ಹೊಸ ಫೋಕ್ಸ್‌ವ್ಯಾಗನ್ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ಜರ್ಮನಿ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಹೊಸ ಟೈಗೋ ಕೂಪ್ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸುತ್ತಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಟೈಗೋ ಎಸ್‍ಯುವಿಯನ್ನು ಮೊದಲಿಗೆ ಯುರೋಪಿನ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ಹೊಸ ಫೋಕ್ಸ್‌ವ್ಯಾಗ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಟೈಗೋ ಕೂಪ್ ಎಸ್‍ಯುವಿಯ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿವೆ. ಈ ಚಿತ್ರಗಳಲ್ಲಿ ಟೈಗೋ ಅಗ್ರೇಸಿವ್ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಇದು ಬ್ರೆಜಿಲ್‌ನಲ್ಲಿ ಮಾರಾಟವಾಗುವ ನಿವಸ್ ಕೂಪ್ ಎಸ್‍ಯುವಿಯಂತೆ ಇರುತ್ತದೆ. ಟೈಗೋ ಮಾದರಿಯು ನಿವಸ್ ಅನ್ನು ಆಧರಿಸಿದೆ ಮತ್ತು ಸ್ಪೇನ್‌ನ ಪ್ಯಾಂಪ್ಲೋನಾದಲ್ಲಿ ಯುರೋಪಿಯನ್ ಮಾರುಕಟ್ಟೆಗೆ ತಯಾರಾಗಲಿದೆ.

ಹೊಸ ಫೋಕ್ಸ್‌ವ್ಯಾಗ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ಫೋಕ್ಸ್‌ವ್ಯಾಗನ್ ಟೈಗೋಎಸ್ ಎಸ್ಐ ಎಂಜಿನ್, ಎಲ್ಇಡಿ ಹೆಡ್ ಲೈಟ್ ಗಳನ್ನು ಸ್ಟ್ಯಾಂಡರ್ಡ್ ಆಗಿ, ಆಧುನಿಕ ಆಪರೇಟಿಂಗ್ ಕಾನ್ಸೆಪ್ಟ್, ಸಂಪೂರ್ಣ ಡಿಜಿಟಲ್ ಕಾಕ್ಪಿಟ್ ಮತ್ತು ಇತರ ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಫೋಕ್ಸ್‌ವ್ಯಾಗ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ನಿವಸ್ ಕೊಪೆ ಎಸ್‍ಯುವಿಯನ್ನು ಎಂಕ್ಯೂಬಿ ಎ 0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಬೋಲ್ಡ್ ಗ್ರಿಲ್ ಅಪ್ ಫ್ರಂಟ್ ಸ್ಪೋರ್ಟಿಂಗ್ ರೆಸ್ಟೈಲ್ಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಇಂಟಿಗ್ರೇಟೆಡ್ ಡಿಆರ್‌ಎಲ್ ಮತ್ತು ಹೊಸ ಲಂಬವಾಗಿ ಜೋಡಿಸಲಾದ ಫಾಗ್ ಲ್ಯಾಂಪ್ ಗಳನ್ನು ಹೊಂದಿವೆ.

ಹೊಸ ಫೋಕ್ಸ್‌ವ್ಯಾಗ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಈ ಹೊಸ ಎಸ್‍ಯುವಿಯಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಮತ್ತು ಬಂಪರ್ ಒರಟಾದ ಲುಕ್ ನೀಡುತ್ತದೆ. ಇನ್ನು ಈ ಎಸ್‍ಯುವಿಗೆ ಸ್ಪೋರ್ಟಿ ಲುಕ್ ನೀಡುವ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಫೋಕ್ಸ್‌ವ್ಯಾಗ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ನಿವಸ್ ಕೊಪೆ ಎಸ್‍ಯುವಿಯು 4,266 ಎಂಎಂ ಉದ್ದ, 1,757 ಎಂಎಂ ಅಗಲ ಮತ್ತು 1,493 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 2,566 ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಹೊಸ ಫೋಕ್ಸ್‌ವ್ಯಾಗ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಈ ಹೊಸ ಕೂಪೆ ಎಸ್‍ಯುವಿಯು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 128 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಆರು-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಫೋಕ್ಸ್‌ವ್ಯಾಗ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಭಾರತದಲ್ಲಿ ಫೋಕ್ಸ್‌ವ್ಯಾಗನ್ ತನ್ನ ಟಿಗ್ವಾನ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಟಿಗ್ವಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಗೆ ಹೊಸದಲ್ಲ, ಈ ಹಿಂದೆ ಮಾರಾಟದಲ್ಲಿತ್ತು. ಆದರೆ ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ಟಿಗ್ವಾನ್ ಎಸ್‍ಯುವಿಯನ್ನು ಹೊಸ ಅವತಾರದಲ್ಲಿ ಪರಿಚಯಿಸಿದೆ. ಟಿಗ್ವಾನ್ ಎಸ್‍ಯುವಿ ಎಲ್ಲಾ ಹೊಸ ವಿನ್ಯಾಸ, ನೂತನ ವೈಶಿಷ್ಟ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಎಂಜಿನ್ ಅನ್ನು ಪಡೆದುಕೊಂಡಿದೆ.

ಹೊಸ ಫೋಕ್ಸ್‌ವ್ಯಾಗ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ಇದರೊಂದಿಗೆ ಫೋಕ್ಸ್‌ವ್ಯಾಗನ್ ತನ್ನ 2021ರ ಟಿ-ರಾಕ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.35 ಲಕ್ಷಗಳಾಗಿದೆ. ಬಿಡುಗಡೆಗೊಂಡ ಈ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ.

ಹೊಸ ಫೋಕ್ಸ್‌ವ್ಯಾಗ ಟೈಗೋ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಟೈಗೋ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಕ್ಕೆ ಸಾಧ್ಯತೆಗಳಿಲ್ಲ, ಈ ಫೋಕ್ಸ್‌ವ್ಯಾಗನ್ ಟೈಗೋ ಎಸ್‍ಯುವಿಯು ಯುರೋಪಿನ ಮಾರುಕಟ್ಟೆಗಳಲ್ಲಿ ಈ ವರ್ಷ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು.

More from DriveSpark

Article Published On: Thursday, April 1, 2021, 10:12 [IST]
English summary
Volkswagen Taigo Coupe SUV Teased For The European Market. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+