮ್ಯಾಟಿಕ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಹ್ಯಾಲೊಜೆನ್ ಫಾಗ್ ಲ್ಯಾಂಪ್‌ಗಳು, ಜೊತೆಗೆ ಮುಂಭಾಗದ ಗ್ರಿಲ್‌ನಲ್ಲಿ ಫಾಕ್ಸ್ ಕಾರ್ಬನ್-ಫೈಬರ್ ಟ್ರಿಮ್‌ಗಳು, ಅಂಡರ್ ಲಿಪ್ ಮತ್ತು ಸೈಡ್ ಸ್ಕರ್ಟ್‌ಗಳನ್ನು ಒಳಗೊಂಡಿದೆ.

ಇದರೊಂದಿಗೆ ಹಿಂಭಾಗದ ಬಂಪರ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ ಗಳೊಂದಿಗೆ, ಅಡೆಜೆಸ್ಟ್ ಮಾಡಬಹುದಾದ ವ್ಹೀಂಗ್ ಮೀರರ್, ಪುಶ್-ಸ್ಟಾರ್ಟ್ ಬಟನ್‌ನೊಂದಿಗೆ ಕೀ ಲೆಸ್ ಎಂಟ್ರಿ, ಬ್ಲ್ಯಾಕ್ ಔಟ್, ಮತ್ತು ಸಿ-ಪಿಲ್ಲರ್‌ಗಳು, ಎಲ್ಇಡಿ ಕಾಂಬಿನೇಶನ್ ಟೈಲ್‌ಲೈಟ್‌ಗಳು ಮತ್ತು ಡ್ಯುಯಲ್ ಎಕ್ಸಾಸ್ಟ್ ಟಿಪ್ಸ್ ಅನ್ನು ಹೊಂದಿದೆ.
MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

2021ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಇಂಟಿರಿಯರ್ ನಲ್ಲಿ ರೆಡ್ ಫ್ಲಾಟ್-ಬಾಟಮ್ ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಡಿಜಿಟಲ್ ಎಂಐಡಿ, ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋನೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರಿವರ್ಸ್ ಕ್ಯಾಮೆರಾ ಮತ್ತು ಆಟೋ ಕ್ಲೈಮೇಟ್ ಅನ್ನು ಹೊಂದಿದೆ.

ಇನ್ನು ಟ್ವಿನ್ ಕಪ್ ಹೋಲ್ಡರ್ಸ್, ರೆಡ್ ಸ್ಟಿಚ್ ಮತ್ತು ಸ್ಪೋರ್ಟ್ ಅಕ್ಷರಗಳನ್ನು ಹೊಂದಿರುವ ಫ್ಯಾಬ್ರಿಕ್ ಸೆಮಿ-ಬಕೆಟ್ ಸೀಟುಗಳನ್ನು ಹೊಂದಿವೆ. ಸ್ವಿಫ್ಟ್ ಸ್ಪೋರ್ಟ್ ಮೆಟಲ್ ಫೂಟ್ ಪೆಡಲ್‌ಗಳನ್ನು ಹೊಂದಿವೆ. 2021ರ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರು 210 ಕಿ.ಮೀ ಟಾಪ್ ಸ್ಪೀಡ್ ಅನ್ನು ಕೂಡ ಹೊಂದಿದೆ.


Click it and Unblock the Notifications








