ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ

ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾದ ವೊಲ್ವೊ ತನ್ನ 2021ರ ಎಸ್60 ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ವೊಲ್ವೊ ಎಸ್60 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.45.90 ಲಕ್ಷಗಳಾಗಿದೆ.

ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ

ಹೊಸ ವೊಲ್ವೊ ಎಸ್60 'ಇನ್‌ಸ್ಕ್ರಿಪ್ಷನ್' ಎಂಬ ಒಂದೇ ರೂಪಾಂತರದಲ್ಲಿ ಲಭ್ಯವಿರಲಿದೆ. ಈ ಹೊಸ ವೊಲ್ವೊ ಎಸ್60 ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಆನ್‌ಲೈನ್‌ನಲ್ಲಿ ಪ್ರಾರಂಭಿಸಲಾಗಿದೆ. ಈ ಐಷಾರಾಮಿ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.1 ಲಕ್ಷ ಆನ್‌ಲೈನ್‌ನಲ್ಲಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಐಷಾರಾಮಿ ಸೆಡಾನ್ ಕಾರಿನ ವಿತರಣೆಯು ಮಾರ್ಚ್ ತಿಂಗಳಲ್ಲಿ ಆರಂಭಿಸಬಹುದು.

ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ

ಹೊಸ ವೊಲ್ವೊ ಎಸ್60 ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಸೆಡಾನ್ ವಿಶಾಲವಾದ ಗ್ರಿಲ್ ಅನ್ನು ಹೊಂದಿದ್ದು, ಇದರ ಮಧ್ಯದಲ್ಲಿರುವ ವೊಲ್ವೊ ಲೋಗೊ ಕ್ರೋಮ್‌ನಿಂದ ಆವೃತವಾಗಿದೆ. ಗ್ರಿಲ್‌ನ ಎರಡೂ ಬದಿಗಳಲ್ಲಿ ನಯವಾದ ಎಲ್‌ಇಡಿ 'ಥಾರ್ ಹ್ಯಾಮರ್' ಹೆಡ್‌ಲ್ಯಾಂಪ್‌ಗಳಿವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ

ಮುಂಭಾಗದ ಬಂಪರ್ ದೊಡ್ಡ ಏರ್ ಇನ್ ಟೆಕ್ ಅನ್ನು ಹೊಂದಿದೆ. ಜೊತೆಗೆ ಮುಂಭಾಗದ ಎರಡು ಕಡೆಗಳಲ್ಲಿ ಫಾಗ್ ಲ್ಯಾಂಪ್ ಹೊಂದಿದ್ದರೆ, ಹೌಸಿಂಗ್ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ವೊಲ್ವೊ ಕಾರುಗಳ ಈ ಐಷಾರಾಮಿ ಲುಕ್ ಈ ಮಾದರಿಯಲ್ಲಿಯು ನೋಡಬಹುದಾಗಿದೆ.

ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ

ಹೊಸ ವೊಲ್ವೊ ಎಸ್60 ಒಳಭಾಗದ ಬಗ್ಗೆ ಹೇಳುವುದಾದರೆ, ಗ್ರಾಹಕರ ನಿರೀಕ್ಷೆ ತಕ್ಕ ಪ್ರೀಮಿಯಂ ಕ್ಯಾಬಿನ್ ಅನ್ನು ಒಳಗೊಂಡಿದೆ. ಲೆದರ್ ಸುತ್ತಿದ ಸ್ಟೀಯರಿಂಗ್ ವ್ಹೀಲ್, ಸೀಟುಗಳು, ಡೋರ್ ಪ್ಯಾನೆಲ್ ಗಳಲ್ಲಿಯು ಲೆದರ್ ಅಂಶಗಳನ್ನು ಕಾಣಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ

ಇನ್ನು ಮಧ್ಯಭಾಗದಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 9 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಕ್ಲೈಮೇಂಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ ಮತ್ತು ಇತರ ಸ್ಟ್ಯಾಂಡರ್ಡ್ ಫೀಚರ್ ಗಳನ್ನು ಒಳಗೊಂಡಿವೆ.

ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ

ಇನ್ನು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ವೊಲ್ವೊ ಬ್ರ್ಯಾಂಡ್ ಈ ಕಾರಿನ ಸುರಕ್ಷತೆಗಾಗಿ, ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಲೇನ್ ಮಿಟಿಗೇಷನ್ ಮತ್ತು ಇತರ ಫೀಚರ್ ಗಳನ್ನು ನೀಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ

ಇನ್ನು ಈ ಹೊಸ ವೊಲ್ವೊ ಎಸ್60 ಕಾರಿನಲ್ಲಿ ಅದೇ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿಹೆಚ್‍ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಬಹುನಿರೀಕ್ಷಿತ 2021ರ ವೊಲ್ವೊ ಎಸ್60 ಕಾರು ಬಿಡುಗಡೆ

ಹೊಸ ವೊಲ್ವೊ ಎಸ್60 ಕಾರು ಕ್ರಿಸ್ಟಲ್ ವೈಟ್ ಪರ್ಲ್, ಓನಿಕ್ಸ್ ಬ್ಲ್ಯಾಕ್, ಮ್ಯಾಪಲ್ ಬ್ರೌನ್, ಡೆನಿಮ್ ಬ್ಲೂ ಮತ್ತು ಫ್ಯೂಷನ್ ರೆಡ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಹೊಸ ವೊಲ್ವೊ ಎಸ್60 ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬಿಎಂಡಬ್ಲ್ಯು 3 ಸೀರಿಸ್, ಆಡಿ ಎ4 ಫೇಸ್‌ಲಿಫ್ಟ್ ಮತ್ತು ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್‌ ಕಾರುಗಳಿಗೆ ಪೈಪೋಟಿ ನೀಡುತದೆ.

More from DriveSpark

Article Published On: Wednesday, January 20, 2021, 20:58 [IST]
English summary
2021 Volvo S60 Sedan Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+