2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ 2021ರ ಟಿ-ರಾಕ್ ಎಸ್‍ಯುವಿಯನ್ನು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಎಕ್ಸ್ ಶೋರೂಂ ಪ್ರಕಾರ ರೂ.21.35 ಲಕ್ಷ ಬೆಲೆ ಹೊಂದಿರುವ ಹೊಸ ಕಾರಿನ ಖರೀದಿಗೆ ಕಂಪನಿಯು ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದೆ.

2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೊಸ ಆಮದು ನೀತಿ ಅಡಿಯಲ್ಲಿ ಭಾರತದಲ್ಲಿ ಮಾರಾಟಗೊಳ್ಳುವ ಟಿ-ರಾಕ್ ಕಾರು ಮಾದರಿಯು ಸೀಮಿತ ಸಂಖ್ಯೆಯ ಮಾರಾಟ ಸೌಲಭ್ಯ ಹೊಂದಿದ್ದು, ಒಂದು ಬಾರಿ ಬುಕ್ಕಿಂಗ್ ಸ್ವಿಕರಿಸಿದ ನಂತರ ಮೂರು ಹಂತದಲ್ಲಿ ಹೊಸ ಕಾರನ್ನು ವಿತರಣೆ ಮಾಡಲಾಗುತ್ತಿದೆ. ಸಿಬಿಯು ಆಮದು ನೀತಿ ಅಡಿಯಲ್ಲಿ ಸಂಪೂರ್ಣವಾಗಿ ವಿದೇಶದಲ್ಲಿಯೇ ನಿರ್ಮಾಣಗೊಂಡು ಭಾರತದಲ್ಲಿ ಮಾರಾಟವಾಗುವ ಹೊಸ ಕಾರು ಪ್ರತಿ ಸ್ಪರ್ಧಿ ಕಾರು ಮಾದರಿಗಿಂತಲೂ ಹಲವಾರು ವಿಶೇಷತೆಗಳನ್ನು ಹೊಂದಿದೆ.

2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಪ್ರೀಮಿಯಂ ಮಿಡ್ ಸೈಜ್ ಎಸ್‍ಯುವಿಯಾದ ಟಿ-ರಾಕ್ ಕಾರು ಮಾದರಿಯು ಕಳೆದ ಆವೃತ್ತಿಗಿಂತಲೂ ಈ ಬಾರಿ ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಹಳೆಯ ಮಾದರಿಗಿಂತ ರೂ.1.36 ಲಕ್ಷ ಹೆಚ್ಚುವರಿ ದರ ಪಡೆದುಕೊಂಡಿದೆ.

2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಎಸ್‌ಯುವಿ ಸರಣಿ ಹೆಚ್ಚಿಸಲು ಆಕ್ರಮಣಕಾರಿ ಮಾರುಕಟ್ಟೆ ತಂತ್ರವನ್ನು ಅನುಸರಿಸುತ್ತಿದ್ದು, ಈ ವರ್ಷ ಟಿ-ರಾಕ್ ಸೇರಿದಂತೆ ವಿವಿಧ ವಿಭಾಗಗಳಿಗೆ 4 ಹೊಸ ಎಸ್‌ಯುವಿ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ.

2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಭಾರತೀಯ ಮಾರುಕಟ್ಟೆಯಲ್ಲಿ ಟಿಗ್ವಾನ್ ಆಲ್-ಸ್ಪೇಸ್ ಮತ್ತು ಟಿಗ್ವಾನ್ 5 ಸೀಟರ್ ಎಸ್‍ಯುವಿ ನಡುವಿನ ಸ್ಥಾನದಲ್ಲಿ ಟಿ-ರಾಕ್ ಅನ್ನು ಇರಿಸಲಾಗಿದ್ದು, ಹೊಸ ಕಾರು ಹಳೆಯ ಮಾದರಿಯಂತೆಯೇ ತಾಂತ್ರಿಕವಾಗಿ ಬಲಿಷ್ಠವಾಗಿದೆ. ಟಿ-ರಾಕ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಲೀಕ್ ಗ್ರಿಲ್ ಅನ್ನು ಹೊಂದಿದ್ದು, ಎರಡೂ ಬದಿಯಲ್ಲಿ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ನೀಡಲಾಗಿದೆ. ಈ ಎಸ್‍‍ಯುವಿನ ಹೊಸ ಬಂಪರ್ ಅನ್ನು ಹೊಂದಿದ್ದು, ದೊಡ್ಡ ಮಡ್ ಗ್ರಿಲ್ ಏರ್ ಇನ್‍‍ಟೇಕ್ ಹೊಂದಿದೆ.

2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೊಸ ಎಸ್‍‍ಯುವಿಯ ಮುಂಭಾಗದಲ್ಲಿ ಎಲ್‍ಇ‍ಡಿ ಡಿಆರ್‍ಎಲ್‍ಗಳನ್ನು ಸಹ ಅಳವಡಿಸಲಾಗಿದ್ದು, 5 ಸ್ಪೋಕ್ ಅಲಾಯ್ ವ್ಹೀಲ್, ಹಿಂಭಾಗದಲ್ಲಿ ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಎಲ್‍ಇಡಿ ಟೈಲ್‍ ಲೈಟ್‍, ಹಿಂಭಾಗದಲ್ಲಿ ಬಂಪರ್ ಮತ್ತು ಸ್ಕಫ್ ಪ್ಲೇಟ್‍‍ಗಳನ್ನು ಹೊಂದಿವೆ.

2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಹಾಗೆಯೇ ಹೊಸ ಎಸ್‍‍ಯುವಿಯಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಸುರಕ್ಷತೆಗಾಗಿ ಟಿ-ರಾಕ್ ಕಾರು ಮಾದರಿಯಲ್ಲಿ ಕಂಪನಿಯು ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಒಳಗೊಂಡಿದ್ದು, ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿದೆ.

2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍‍ಯುವಿನಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯಿದ್ದು, ಈ ಎಂಜಿನ್ 148 ಬಿ‍ಹೆಚ್‍ಪಿ ಪವರ್ ಮತ್ತು 250 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಅನ್ನು ನೀಡಲಾಗಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

2021ರ ಟಿ-ರಾಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಫೋಕ್ಸ್‌ವ್ಯಾಗನ್

2021ರ ಫೋಕ್ಸ್‌ವ್ಯಾಗನ್‍ ಟಿ-ರಾಕ್ ಎಸ್‍ಯುವಿಯು ಕೇವಲ 8.4 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದ್ದು, ಹೊಸ ಟಿ-ರಾಕ್ ಎಸ್‍ಯುವಿಯು ಪ್ರತಿ ಗಂಟೆಗೆ 205 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

More from DriveSpark

Article Published On: Thursday, May 6, 2021, 21:29 [IST]
English summary
Volkswagen T-Roc Bookings Open, Delivery Starts Soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+