ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಒಂದೆರಡು ವರ್ಷಗಳ ಹಿಂದೆ ಹ್ಯಾರಿಯರ್ ಎಸ್‍ಯುವಿಯ ಡಾರ್ಕ್ ಎಡಿಷನ್ ಮಾದರಿಯನ್ನು ಪರಿಚಯಿಸಿದ್ದರು. ಈ ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಮಾದರಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಉತ್ತಮ ಯಶಸ್ವಿಯನ್ನು ಪಡೆದ ಬಳಿಕ ಟಾಟಾ ಕಂಪನಿಯು ಇದನ್ನು ಇತರ ಮಾದರಿಗಳಿಗೆ ವಿಸ್ತರಿಸುವ ಊಹಾಪೋಹಗಳಿತ್ತು. ನಂತರ ಟಾಟಾ ಕಂಪನಿಯು ಹೊಸ ಟ್ರೇಡ್‌ಮಾರ್ಕ್ ಸಲ್ಲಿಸಿದಾಗ ಈ ಊಹಾಪೋಹಗಳು ಅಧಿಕವಾಯ್ತು. ವರ್ಷಗಳಲ್ಲಿ ಹೊಸ ರೂಪಾಂತರಗಳು ಅಥವಾ ಸ್ಪೆಷಲ್ ಎಡಿಷನ್‌ಗಳು ಸೇರಿಸುವ ಮೂಲಕ ಖರೀದಿದಾರರನ್ನು ಸೆಳೆಯಲು ಟಾಟಾ ಪ್ರಯತ್ನಿಸುತ್ತಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಇತ್ತೀಚೆಗೆ ಹ್ಯಾರಿಯರ್ ಕ್ಯಾಮೊ ಎಡಿಷನ್ ಪಡೆದರು ಮತ್ತು ಇದು ಪ್ರಸ್ತುತ ಸರಣಿಯಲ್ಲಿ ಮೇಲ್ಭಾಗದಲ್ಲಿದೆ. ಇನ್ನು ಟಾಟಾ ಕಂಪನಿಯು ತನ್ನ ಟಿಯಾಗೋ, ನೆಕ್ಸಾನ್ ಆಲ್‌‌ಟ್ರೊಜ್ ಕಾರುಗಳ ಡಾರ್ಕ್ ಎಡಿಷನ್‌ಗಳನ್ನು ಕೂಡ ಪರಿಚಯಿಸಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್ ಮತ್ತು ಆಲ್‌‌ಟ್ರೊಜ್ ಡಾರ್ಕ್ ಎಡಿಷನ್ ಪುಣೆಯ ಸಮೀಪವಿರುವ ಡೀಲರ್ ಬಳಿ ಕಾಣಿಸಿಕೊಂಡಿದೆ. ಇದರ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಈ ಡಾರ್ಕ್ ಎಡಿಷನ್‌ಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಇಂಪ್ಯಾಕ್ಟ್ ಡಿಸೈನ್ ಅನ್ನು ಆಧರಿಸಿದೆ ಮತ್ತು ಬ್ಯ್ಯಾಕ್ ಅಂಶಗಳನ್ನು ಹೊಂದಿದ್ದು, ಇದು ಆಕರ್ಷಕವಾಗಿ ಕಾಣುತ್ತದೆ. ಹೆಚ್ಚಿನ ಜನರು ಬ್ರ್ಯಾಕ್ ಡಾರ್ಕ್ ಎಡಿಷನ್ ಗಳನ್ನು ಇಷ್ಟ ಪಡುತ್ತಾರೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್ ಬ್ಯಾಕ್ ಅಲಾಯ್ ವ್ಹೀಲ್ ಗಳಿಂದ ಕೂಡಿದ್ದು, ಮುಂಭಾಗದ ಫೆಂಡರ್‌ಗಳಿಗಿಂತ ವಿಶಿಷ್ಟವಾದ, ಡಾರ್ಜ್ ಬ್ಯಾಡ್ಜ್, ಬ್ಲ್ಯಾಕ್ ಫಾಗ್ ಲ್ಯಾಂಪ್ ಅನ್ನು ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಇನ್ನು ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಸ್ಕಿಡ್ ಪ್ಲೇಟ್‌ಗಳೊಂದಿಗೆ, ಪಿಯಾನೋ ಬ್ಲ್ಯಾಕ್ ಇಂಟಿರಿಯರ್, ಗ್ರೇ ಬಣ್ಣದ ಡ್ಯಾಶ್ ಟಾಪ್ ಲೇಯರ್, ಟೈಲ್‌ಗೇಟ್‌ನಲ್ಲಿ ಗ್ರೇ ಬಣ್ಣದಲ್ಲಿ ನೆಕ್ಸಾನ್ ಎಂದು ಬರೆದಿರುವುದನ್ನು ಕಾಣುತ್ತದೆ,

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಇನ್ನು ಟಾಟಾ ಆಲ್‌‌ಟ್ರೊಜ್ ಡಾರ್ಕ್ ಎಡಿಷನ್ ಮಾದರಿಯಲ್ಲಿ ಇದೇ ರೀತಿಯ ದೃಶ್ಯ ನವೀಕರಣಗಳನ್ನು ಸಹ ಕಾಣಬಹುದು, ನೆಕ್ಸಾನ್, ಆಲ್‌‌ಟ್ರೊಜ್ ಕಾರುಗಳ ಎಕ್ಸ್‌ಟಿ, ಎಕ್ಸ್‌ಝಡ್‌ ಎಕ್ಸ್‌ಝಡ್‌ಎ ಸೇರಿದಂತೆ ಅನೇಕ ರೂಪಾಂತರಗಳಲ್ಲಿ ಡಾರ್ಕ್ ಎಡಿಷನ್‌ಗಳನ್ನು ನೀಡಲಾಗುತ್ತದೆ ಎಂದು ನಿರೀಕ್ಷಿಸುತ್ತೇವೆ

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಈ ಡಾರ್ಕ್ ಎಡಿಷನ್‌ಗಳ ಬೆಲೆಯು ಸ್ಟ್ಯಾಂಡರ್ಡ್ ಮಾದರಿಗಿಂತ ಸುಮಾರು ರೂ.30,000 ಹೆಚ್ಚು ದುಬಾರಿಯಾಗಿದೆ. ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಕಾರುಗಳಲ್ಲಿ 2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿರುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ ಟಾಟಾ ನೆಕ್ಸಾನ್, ಆಲ್‌‌ಟ್ರೊಜ್ ಡಾರ್ಕ್ ಎಡಿಷನ್‌ಗಳು

ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಮತ್ತು ಟೀಗೊರ್ ಕಾರುಗಳಿಗೂ ಡಾರ್ಕ್ ಎಡಿಷನ್‌ಗಳನ್ನು ಪರಿಚಯಿಸಬಹುದು. ಇದರೊಂದಿಗೆ ಈ ವರ್ಷದ ಕೊನೆಯಲ್ಲಿ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಆಧಾರಿತ ಮೈಕ್ರೊ ಎಸ್‌ಯುವಿಯನ್ನು ಭಾರತದಲ್ಲಿ ಪರಿಚಯಿಸಲು ಟಾಟಾ ಕಂಪನಿಯು ಸಜ್ಜಾಗುತ್ತಿದೆ.

Source: GaadiWaadi

Most Read Articles

Kannada
English summary
Tata Nexon Dark Edition & Altroz Dark Edition Spotted Ahead Of Launch. Read In Kannada.
Story first published: Thursday, July 1, 2021, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X