ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿ

ಎರಡು ದೈತ್ಯ ಕಾರು ತಯಾರಕ ಕಂಪನಿಗಳಾದ ಟೊಯೊಟಾ ಹಾಗೂ ಮಾರುತಿ ಸುಜುಕಿ ಸಹಭಾಗಿತ್ವದಲ್ಲಿ ರಿಬ್ಯಾಡ್ಜ್ ಆವೃತ್ತಿಯಾಗಿ ಗ್ಲಾಂಝಾವನ್ನು 2019ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಗ್ಲಾಂಝಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿ

ಕೆಲವು ದಿನಗಳ ಹಿಂದೆ ಮಾರುತಿ ಬಲೆನೊ ಹೈಬ್ರಿಡ್ ಸ್ಪಾಟ್ ಟೆಸ್ಟ್ ಅನ್ನು ನಡೆಸಿತ್ತು. 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಸುಜುಕಿ ಸ್ವಿಫ್ಟ್ ಹೈಬ್ರಿಡ್‌ನಂತೆಯೇ ಇದು ಕೂಡ ಇದೆ ಎಂದು ತೋರುತ್ತದೆ. ಸ್ವಿಫ್ಟ್ ಹೈಬ್ರಿಡ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 91 ಬಿಹೆಚ್‍ಪಿ ಪವರ್ ಮತ್ತು 118 ಎನ್ಎಂ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿ

ಇನ್ನು ಈ ಕಾರು 10 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಅನ್ನು ಸಹ ಪಡೆಯುತ್ತದೆ, ಇದು 13.5 ಬಿಹೆಚ್‍ಪಿ ಪವರ್ ಮತ್ತು 30 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೈಬ್ರಿಡ್ ಪವರ್‌ಟ್ರೇನ್ ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಂ ಮೂಲಕ ಸೇಲ್ಫ್-ಚಾರ್ಜಿಂಗ್ ಸಿಸ್ಟಂ ಅನ್ನು ಕೂಡ ಪಡೆಯುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿ

ಇದು ಸ್ವಿಫ್ಟ್ ಹೈಬ್ರಿಡ್‌ನ ಮೈಲೇಜ್ 32 ಕಿ.ಮೀ. ವರೆಗೆ ಹೆಚ್ಚಿಸಲಾಗುತ್ತದೆ ಎಂದು ವರದಿಯಾಗಿದೆ. ಇನ್ನು ಸ್ವೀಫ್ಟ್ ಹೈಬ್ರಿಡ್ ಮಾದರಿಯಲ್ಲಿರುವಂತ ಹೈಬ್ರಿಡ್ ಸಿಸ್ಟಂ ಅನ್ನು ಬಲೆನೊ ಮಾದರಿಯಲ್ಲಿ ನೀಡಿದ್ದರೆ, ಗ್ಲಾಂಝಾ ಮಾದರಿಯಲ್ಲಿಯು ಇದೇ ಸಿಸ್ಟಂ ಅನ್ನು ಅಳವಡಿಸಬಹುದು

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿ

ಇದೀಗ ಗ್ಲಾಂಝಾ ಹೈಬ್ರಿಡ್ ಆವೃತ್ತಿ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಇನ್ನು ಬಲೆನೊ ಮತ್ತು ಗ್ಲಾಂಝಾ ಎರಡೂ ರಿಬ್ಯಾಡ್ಜ್ ಆವೃತ್ತಿಗಳಾಗಿದೆ. ಈ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಜಿ(ಎಂಟಿ) ಟ್ರಿಮ್‌ನಲ್ಲಿ ಮಾತ್ರ ನೀಡಲಾಗುತ್ತದೆ ಇನ್ನು ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿರುವುದು ಟೊಯೊಟಾ ಗ್ಲಾಂಝಾ ಜಿ ರೂಪಾಂತರವಾಗಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿ

ಸ್ವಿಫ್ಟ್ ಹೈಬ್ರಿಡ್‌ನಲ್ಲಿರುವಂತೆ ಕಾರು ದೊಡ್ಡ ಬ್ಯಾಟರಿ ಮತ್ತು 10 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಕಂಪನಿಯು ಹೊಸ ಗ್ಲಾಂಝಾ ಹೈಬ್ರಿಡ್ ಆವೃತ್ತಿಯ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿ

ಇನ್ನು ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿಯು ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಪೈ ಚಿತ್ರಗಳಲ್ಲಿ ನೋಡಿದಂತೆ, ವಿನ್ಯಾಸದಲ್ಲಿಯು ಯಾವುದೇ ಬದಲಾವಣೆಗಳು ಇರುವುದಿಲ್ಲವೆಂದು ನಿರೀಕ್ಷಿಸುತ್ಟೇವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿ

ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿಯಲ್ಲಿ ಎಲ್ಇಡಿ ಪ್ರೋಜೆಕ್ಟರ್ ಜೊತೆ ಡಿಎಲ್ಆರ್ ಹೆಡ್‌ಲ್ಯಾಂಪ್, 3ಡಿ ಮಾದರಿಯಲ್ಲಿ ಮುಂಭಾಗದ ಕ್ರೋಮ್ ಗ್ರೀಲ್, ಸ್ಟೈಲಿಷ್ ಬಂಪರ್, ಡೈಮೆಂಡ್ ಕಟ್ ಅಲಾಯ್ ವ್ಹೀಲ್‍‍ಗಳು ಮತ್ತು ಎಲ್ಇಡಿ ರೇರ್ ಕಾಂಬಿನೇಷನ್ ಟೇಲ್‌ಗೇಟ್ ಲ್ಯಾಂಪ್‌ಗಳನ್ನು ಹೊಂದಿರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿ

ಮಾರುತಿ ಸುಜುಕಿ ಕಂಪನಿಯು ಈ ವರ್ಷ ಬಲೆನೊ ಹೈಬ್ರಿಡ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಮಾರುತಿ ಬಲೆನೊ ಹೈಬ್ರಿಡ್ ಆವೃತಿಯ ಬಳಿಕ ಈ ಟೊಯೊಟಾ ಗ್ಲಾಂಝಾ ಹೈಬ್ರಿಡ್ ಆವೃತ್ತಿಯನ್ನು ಬಿದುಗಡೆಗೊಳಿಸಬಹುದು.

Article Published On: Tuesday, February 2, 2021, 20:16 [IST]
English summary
Toyota Glanza Hybrid Spied. Read In Kananda.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+