Just In
- 8 min ago
ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ
- 40 min ago
ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು
- 48 min ago
ಫೆಬ್ರವರಿ ತಿಂಗಳ ಮಾರಾಟದಲ್ಲಿ ಎಂಜಿ ಗ್ಲೊಸ್ಟರ್ ಎಸ್ಯುವಿಯನ್ನು ಹಿಂದಿಕ್ಕಿದ ಪೋರ್ಡ್ ಎಂಡೀವರ್
- 53 min ago
ಭಾರತದಲ್ಲಿ ಹೊಸ ಕಾರು ಮಾದರಿಗಾಗಿ ಸಿಟ್ರನ್ ಪ್ಲ್ಯಾಟ್ಫಾರ್ಮ್ ಬಳಕೆ ಮಾಡಲಿದೆ ಜೀಪ್ ಇಂಡಿಯಾ
Don't Miss!
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್‌ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- News
ಐಟಿ ಅಧಿಕಾರಿಗಳಿಂದ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ವಿಚಾರಣೆ
- Movies
13 BIFFES: ಸಿನಿಮಾ ಮಾಂತ್ರಿಕನಿಗೆ 'ಶತಮಾನೋತ್ಸವ ಗೌರವ'
- Finance
ನಿಮ್ಮ ಆಧಾರ್ ಸಂಖ್ಯೆ ಎಲ್ಲೆಲ್ಲಿ ಬಳಕೆಯಾಗುತ್ತಿದೆ? ಪತ್ತೆ ಹಚ್ಚಿ
- Education
Karnataka SSLC Exam 2021 Time Table: ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
- Lifestyle
ಮಾರ್ಚ್ ನಲ್ಲಿದೆ ಕಷ್ಟ ನಿವಾರಿಸುವ ಫಾಲ್ಗುಣ ಅಮವಾಸ್ಯೆ, ಯಾಕಿಷ್ಟು ಮಹತ್ವ ಗೊತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್
ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಟಿಗ್ವಾನ್ ಫೇಸ್‌ಲಿಫ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇದರ ಸಲುವಾಗಿ ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿ ಭಾರತದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಈ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯು ಯಾವುದೇ ಮರೆಮಾಚುವಿಕೆ ಇಲ್ಲದೇ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಎಸ್‌ಯುವಿ ನವೀಕರಿಸಿದ ಮಾದರಿಯು ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್ ಅನ್ನು ಜಾಗತಿಕ-ಸ್ಪೆಕ್ ಗಾಲ್ಫ್‌ನಿಂದ ಸ್ಫೂರ್ತಿ ಪಡೆದಂತೆ ಪರಿಷ್ಕೃತ ಬೈ-ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳಲ್ಲಿ ವಿಲೀನಗೊಳಿಸಿದೆ. ಸ್ಪೋರ್ಟಿಯರ್ ಫ್ರಂಟ್ ಬಂಪರ್ ಹೆಚ್ಚು ಸ್ಪಷ್ಟವಾದ ಏರ್ ಇನ್ ಟೆಕ್ ಅನ್ನು ಹೊಂದಿದೆ.

ಇತರ ಪ್ರಮುಖ ಬದಲಾವಣೆಗಳಲ್ಲಿ ಹೊಸ ಅಲಾಯ್ ವ್ಹೀಲ್ ಗಳು, ಎಲ್-ಆಕಾರದ ಎಲ್‌ಇಡಿ ಟೈಲ್ಯಾಂಪ್‌ಗಳು, ಡಿಫ್ಯೂಸರ್ ಪ್ಲೇಟ್‌ನೊಂದಿಗೆ ಪರಿಷ್ಕೃತ ಹಿಂಭಾಗದ ಬಂಪರ್ ಮತ್ತು ಟೈಲ್‌ಗೇಟ್‌ನ ಮಧ್ಯಭಾಗದಲ್ಲಿ ಟಿಗ್ವಾನ್ ಬ್ಯಾಡ್ಜಿಂಗ್ ಸೇರಿವೆ.

ಇನ್ನು ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪರಿಷ್ಕರಿಸಲಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸಂಪರ್ಕಿತ ಕಾರು ತಂತ್ರಜ್ಞಾನವನ್ನೂ ಪಡೆಯುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಗ್ಲೋಬಲ್-ಸ್ಪೆಕ್ ಮಾದರಿಯಂತೆಯೇ, ಇಂಡಿಯಾ-ಸ್ಪೆಕ್ 2021 ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಹೊಸ ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್, ಸೆಂಟರ್ ಕನ್ಸೋಲ್‌ನಲ್ಲಿ ಎರಡು ಪ್ರಕಾಶಿತ ಯುಎಸ್‌ಬಿ-ಸಿ ಪೋರ್ಟ್‌ಗಳು, ಕ್ಲೈಮೆಂಟ್ ಕಾರ್ಯಗಳಿಗಾಗಿ ಟಚ್ ಸೆನ್ಸಿಟಿವ್ ಕಂಟ್ರೋಲ್ ಮಾಡ್ಯೂಲ್ ಮತ್ತು 480ಡಬ್ಲ್ಯು, 10-ಸ್ಪೀಕರ್ ಹರ್ಮನ್ ಕಾರ್ಡನ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5 ಎಲ್ ಟಿಎಸ್‌ಐ ಟರ್ಬೊ ಪೆಟ್ರೋಲ್ ಮತ್ತು 2.0 ಎಲ್ ಟಿಎಸ್‌ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ 1.5 ಎಲ್ ಟಿಎಸ್‌ಐ ಟರ್ಬೊ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 50 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು 2.0 ಎಲ್ ಟಿಎಸ್‌ಐ ಟರ್ಬೊ ಪೆಟ್ರೋಲ್ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚು ಪವರ್ ಫುಲ್ ಪೆಟ್ರೋಲ್ ಮೋಟರ್ ಅನ್ನು ಹೆಚ್ಚಿನ ಟ್ರಿಮ್‌ಗಳಿಗಾಗಿ ಕಾಯ್ದಿರಿಸಬಹುದು.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

2.0 ಎಲ್ ಟಿಎಸ್‌ಐ ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪ್ಯಾಡಲ್ ಶಿಫ್ಟರ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಬಹುದು. 1.5 ಎಲ್ ಪೆಟ್ರೋಲ್ ರೂಪಾಂತರಗಳು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಸಹ ಲಭ್ಯವಿರಬಹುದು.

ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ವಿಯು 4 ಮೋಷನ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು 2.0 ಎಲ್ ಪೆಟ್ರೋಲ್ ಎಂಜಿನ್‌ನಲ್ಲಿ ಪ್ರತ್ಯೇಕವಾಗಿ ನೀಡಬಹುದು. ಇನ್ನು ಈ ಹೊಸ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಟ್ಯೂಸಾನ್, ಜೀಪ್ ಕಂಪಾಸ್ ಮತ್ತು ಬಿಡುಗಡೆಯಾಗಲಿರುವ ಸಿಟ್ರನ್ ಸಿ5 ಏರ್‌ಕ್ರಾಸ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.