ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರನ್ನು ಅನಾವರಣಗೊಳಿಸಿದೆ. ಈ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಹಲವಾರು ಹೊಸ ನವೀಕರಿರಣಗಳನ್ನು ಪಡೆದುಕೊಂಡಿದೆ.

ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

ಹೊಸ ತಲೆಮಾರಿನ ಪೊಲೊದಲ್ಲಿ ಬಳಸಲಾಗುವ ಅದೇ ಎಂಕ್ಯೂಬಿ ಎಒ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ನವೀಕರಿಸಿದ ಈ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಡಿಆರ್‌ಎಲ್‌ಗಳೊಂದಿಗೆ ಹನಿಕೊಬ್ ಮೆಶ್ ಗ್ರಿಲ್, ಹೊಸದಾಗಿ ವಿನ್ಯಾಸಗೊಳಿಸಲಾದ 'ಐಕ್ಯೂ 'ಲೈಟ್' ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳ ಜೊತೆಗೆ ಪೂರ್ಣ-ಅಗಲದ ಫ್ರಂಟ್ ಲೈಟ್ ಬಾರ್ ಅನ್ನು ಒಳಗೊಂಡಿರುವ ಸಂಪೂರ್ಣ ಹೊಸ ಮುಂಭಾಗದ ಫಾಸಿಕವನ್ನು ಒಳಗೊಂಡಿದೆ.

ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

ಈ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು ಲೈಟ್ ಬಾರ್ ಫೋಕ್ಸ್‌ವ್ಯಾಗನ್ ನ್‌ನಿಂದ ಬ್ಯಾಟರಿ-ಎಲೆಕ್ಟ್ರಿಕ್ ಐಡಿ ಮಾದರಿಗಳಿಗೆ ಮತ್ತು ಗಾಲ್ಫ್, ಆರ್ಟಿಯಾನ್ ಮತ್ತು ಟಿಗ್ವಾನ್ ನಂತಹ ಯಶಸ್ವಿ ಮಾದರಿಗಳ ಹೊಸ ವಾಹನ ಪೀಳಿಗೆಗೆ ಶೈಲಿಯ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

ಈ ಕಾರಿನಲ್ಲಿ ಹೊಸ ವಿನ್ಯಾಸದ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, ಗಾಲ್ಫ್‌ಗೆ ಹೋಲುತ್ತವೆ, ಮೊದಲ ಬಾರಿಗೆ ಈ ಹಾಟ್ ಹ್ಯಾಚ್ ಡೈನಾಮಿಕ್ ಟರ್ನ್ ಸಿಗ್ನಲ್‌ಗಳನ್ನು ಪಡೆಯುತ್ತದೆ. ಇತರೆ ಪ್ರಮುಖ ನವೀಕರಣಗಳು ಬ್ಯಾಕ್ ಮೀರರ್ ಮತ್ತು ರೂಫ್, ವೈಡರ್ ಟೇಲ್ ಲ್ಯಾಂಪ್, ರೆಡ್ ಬ್ರೇಕ್ ಕ್ಯಾಲಿಪರ್ಸ್, ಎರಡು ಎಕ್ಸಾಸ್ಟ್ ಟಿಪ್ಸ್ ಮತ್ತು ನವೀಕರಿಸಿದ ಹಿಂಭಾಗದ ಬಂಪರ್ ಅನ್ನು ಹೊಂದಿದೆ,

ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

ಈ ಕಾರಿನಲ್ಲಿ ಬೆಸ್ಪೋಕ್ ಚಾಸಿಸ್, ಮುಂಭಾಗದ ಆಕ್ಸಲ್ನಲ್ಲಿ ದೊಡ್ಡ ಸ್ಟೆಬಿಲೈಜರ್, ಹಿಂಭಾಗದಲ್ಲಿ ಗಟ್ಟಿಯಾದ ಆಕ್ಸಲ್ ಲೊಕೇಟಿಂಗ್ ಮೌಂಟ್ಸ್, ಮುಂಭಾಗದಲ್ಲಿ ಕಟ್ಟುನಿಟ್ಟಿನ ಜೋಡಣೆ ರಾಡ್ಗಳು ಮತ್ತು ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

ಹೊಸ ಪೊಲೊ ಜಿಟಿಐ ಮೊದಲ ಬಾರಿಗೆ ಫೋಕ್ಸ್‌ವ್ಯಾಗನ್‌ನ ಟ್ರಾವೆಲ್ ಅಸಿಸ್ಟ್ ಸಿಸ್ಟಂ ಅನ್ನು ಪಡೆಯುತ್ತದೆ. ಇದು ಲೇನ್ ಅಸಿಸ್ಟ್, ಸೈಡ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಹಿಂಭಾಗದ ಟ್ರಾಫಿಕ್ ಅಲರ್ಟ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಹೊಂದಿರುವ ಗಾಲ್ಫ್ ಮತ್ತು ಐಡಿ 3 ಮಾದರಿಗಳಂತೆಯೇ ಹಾಟ್ ಹ್ಯಾಚ್ ವೋಕ್ಸ್‌ವ್ಯಾಗನ್‌ನ ಹೊಸ 'ಡಿಜಿಟಲ್ ಕಾಕ್‌ಪಿಟ್' ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ.

ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

ಡಿಸ್ಕವರ್ ಮತ್ತು ಡಿಸ್ಕವರ್ ಪ್ರೊ ಮೀಡಿಯಾ ಸಿಸ್ಟಂಗಳನ್ನು ಒಳಗೊಂಡಿವೆ. ಪೀಚರ್ಸ್ ಗಳ ಪಟ್ಟಿಯಲ್ಲಿ ಬೀಟ್ಸ್ ಸೌಂಡ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್, ವಾಯ್ಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್ (ಸ್ಟ್ಯಾಂಡರ್ಡ್),ಆಟೋಮ್ಯಾಟಿಕ್ ಪೋಸ್ಟ್-ಡಿಕ್ಕಿ ಬ್ರೇಕಿಂಗ್, ಡ್ರೈವರ್ ಅಲರ್ಟ್ ಸಿಸ್ಟಂ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ.

ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರಿನಲ್ಲಿ ಅದೇ 2.0 ಎಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು 2021ರ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಫೇಸ್‌ಲಿಫ್ಟ್ ಕಾರು

ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಕಾರು 6.5 ಸೆಕೆಂಡುಗಳಲ್ಲಿ 0-632 ಮೈಲ್ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Thursday, July 1, 2021, 12:38 [IST]
English summary
2021 Volkswagen Polo GTI Facelift Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+