Just In
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಟೊಯೊಟಾ ಹೈಲ್ಯಾಂಡರ್ ಹೈಬ್ರಿಡ್ 7-ಸೀಟರ್ ಆವೃತ್ತಿ ಬಿಡುಗಡೆ
ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಹೈಲ್ಯಾಂಡರ್ ಎಸ್‌ಯುವಿಯ ಹೈಬ್ರಿಡ್ 7-ಸೀಟರ್ ಆವೃತ್ತಿಯನ್ನು ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೈಲ್ಯಾಂಡರ್ ಯುರೋಪ್ ಮಾರುಕಟ್ಟೆಯಲ್ಲಿ ಟೊಯೊಟಾದ ಎಲ್ಲಾ ಮಾದರಿಗಳಿಗಿಂತ ಇದು ದೊಡ್ಡ ಎಸ್‍ಯುವಿಯಾಗಿದೆ.

ಹೊಸ ಟೊಯೊಟಾ ಹೈಲ್ಯಾಂಡರ್ ಎಸ್‌ಯುವಿಯ ಹೈಬ್ರಿಡ್ ಆವೃತ್ತಿಯು ಟಿಎನ್‌ಜಿಎ-ಕೆ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಹೈಲ್ಯಾಂಡರ್ ಎಸ್‌ಯುವಿಯಯ ಮುಂಭಾಗ 2.5 ಲೀಟರ್ ಅಟ್ಕಿನ್ಸನ್ ಸೈಕಲ್ ಹೈಬ್ರಿಡ್ ಡೈನಾಮಿಕ್ ಫೋರ್ಸ್ ಪೆಟ್ರೋಲ್ ಎಂಜಿನ್ ಮತ್ತು ಹಿಂಭಾಗ ಎಲೆಕ್ಟ್ರಿಕ್ ಮೋಟಾರ್ ಅನ್ನು ಸಂಯೋಜಿಸಿದೆ. ಇದರಲ್ಲಿ ನಿಕಲ್- ಮೆಟಲ್ ಹೈಡ್ರೈಡ್ ಸಿಸ್ಟಮ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದೆ.

ಇನ್ನು ಈ ಹೈಲ್ಯಾಂಡರ್ ಹೈಬ್ರಿಡ್ ಎಸ್‍ಯುವಿಯು ಎಲೆಕ್ಟ್ರಿಕ್ ಮೋಡ್ ನಲ್ಲಿ 125 ಕಿ.ಮೀ ವೇಗದವರೆಗೆ ಚಲಿಸಬಹುದಾಗಿದೆ. ಇನ್ನು ಹೊಸ ಹೈಲ್ಯಾಂಡರ್ ಹೈಬ್ರಿಡ್ ಪಿಹೆಚ್‍ಇವಿ ಅಲ್ಲದ ಮಾದರಿಗೆ ವಿಭಾಗದಲ್ಲಿ ಅತ್ಯುತ್ತಮ ಪವರ್/ಸಿಒ2 ಅನುಪಾತವನ್ನು ಹೊಂದಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಹೈಲ್ಯಾಂಡರ್ ಹೈಬ್ರಿಡ್ ಎಸ್‍ಯುವಿಯು 4966 ಎಂಎಂ ಉದ್ದ, 1930 ಎಂಎಂ ಅಗಲ, 1755 ಎಂಎಂ ಎತ್ತರ, ಮತ್ತು 2850 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೈಲ್ಯಾಂಡರ್ ಹೈಬ್ರಿಡ್ ಪ್ರೀಮಿಯಂ ಅರ್ಬನ್ ಎಸ್‍ಯುವಿಯು ಅತ್ಯಾಧುನಿಕ ಸ್ಟೈಲಿಂಗ್ ಅನ್ನು ಹೊಂದಿದೆ.

ಇನ್ನು ಈ ಹೊಸ ಟೊಯೊಟಾ ಹೈಲ್ಯಾಂಡರ್ ಎಸ್‌ಯುವಿಯು ಆಲ್-ವೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗಗ್ರಿಲ್‌ಗಳು ಟ್ರೆಪೆಜಾಯಿಡಲ್ ವಿನ್ಯಾಸದಿಂದ ಕೂಡಿದೆ. ಇದು ಈ ಎಸ್‍ಯುವಿಗೆ ಒರಾಟದ ಲುಕ್ ಅನ್ನು ನೀಡಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಟೊಯೊಟಾ ಹೈಲ್ಯಾಂಡರ್ ಹೈಬ್ರಿಡ್ ಎಸ್‌ಯುವಿಯ ಇಂಟಿರಿಯರ್ ನಲ್ಲಿ ಹಲವಾರು ಆಧುನಿಕ ಪ್ರೀಮಿಯಂ ಫೀಚರ್ ಅನ್ನು ನೀಡಿದೆ. ಇನ್ನು ಈ ಎಸ್‍ಯುವಿಯಲ್ಲಿ 12.3-ಇಂಚಿನ ಸೆಂಟರ್ ಕನ್ಸೋಲ್ ಮಲ್ಟಿಮೀಡಿಯಾ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ.

ಇನ್ನು ಟೊಯೊಟಾ ಹೈಲ್ಯಾಂಡರ್ ಹೈಬ್ರಿಡ್ ಆವೃತ್ತಿಯಲ್ಲಿ 7 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ನೀಡಿದೆ. ಇದರೊಂದಿಗೆ , 12.3-ಇಂಚಿನ ಸೆಂಟರ್ ಕನ್ಸೋಲ್ ಮಲ್ಟಿಮೀಡಿಯಾ ಡಿಸ್ ಪ್ಲೇಯನ್ನು ಕೂಡ ಹೊಂದಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಇನ್ನು ಈ ಹೈಬ್ರಿಡ್ ಆವೃತ್ತಿಯಲ್ಲಿ ಮೂರು ಹಂತದ ಕ್ಲೈಮೆಂಟ್ ಕಂಟ್ರೋಒಲ್ ಅನ್ನು ಹೊಂದಿದೆ. ಇನ್ನು ಹೆಡ್-ಅಪ್ ಡಿಸ್ ಪ್ಲೇ, ವ್ಯಾಟ್, ಹರ್ಮನ್ ಅವರಿಂದ 11-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಸ್ವಿಚ್ ಮಾಡಬಹುದಾದ ಡಿಜಿಟಲ್ ರಿಯರ್ ವ್ಯೂ ಮಿರರ್ ಅನ್ನು ಹೊಂದಿದೆ.

ಹೊಸ ಟೊಯೊಟಾ ಹೈಲ್ಯಾಂಡರ್ ಹೈಬ್ರಿಡ್ ಆವೃತ್ತಿಯು ಇಕೋ, ನಾರ್ಮಲ್, ಸ್ಪೋರ್ಟ್ ಮತ್ತು ಟ್ರೈಲ್ ಎಂಬ ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ಆಯ್ಕೆ ಮಾಡಬಹುದು. ಇನ್ನು ಈ ಹೈಲ್ಯಾಂಡರ್ ಹೈಬ್ರಿಡ್ ಆವೃತ್ತಿಯಲ್ಲಿ ವಿಟಿ-ಐಇ (ವೇರಿಯಬಲ್ ವಾಲ್ವ್ ಟೈಮಿಂಗ್-ಇಂಟೆಲಿಜೆಂಟ್ ಎಲೆಕ್ಟ್ರಿಕ್) ಹೊಂದಿರುವ ಡ್ಯುಯಲ್ ವಿವಿಟಿ-ಐ ಸಿಸ್ಟಂ ಅನ್ನು ಒಳಗೊಂಡಿದೆ.