ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಮಿನಿ ಅಡ್ವೆಂಚರ್ ಎಸ್‍ಯುವಿಯನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಟೊಯೊಟಾ ಯಾರಿಸ್ ಕ್ರಾಸ್ ಎಂದು ಕರೆಯಲ್ಪಡುವ ಈ ಮಾದರಿಯು ಬ್ರ್ಯಾಂಡ್‌ನ ಹೊಸ ಜಿಎ-ಬಿ ಕಾಂಪ್ಯಾಕ್ಟ್ ಕಾರ್ ಪ್ಲಾಟ್‌ಫಾರ್ಮ್‌ಗೆ ಆಧರಿಸಿದೆ.

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ಈ ಹೊಸ ಅಡ್ವೆಂಚರ್ ಎಸ್‍ಯುವಿಯು ಮೂಲ ಯಾರಿಸ್ ಮಾದರಿಯ ಗುಣಲಕ್ಷಣಗಳನ್ನು ಉಳಿಸಿಕೊಂಡಿದೆ. ಆದರೆ ಹೊಸ ಟೊಯೊಟಾ ಕ್ರಾಸ್ ಅಡ್ವೆಂಚರ್ ಒರಟಾದ ಮತ್ತು ಸ್ಪೋರ್ಟಿಯರ್ ವಿನ್ಯಾಸದಿಂದ ಕೂಡಿದೆ. ಈ ಹೊಸ ಮಾದರಿಯು ಜಿಎಸ್ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಸಾಮಾನ್ಯ ಮಾದರಿಯಂತಲ್ಲದೆ ಹೊಸ ಟೊಯೊಟಾ ಯಾರಿಸ್ ಕ್ರಾಸ್ ಅಡ್ವೆಂಚರ್ ಡ್ಯುಯಲ್-ಟೋನ್ 18-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ಈ ಸಣ್ಣ ಎಸ್‍ಯುವಿಯು ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್‌ಗಳ ಜೊತೆಗೆ ಬ್ಲ್ಯಾಕ್ ಔಟ್ ಒಆರ್‌ವಿಎಂಗಳು, ಪಿಲ್ಲರ್ ಗಳು ಮತ್ತು ರೂಫ್ ರೂಫ್ ರೈಲ್ ಅದರ ಸ್ಪೋರ್ಟಿಯರ್ ಲುಕ್ ಅನ್ನು ಹೆಚ್ಚಿಸುವಂತೆ ಇರುತ್ತದೆ. ಇನ್ನು ಇದರ ಫ್ರಂಟ್ ಡಿಫ್ಯೂಸರ್ ಮತ್ತು ಹಿಂಭಾಗದ ಬಂಪರ್ ಅನ್ನು ಸಹ ನವೀಕರಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ಹೊಸ ಟೊಯೊಟಾ ಕ್ರಾಸ್ ಅಡ್ವೆಂಚರ್ ಮಾದರಿಯು 4180 ಎಂಎಂ ಉದ್ದ, 1765 ಎಂಎಂ ಅಗಲ ಮತ್ತು 1560 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 2560 ಎಂಎಂ ಉದ್ದದ ವ್ಹೀಲ್ ಬೇಸ್‌ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ಇನ್ನು ಇದರ ಕ್ಯಾಬಿನ್‌ನೊಳಗೆ ಸ್ಪೋರ್ಟಿ ಬಿಟ್‌ಗಳನ್ನು ನೀಡಲಾಗುತ್ತಿದೆ. ಈ ಸಣ್ಣ ಎಸ್‍ಯುವಿಯಲ್ಲಿ ಬಕೆಟ್ ಶೈಲಿಯ ಸೀಟುಗಳು ಮತ್ತು ಬ್ಲ್ಯಾಕ್ ಹೆಡ್‌ಲೈನಿಂಗ್‌ನೊಂದಿಗೆ ಪಿಯಾನೋ-ಬ್ಲ್ಯಾಕ್ ಅಂಶಗಳನ್ನು ಪಡೆಯುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಕ್ರಾಸ್ ಅಡ್ವೆಂಚರ್ ಮಾದರಿಯು ಡೋರುಗಳ ಪ್ಯಾನೆಲ್ ಗಳಲ್ಲಿ ಮತ್ತು ಸೆಂಟರ್ ಕನ್ಸೋಲ್ ಒಳಗೆ ಸ್ಲಿಮ್ ಗೋಲ್ಡನ್ ಸ್ಟ್ರಿಪ್ ಅನ್ನು ಪಡೆಯುತ್ತದೆ. ಇದು ಹೆಚ್ಚು ಆಕರ್ಷಕವಾಗಿದೆ.

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ಹೊಸ ಅಡ್ವೆಂಚರ್ ಮಿನಿ ಎಸ್‍ಯುವಿಯನ್ನು ಆಧರಿಸಿ ಸ್ಪೆಷಲ್ ಯಾರಿಸ್ ಕ್ರಾಸ್ ಪ್ರೀಮಿಯರ್ ಆವೃತ್ತಿಯನ್ನು ಅಭಿವೃದ್ದಿಪಡಿಸುತ್ತಾರೆ. ಇದನ್ನು ಸೀಮಿತ ಅವಧಿಗೆ ಚಿಲ್ಲರೆ ಮಾರಾಟ ಮಾಡಲಾಗುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ಈ ಹೊಸ ಸ್ಪೆಷಲ್ ಎಡಿಷನ್ ಡ್ಯುಯಲ್-ಟೋನ್ ಕಲರ್ ಸ್ಕೀಮ್, 18 ಇಂಚಿನ ಮೆಷಿನ್ಡ್ ಅಲಾಯ್ ವ್ಹೀಲ್, ಕಿಕ್ ಸೆನ್ಸಾರ್‌ನೊಂದಿಗೆ ಚಾಲಿತ ಟೈಲ್‌ಗೇಟ್, ಎಕ್ಸ್‌ಕ್ಲೂಸಿವ್ ಲೆದರ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಹೆಡ್-ಅಪ್ ಡಿಸ್ ಪ್ಲೇಯನ್ನು ಒಳಗೊಂಡಿರುತ್ತದೆ.

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ನಾಲ್ಕನೇ ತಲೆಮಾರಿನ ಟೊಯೊಟಾ ಕ್ರಾಸ್ ಅಡ್ವೆಂಚರ್ ಮಾದರಿಯಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತ ಎಲೆಕ್ಟ್ರಿಕ್ ಹೈಬ್ರಿಡ್ ತಂತ್ರಜ್ಞಾನವಾಗಿದ್ದು, ಈ ಎಲೆಕ್ಟ್ರಿಕ್ ಮೋಟರ್ ಹೊಂದಿರುವ 1.5 ಎಲ್ ಪೆಟ್ರೋಲ್ ಅಟ್ಕಿನ್ಸನ್-ಸೈಕಲ್ ಎಂಜಿನ್ ಅನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

ಈ ಮೋಟಾರ್ 115 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದನ್ನು 2ಡಬ್ಲ್ಯುಡಿ ಅಥವಾ 4ಡಬ್ಲ್ಯುಡಿ ಸಿಸ್ತಂ ಅನ್ನು ಹೊಂದಿರುತ್ತದೆ. ಇದರೊಂದಿಗೆ ಇಂಟಿಲಿಜೆಟ್ ಆಟೋಮ್ಯಾಟಿಕ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ.

ಆಕರ್ಷಕ ವಿನ್ಯಾಸದ ಸಣ್ಣ ಅಡ್ವೆಂಚರ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಟೊಯೊಟಾ

2021ರ ಟೊಯೊಟಾ ಯಾರಿಸ್ ಕ್ರಾಸ್ ಅಡ್ವೆಂಚರ್ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆಯಾಗಬಹುದು. ಇದರ ವಿತರಣೆಯು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗಬಹುದು.ಇನ್ನು ಈ ಅಡ್ವೆಂಚರ್ ಮಿನಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.

Most Read Articles

Kannada
Read more on ಟೊಯೊಟಾ toyota
English summary
Toyota Yaris Cross Adventure Unveiled. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X