ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿಯು ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಈ ಹೊಸ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ನಡೆಸಿದೆ. ಈ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುವ ಸ್ಪೈ ಚಿತ್ರಗಳನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ್ದರು. ಹೊಸ ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಫೋಕ್ಸ್‌ವ್ಯಾಗನ್ 2.0 ಯೋಜನೆಯಡಿಯಲ್ಲಿ ಬಿಡುಗಡೆಯಾಗಲಿರುವ ಮೊದಲ ಮಾದರಿ ಟೈಗನ್ ಆಗಿರಲಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಟೈಗನ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಟಿಎಸ್ಐ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ ಎಂದು ಫೋಕ್ಸ್‌ವ್ಯಾಗನ್ ಬಹಿರಂಗಪಡಿಸಿದೆ. ಟಿ-ರಾಕ್ ಮಾದರಿಯಲ್ಲಿ ಕಂಡುಬರುವಂತಹ ಲೀಟರ್ 1.5 ಲೀಟರ್ ಅಥವಾ 1.0-ಲೀಟರ್ ಲೀಟರ್ ಎಂಬ ಮಾಹಿತಿಯನ್ನು ಕಂಪನಿಯು ಬಹಿರಂಗಪಡಿಸಿಲ್ಲ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಇದರಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಈಗಗಾಲೇ ಹೊಸ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿಯ ಹೆಸರನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಹೊಸ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿನ್ಯಾಸವು ಟಿ-ಕ್ರಾಸ್ ಎಸ್‍ಯುವಿಗೆ ಹೋಲುತ್ತದೆ. ಮುಂಭಾಗದಲ್ಲಿ ಸಾಕಷ್ಟು ಪ್ರಮಾಣದ ಕ್ರೋಮ್ ಅನ್ನು ಬಳಸಲಾಗುತ್ತದೆ ಗ್ರಿಲ್ ಕ್ರೋಮ್ ಅಲಂಕರಿಸುವಿಕೆಯೊಂದಿಗೆ ಸ್ಲ್ಯಾಟ್‌ಗಳನ್ನು ಪಡೆಯುತ್ತದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಇದರ ಹೆಡ್‌ಲ್ಯಾಂಪ್‌ಗಳು ನಯವಾದ ಯುನಿಟ್ ಗಳಾಗಿವೆ ಮತ್ತು ಗ್ರಿಲ್‌ನ ವಿಸ್ತೃತ ಭಾಗದಂತೆ ಕಾಣುತ್ತವೆ. ಫಾಗ್ ಲ್ಯಾಂಪ್ ಗಳ ಸುತ್ತ ಕ್ರೋಮ್ ಸ್ಟ್ರಿಪ್ ಇದೆ ಮತ್ತು ಸ್ಕಿಡ್ ಪ್ಲೇಟ್ ಇದಕ್ಕೆ ಬಹಳ ಮಸ್ಕಲರ್ ನಿಲುವನ್ನು ನೀಡುತ್ತದೆ. ಇನ್ನು ಎಸ್‍ಯುವಿಯ ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಅನ್ನು ಹೊಂದಿದ್ದು, ಇದು ಆಲ್-ಎಲ್ಇಡಿ ಆಗಿದ್ದು, ಅದು ಬೂಟ್‌ನಾದ್ಯಂತ ಚಲಿಸುತ್ತದೆ. ಮಧ್ಯದಲ್ಲಿ ಫೋಕ್ಸ್‌ವ್ಯಾಗನ್ ಲೋಗೋವನ್ನು ಇರಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಮುಂಭಾಗದಲ್ಲಿರುವಂತೆಯೇ, ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್ ಮತ್ತು ಅದರ ಮೇಲೆ ಕ್ರೋಮ್ ಅಲಂಕರಿಸುವ ಬಂಪರ್ ಹೊಂದಿದೆ. ಇನ್ನು ಈ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಈ ವಿಭಾಗದ ಕಾರುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆಧುನಿಕ ಫಿಚರ್ ಗಳೊಂದಿಗೆ ಪ್ರೀಮಿಯಂ ಕಾಣುವ ಕ್ಯಾಬಿನ್ ಪಡೆಯಲಿದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಇದರಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಎಲೆಕ್ಟ್ರಿಕ್ ಸನ್‌ರೂಫ್, ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮುಂತಾದ ಫೀಚರ್ ಗಳನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಈ ಪ್ಲಾಟ್‌ಫಾರ್ಮ್ ಪಡೆದ ಭಾರತದ ಮೊದಲ ವಾಹನವಾಗಿದೆ. ಹೊಸ ಫೋಕ್ಸ್‌ವ್ಯಾಗನ್ ಟೈಗನ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Friday, January 29, 2021, 12:27 [IST]
English summary
Volkswagen Taigun Spied Testing In India For The First Time. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+