Just In
- 51 min ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 3 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 3 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 5 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- News Namma Metro Blue Line: ಇತರ ಮಾರ್ಗಕ್ಕಿಂತಲೂ 'ನೀಲಿ' ಮಾರ್ಗದಲ್ಲಿ ವೇಗವಾಗಿ ಓಡಲಿವೆ ಮೆಟ್ರೋ, ಅಪ್ಡೇಟ್
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಟಿ-ರಾಕ್ ಎಸ್ಯುವಿಯ ಬೆಲೆ ಹೆಚ್ಚಿಸಿದ ಫೋಕ್ಸ್ವ್ಯಾಗನ್
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯನ್ನು 2020ರ ಮಾರ್ಚ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಟಿ-ರಾಕ್ ಎಸ್ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿತ್ತು.
ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯಲ್ಲಿ ಐಷಾರಾಮಿ ಫೀಚರ್ಸ್ ಹೊಂದಿದೆ. ಫೋಕ್ಸ್ವ್ಯಾಗನ್ ಕಂಪನಿಯು ಈ ಎಸ್ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಭಾರತದಲ್ಲಿ ಟಿ-ರಾಕ್ ಎಸ್ಯುವಿಯ ಮೊದಲ ಬ್ಯಾಚ್ ಆಗಿ 1,000 ಯುನಿಟ್ಗಳನ್ನು ಬಿಡುಗಡೆಗೊಳಿಸಿದ್ದರು. ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿ ಎಲ್ಲಾ ಯುನಿಟ್ಗಳು ಕಡಿಮೆ ಅವಧಿಯಲ್ಲಿ ಮಾರಾಟಗೊಳಿಸಿತ್ತು. ಇದರಿಂದ ಫೋಕ್ಸ್ವ್ಯಾಗನ್ ಕಂಪನಿಯು ಟಿ-ರಾಕ್ ಎಸ್ಯುವಿಯ ಬುಕ್ಕಿಂಗ್ ಸ್ವೀಕಿರಿಸುವುದನ್ನು ನಿಲ್ಲಿಸಲಾಗಿತ್ತು.
ಮೊದಲ ಬ್ಯಾಚ್ನ ಯುನಿಟ್ಗಳು ಮಾರಾಟವಾಗಿರುವುದರಿಂದ ಎರಡನೇ ಬ್ಯಾಚ್ ಆಮದುಮಾಡಿಕೊಳ್ಳಲಿದೆ. ಫೋಕ್ಸ್ವ್ಯಾಗನ್ ಕಂಪನಿಯು ಎರಡನೇ ಬ್ಯಾಚ್ನಲ್ಲಿ 2,500 ಯುನಿಟ್ಗಳನ್ನು ಸಿಬಿಯು ಮಾರ್ಗದ ಮೂಲಕ ಆಮದುಮಾಡಿಕೊಳ್ಳಬಹುದು.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
ಇದೀಗ ಫೋಕ್ಸ್ವ್ಯಾಗನ್ ಕಂಪನಿ ತನ್ನ ಟಿ-ರಾಕ್ ಎಎಸ್ಯುವಿ ಖರೀದಿಗೆ ಬುಕ್ಕಿಂಗ್ ಪುನಾರಂಭಿಸಿದೆ. ಫೋಕ್ಸ್ವ್ಯಾಗನ್ ಕಂಪನಿಯು ಕಳೆದ ವರ್ಷ 2020ರಲ್ಲಿ ರೂ.19.99 ಲಕ್ಷಕ್ಕೆ ಈ ಟಿ-ರಾಕ್ ಎಸ್ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಇದರ ಬೆಲೆಯನ್ನು ರೂ. 1.36 ಲಕ್ಷದವರೆಗೂ ಹೆಚ್ಚಿಸಿದೆ ಎಂದು ವರಿದಿಯಾಗಿದೆ.
ಟಿ-ರಾಕ್ ಎಸ್ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಲೀಕ್ ಗ್ರಿಲ್ ಅನ್ನು ಹೊಂದಿದೆ ಮತ್ತು ಮುಂಭಾಗದ ಎರಡೂ ಬದಿಯಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳನ್ನು ನೀಡಲಾಗಿದೆ. ಈ ಎಸ್ಯುವಿನ ಹೊಸ ಬಂಪರ್ ಅನ್ನು ಹೊಂದಿದ್ದು, ದೊಡ್ಡ ಮೆಡ್ ಗ್ರಿಲ್ ಏರ್ ಇನ್ಟೇಕ್ ಅನ್ನು ಹೊಂದಿದೆ.
MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ
ಈ ಎಸ್ಯುವಿಯ ಮುಂಭಾಗದಲ್ಲಿ ಎಲ್ಇಡಿ ಡಿಆರ್ಎಲ್ಗಳನ್ನು ಸಹ ಅಳವಡಿಸಲಾಗಿದೆ. ಹೊಸ ಟಿ-ರಾಕ್ ಎಸ್ಯುವಿನಲ್ಲಿ 5 ಸ್ಪೋಕ್ ಅಲಾಯ್ ವ್ಹೀಲ್, ಹಿಂಭಾಗದಲ್ಲಿ ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಎಲ್ಇಡಿ ಟೈಲ್ ಲೈಟ್ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಬಂಪರ್ ಮತ್ತು ಸ್ಕಫ್ ಪ್ಲೇಟ್ಗಳನ್ನು ನೀಡಿದೆ.
ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯ ಪ್ರೀಮಿಯಂ ಫೀಚರ್ಸ್ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದೆ. ಇನ್ನು ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್ಬ್ಯಾಗ್ಗಳು, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿನಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 148 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಜೋಡಿಸಲಾಗಿದೆ.
ಫೋಕ್ಸ್ವ್ಯಾಗನ್ನ ಟಿ-ರಾಕ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಕಿಯಾ ಸೆಲ್ಟೋಸ್ ಮತ್ತು ಸ್ಕೋಡಾ ಕರೋಕ್ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ. ಫೋಕ್ಸ್ವ್ಯಾಗನ್ನ ಟಿ-ರಾಕ್ ಖರೀದಿಸಲು ಬಯಸುವವರು ಹತ್ತಿರದ ಫೋಕ್ಸ್ವ್ಯಾಗನ್ನ ಡೀಲರ್ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.