Just In
Don't Miss!
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಟಾಟಾ ಆಲ್‌ಟ್ರೊಜ್ ಟರ್ಬೊ-ಪೆಟ್ರೋಲ್ ವೆರಿಯೆಂಟ್‌ನ ಮಾಹಿತಿ ಬಹಿರಂಗ
ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಆಲ್‌ಟ್ರೊಜ್ ಟರ್ಬೊ-ಪೆಟ್ರೋಲ್ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಟಾಟಾ ಆಲ್‌ಟ್ರೊಜ್ ಟರ್ಬೊ-ಪೆಟ್ರೋಲ್ ವೆರಿಯೆಂಟ್ ಕೆಲವು ಹೊಸ ಫೀಚರ್ ಗಳನ್ನು ಪಡೆದುಕೊಳ್ಳಲಿದೆ.

ಹೊಸ ಟಾಟಾ ಆಲ್‌ಟ್ರೊಜ್ ಟರ್ಬೊ-ಪೆಟ್ರೋಲ್ ವೆರಿಯೆಂಟ್‌ನ ಮಾಹಿತಿಗಳನ್ನು ರಶ್ಲೇನ್ ಬಹಿರಂಗಪಡಿಸಿದೆ. ರಶ್ಲೇನ್ ಬಹಿರಂಗಪಡಿಸಿದ ಮಾಹಿತಿಗಳ ಪ್ರಕಾರ, ಕಂಪನಿಯು ಪ್ರಸ್ತುತ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನೊಂದಿಗೆ ಲಭ್ಯವಿರುವ ರೂಪಾಂತರ ಮತ್ತು ಬಣ್ಣ ಆಯ್ಕೆಗಳಲ್ಲಿ ಬದಲಾವಣೆಗಳನ್ನು ಮಾಡಲಿದೆ. ಈ ಹೊಸ ಟಾಟಾ ಆಲ್‌ಟ್ರೊಜ್ ಟರ್ಬೊ-ಪೆಟ್ರೋಲ್ ವೆರಿಯೆಂಟ್ ನೇರವಾಗಿ ಹೊಸ ಹ್ಯುಂಡೈ ಐ20 ಟರ್ಬೊ-ಪೆಟ್ರೋಲ್ ವೆರಿಯೆಂಟ್ ಕಾರಿಗೆ ಪೈಪೋಟಿ ನೀಡುತ್ತದೆ.

ಹೊಸ ಟಾಟಾ ಆಲ್‌ಟ್ರೊಜ್ ಟರ್ಬೊ-ಪೆಟ್ರೋಲ್ ವೆರಿಯೆಂಟ್‌ನ ನವೀಕರಣದ ನಂತರ, ಸ್ಟ್ಯಾಂಡರ್ಡ್ ಆಲ್‌ಟ್ರೊಜ್ ಒಟ್ಟು ಆರು ವೆರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ. ಇದು ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಎಂ ಪ್ಲಸ್, ಎಕ್ಸ್‌ಝಡ್ ಮತ್ತು ಎಕ್ಸ್‌ಝಡ್ ಪ್ಲಸ್ ಆಗಿರುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಆದರೆ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯು ಎಕ್ಸ್‌ಟಿ, ಎಕ್ಸ್‌ಝಡ್ ಮತ್ತು ಎಕ್ಸ್‌ಝಡ್ ಪ್ಲಸ್ ನಂತಹ ಟಾಪ್ ವೆರಿಯೆಂಟ್ ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಹ್ಯಾಚ್‌ಬ್ಯಾಕ್‌ನ ಮುಂಬರುವ ಟರ್ಬೊ ವೆರಿಯೆಂಟ್ ಅನ್ನು "ಐಟರ್ಬೊ" ಎಂದು ಕರೆಯಲಾಗುತ್ತದೆ.

ಹೊಸ ಟಾಟಾ ಆಲ್‌ಟ್ರೊಜ್ ಟರ್ಬೊ-ಪೆಟ್ರೋಲ್ ವೆರಿಯೆಂಟ್ ನಲ್ಲಿ ಸ್ಪೋರ್ಟ್ ಮತ್ತು ಸಿಟಿ ಎರಡು ಆಯ್ದ ಡ್ರೈವ್ ಮೋಡ್‌ಗಳನ್ನು ನೀಡಲಾಗುತ್ತದೆ. ಇನ್ನು ಇದರಲ್ಲಿ ಇಂಧನ ದಕ್ಷತೆಯ ಗುರಿಯಾಗಿಸಿ ಇಕೋ ಮೋಡ್ ಅನ್ನು ಸಹ ನೀಡಲಾಗುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟರ್ಬೊ-ಪೆಟ್ರೋಲ್ ವೆರಿಯೆಂಟ್ ಬೇಸ್-ಸ್ಪೆಕ್ ಎಕ್ಸ್‌ಟಿ ಟ್ರಿಮ್‌ನಲ್ಲಿ ಬ್ಲ್ಯಾಕ್ ಕಾಂಟ್ರಾಸ್ಟಿಂಗ್ ರೂಫ್ ಮತ್ತು ಆಫ್ ಕ್ಯಾಪ್‌ಗಳನ್ನು ಹೊಂದಿರುವ 14 ಇಂಚಿನ ಸ್ಟೀಲ್ ವ್ಹೀಲ್ ಗಳನ್ನು ನೀಡಿದೆ .ಹ್ಯಾಚ್‌ಬ್ಯಾಕ್‌ನ ಐಟರ್ಬೊ ವೆರಿಯೆಂಟನ್ನು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ 2 ಹೆಚ್ಚುವರಿ ಟ್ವೀಟರ್‌ಗಳೊಂದಿಗೆ ಸುಧಾರಿತ ಸೌಂಡ್ ಸಿಸ್ಟಂ ಅನ್ನು ಹೊಂದಿರುತ್ತದೆ.

ಹೊಸ ಟಾಟಾ ಆಲ್‌ಟ್ರೊಜ್ ಟರ್ಬೊ ಪೆಟ್ರೋಲ್ ವೆರಿಯೆಂಟ್ ನಲ್ಲಿ 1.2-ಲೀಟರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.ಈ ಟರ್ಬೋ ವೆರಿಯೆಂಟ್ ಮರೀನಾ ಬ್ಲೂ ಬಣ್ಣವನ್ನು ಹೊಂದಿರುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಟಾಟಾ ಆಲ್‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸದೊಂದಿಗೆ ಸಖತ್ ಬೋಲ್ಡ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಟೈಲ್‌ಲೈಟ್ ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿವೆ.

ಈ ಕಾರಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಮೌಂಟಡ್ ಕಂಟ್ರೋಲ್ ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

ಟಾಟಾ ಆಲ್‌ಟ್ರೊಜ್ ಕಾರನ್ನು ಟರ್ಬೋ ಪೆಟ್ರೋಲ್ ವೆರಿಯೆಂಟ್ ಬಿಡುಗಡೆಗೊಳಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ. ಅಲ್ಲದೇ ಹ್ಯುಂಡೈ ಐ20 ಕಾರಿಗೆ ಪ್ರಬಲ ಪೈಪೋಟಿ ನೀಡುತ್ತದೆ.