ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಾಕ್‌ರೌಂಡ್ ವಿಡಿಯೋ ಬಹಿರಂಗ

ಜಪಾನ್ ಮೂಲದ ಟೊಯೊಟಾ ಕಂಪನಿಯು ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯನ್ನು ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿತ್ತು. ಈ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹಲವಾರು ಬದಲಾವಣೆಗಳೊಂದಿಗೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಾಕ್‌ರೌಂಡ್ ವಿಡಿಯೋ ಬಹಿರಂಗ

ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಿಎಕ್ಸ್ಆರ್ ಮಾದರಿಯ ವಾಕ್‌ರೌಂಡ್ ವಿಡಿಯೋವನ್ನು ಡ್ರೈವ್'ಟೆರೆನ್ ಯುಟ್ಯೂಬ್ ಚಾನೆಲ್ ಹಂಚಿಕೊಂಡಿದೆ. ಇದರಲ್ಲಿ ಈ ಎಸ್‍ಯುವಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಲ್ಯಾಂಡ್ ಕ್ರೂಸರ್ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಐಕಾನಿಕ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಲ್ಯಾಂಡ್ ಕ್ರೂಸರ್ ಈ ಹಿಂದೆ ಭಾರತದಲ್ಲಿ ಮಾರಾಟದಲ್ಲಿತ್ತು.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಾಕ್‌ರೌಂಡ್ ವಿಡಿಯೋ ಬಹಿರಂಗ

ಟೊಯೊಟಾ ಕಂಪನಿಯು ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 1951 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು. ಇದುವರೆಗೂ 170 ದೇಶಗಳಲ್ಲಿ ಲ್ಯಾಂಡ್ ಕ್ರೂಸರ್ ಮಾದರಿಯ 1.04 ಕೋಟಿ ಯೂನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಾಕ್‌ರೌಂಡ್ ವಿಡಿಯೋ ಬಹಿರಂಗ

ಈ ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯು ಹೊಸ ಟಿಎನ್‌ಜಿಎ (ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಬ್ರ್ಯಾಂಡ್‌ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಾಕ್‌ರೌಂಡ್ ವಿಡಿಯೋ ಬಹಿರಂಗ

2022ರ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ ಈ ಎಸ್‍ಯುವಿಯಲ್ಲಿ ಗ್ರಿಲ್, ಹೊಸ ಲೈಟಿಂಗ್ ಸೆಟಪ್, ಪರಿಷ್ಕೃತ ಟೈಲ್‌ಗೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಕೂಡ ಪಡೆದಿದೆ.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಾಕ್‌ರೌಂಡ್ ವಿಡಿಯೋ ಬಹಿರಂಗ

ಈ ಎಸ್‍ಯುವಿಯ ಇಂಟಿರಿಯರ್ ನಲ್ಲಿ ದೊಡ್ಡ ಟ್ಯಾಬ್ಲೆಟ್ ಶೈಲಿಯ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದೆ. ಪ್ರಸ್ತುತ ಮಾದರಿಯಂತಲ್ಲದೆ 4ಹೈ ಮತ್ತು 4ಲೋ ಮೋಡ್‌ಗಳನ್ನು ಹೊಂದಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಕೂಡ ಹೊಂದಿದೆ.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಾಕ್‌ರೌಂಡ್ ವಿಡಿಯೋ ಬಹಿರಂಗ

ಇದರೊಂದಿಗೆ ಫಿಸಿಕಲ್ ಡಯಲ್‌ಗಳನ್ನು ಹೊಂದಿರುವ ಗೇಜ್ ಕ್ಲಸ್ಟರ್ ಮತ್ತು ಇನ್ಫೋ ಡಿಸ್ ಪ್ಲೇ, ಹೀಟಡ್ ಸೀಟುಗಳು, ಜೆಬಿಎಲ್ ಆಡಿಯೋ, ಟೊಯೊಟಾ ಸೇಫ್ಟಿ ಸೆನ್ಸ್ ಪ್ಯಾಕೇಜ್ ಮತ್ತು ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ವಿಶ್ವದ ಮೊದಲ ಎಲೆಕ್ಟ್ರಾನಿಕ್ ಕೈನೆಟಿಕ್ ಡೈನಾಮಿಕ್ ಸಸ್ಪೆಂಕ್ಷನ್ ಸಿಸ್ಟಂ (ಇ-ಕೆಡಿಎಸ್ಎಸ್) ಅನ್ನು ಒಳಗೊಂಡಿದೆ. ಮಲ್ಟಿ-ಟೆರೈನ್ ಮಾನಿಟರ್ ಅನ್ನು ಒಳಗೊಂಡಿರುವ ಬ್ರ್ಯಾಂಡ್‌ನ ಮೊದಲ ಮಾದರಿಯಾಗಿದೆ.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಾಕ್‌ರೌಂಡ್ ವಿಡಿಯೋ ಬಹಿರಂಗ

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ವಾಕ್‌ರೌಂಡ್ ವಿಡಿಯೋ ಬಹಿರಂಗ

ಇದರಲ್ಲಿ 3.5-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 3.3-ಲೀಟರ್ ಟ್ವಿನ್-ಟರ್ಬೊ ವಿ6 ಂಜಿನ್ 304 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಈ ಎಂಜಿನ್ ಗಳೊಂದಿಗೆ 10-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

Article Published On: Wednesday, June 23, 2021, 19:22 [IST]
English summary
New Toyota Land Cruiser 300 Detailed In Walkaround Video. Read In Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+