ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

ಜರ್ಮನಿ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ 2021ರ ಟಿ-ರಾಕ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.35 ಲಕ್ಷಗಳಾಗಿದೆ.

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

ಬಿಡುಗಡೆಗೊಂಡ ಈ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು ಭಾರತದಲ್ಲಿರುವ ಯಾವುದೇ ಫೋಕ್ಸ್‌ವ್ಯಾಗನ್ ಡೀಲರ್ ಬಳಿ ತೆರಳಿ ಅಥವಾ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಟಿ-ರಾಕ್ ಎಸ್‍ಯುವಿಯ ವಿತರಣೆಯು ಮೇ ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಫೋಕ್ಸ್‌ವ್ಯಾಗನ್ ಹೇಳಿದೆ.

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

ಪ್ರೀಮಿಯಂ ಮಿಡ್ ಸೈಜ್ ಎಸ್‍ಯುವಿಯಾದ ಟಿ-ರಾಕ್ ಅನ್ನು ಸಿಬಿಯು ಆಗಿ ಭಾರತಕ್ಕೆ ತರಲಾಗುತ್ತದೆ. ಇದರ ಪರಿಣಾಮವಾಗಿ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ಬೆಲೆಯು ಹಿಂದಿನ ಮಾದರಿಗಿಂತ ರೂ.1.36 ಲಕ್ಷ ಹೆಚ್ಚಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಆಕ್ರಮಣಕಾರಿ ಮಾರುಕಟ್ಟೆ ತಂತ್ರವನ್ನು ಅನುಸರಿಸುತ್ತಿದ್ದಾರೆ. ಈ ವರ್ಷ ಟಿ-ರಾಕ್ ಸೇರಿದಂತೆ ವಿವಿಧ ವಿಭಾಗಗಳಿಗೆ 4 ಹೊಸ ಎಸ್‌ಯುವಿ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ.

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

ಬೆಲೆ ಏರಿಕೆಯ ಹೊರತಾಗಿ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯಯಲ್ಲಿ ಯಾವುದೇ ಬದಲಾವಣೆಗಳಿಲ್ಲ, ಸಂಪೂರ್ಣವಾಗಿ ಹಿಂದಿನ ಮಾದರಿಯಂತಿದೆ, ಭಾರತೀಯ ಮಾರುಕಟ್ಟೆಯಲ್ಲಿ ಟಿಗ್ವಾನ್ ಆಲ್-ಸ್ಪೇಸ್ ಮತ್ತು ಟಿಗ್ವಾನ್ 5 ಸೀಟರ್ ಎಸ್‍ಯುವಿ ನಡುವಿನ ಸ್ಥಾನದಲ್ಲಿ ಟಿ-ರಾಕ್ ಅನ್ನು ಇರಿಸಲಾಗುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

ವಿನ್ಯಾಸ

ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಲೀಕ್ ಗ್ರಿಲ್ ಅನ್ನು ಹೊಂದಿದೆ ಮತ್ತು ಮುಂಭಾಗದ ಎರಡೂ ಬದಿಯಲ್ಲಿ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ನೀಡಲಾಗಿದೆ. ಈ ಎಸ್‍‍ಯುವಿನ ಹೊಸ ಬಂಪರ್ ಅನ್ನು ಹೊಂದಿದ್ದು, ದೊಡ್ಡ ಮೆಡ್ ಗ್ರಿಲ್ ಏರ್ ಇನ್‍‍ಟೇಕ್ ಹೊಂದಿದೆ.

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

ಈ ಎಸ್‍‍ಯುವಿಯ ಮುಂಭಾಗದಲ್ಲಿ ಎಲ್‍ಇ‍ಡಿ ಡಿಆರ್‍ಎಲ್‍ಗಳನ್ನು ಸಹ ಅಳವಡಿಸಲಾಗಿದೆ. ಹೊಸ ಟಿ-ರಾಕ್ ಎಸ್‍‍ಯುವಿನಲ್ಲಿ 5 ಸ್ಪೋಕ್ ಅಲಾಯ್ ವ್ಹೀಲ್, ಹಿಂಭಾಗದಲ್ಲಿ ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಎಲ್‍ಇಡಿ ಟೈಲ್‍ ಲೈಟ್‍‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಬಂಪರ್ ಮತ್ತು ಸ್ಕಫ್ ಪ್ಲೇಟ್‍‍ಗಳನ್ನು ಹೊಂದಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

ಈ ಎಸ್‍‍ಯುವಿಯ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದೆ. ಇನ್ನು ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿವೆ.

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

ಎಂಜಿನ್

ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍‍ಯುವಿನಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 148 ಬಿ‍ಹೆಚ್‍ಪಿ ಪವರ್ ಮತ್ತು 250 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಅನ್ನು ನೀಡಲಾಗಿದೆ.

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

2021ರ ಫೋಕ್ಸ್‌ವ್ಯಾಗನ್‍ ಟಿ-ರಾಕ್ ಎಸ್‍ಯುವಿಯು ಕೇವಲ 8.4 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ ಟಿ-ರಾಕ್ ಎಸ್‍ಯುವಿಯು ಪ್ರತಿ ಗಂಟೆಗೆ 205 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಬಹುನಿರೀಕ್ಷಿತ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ ಬಿಡುಗಡೆ

2021ರ ಫೋಕ್ಸ್‌ವ್ಯಾಗನ್‍ನ ಟಿ-ರಾಕ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಕಿಯಾ ಸೆಲ್ಟೋಸ್ ಮತ್ತು ಸ್ಕೋಡಾ ಕರೋಕ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ

Most Read Articles

Kannada
English summary
2021 Volkswagen T-Roc Launched In India At Rs 21.35 Lakh. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X