ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು
ಪ್ರಸ್ತುತ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಸುಜುಕಿ ಕಂಪನಿಯು 2016ರ ಡಿಸೆಂಬರ್ ತಿಂಗಳಿನಲ್ಲಿ ಪರಿಚಯಿಸಿತ್ತು. ಭಾರತದಲ್ಲಿ ಇದನ್ನು 2017ರ ಆರಂಭದಲ್ಲಿ ಮಾರುತಿ ಸುಜುಕಿ ಕಂಪನಿಯು ಪರಿಚಯಿಸಿತು. ಇದೀಗ ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಸುಜುಕಿ ತನ್ನ ನ್ಯೂ ಜನರೇಷನ್ ಹ್ಯಾಚ್‌ಬ್ಯಾಕ್ ಅನ್ನು ಅಭಿವೃದ್ಧಿ ಪಡಿಸುತ್ತಿದೆ.

ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ. ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ.ಇದೀಗ ಸುಜುಕಿ ಕಂಪನಿಯು ನ್ಯೂ ಜನರೇಷನ್ ಮಾದರಿಯನ್ನು ಪರಿಚಯಿಸುವ ಕಾರ್ಯದಲ್ಲಿ ನಿರತರರಾಗಿದ್ದಾರೆ ಎಂದು ವರದಿಯಾಗಿದೆ.

ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು ಹಾರ್ಟಕ್ಟ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗುತ್ತದೆ. ಪರಿಷ್ಕೃತ ಪ್ಲಾಟ್‌ಫಾರ್ಮ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಒಟ್ಟಾರೆ ಸ್ಥಿರತೆ, ಸುರಕ್ಷತೆ ಮತ್ತು ನಿರ್ವಹಣೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ಕಾಣಬಹುದು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜಪಾನೀಸ್-ಸ್ಪೆಕ್ ಮಾದರಿಯು ಪೂರ್ಣ ಹೈಬ್ರಿಡ್ ಸಿಸ್ಟಂನೊಂದಿಗೆ ಬಿಡುಗಡೆಯಾಗಲಿದೆ. ಭಾರತದಲ್ಲಿ ಮತ್ತು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ಸ್ವಿಫ್ಟ್ ಮೈಲ್ಡ್-ಹೈಬ್ರಿಡ್ ಹೊಂದುವ ಸಾಧ್ಯತೆಯಿದೆ. ಹೊಸ ಮಾದರಿಯು ಪ್ರಸ್ತುತ 12-ವೋಲ್ಟ್ ಬದಲಿಗೆ 48-ವೋಲ್ಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಬಹುದು.

ಇದಲ್ಲದೆ ಟಾರ್ಕ್-ಫಿಲ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟರ್ ಐಡ್ಲಿಂಗ್‌ನಂತಹ ಹೊಸ ವೈಶಿಷ್ಟ್ಯಗಳು ಸಹ ಪಡೆಯಬಹುದು. ಜಾಗತಿಕವಾಗಿ ಅನಾವರಣಗೊಂಡ ಬಳಿಕ ನ್ಯೂ ಜನರೇಷನ್ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಪ್ರಸ್ತುತ ಮಾದರಿಗಿಂತ ದುಬಾರಿಯಾಗಿರುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಪೂರ್ಣ-ಹೈಬ್ರಿಡ್ ರೂಪಾಂತರವನ್ನು ಪಡೆಯುತ್ತೇವೆಯೇ ಅಥವಾ ಮೈಲ್ಡ್-ಹೈಬ್ರಿಡ್ ರೂಪಾಂತರವನ್ನು ಪಡೆಯುತ್ತೇವೆಯೇ ಎಂಬುವುದು ಇನ್ನು ಖಚಿತವಿಲ್ಲ. ಇನ್ನು ವರದಿಗಳ ಪ್ರಕಾರ ಪ್ರಕಾರ ನ್ಯೂ ಜನರೇಷನ್ ಸ್ವಿಫ್ಟ್ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ.

ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಸುಜುಕಿ ಭರ್ಜರಿಯಾಗಿ ಸಜ್ಜಾಗುತ್ತಿದೆ. ಜಪಾನಿನ ಆಟೋಮೋಟಿವ್ ಮ್ಯಾಗಜೀನ್ ಬೆಸ್ಟ್ ಕಾರ್ ನ್ಯೂ ಜನರೇಷನ್ ಸ್ವಿಫ್ಟ್ ಕಾರಿನ 3ಡಿ ರೆಂಡರಿಂಗ್ ಚಿತ್ರವನ್ನು ಬಹಿರಂಗಪಡಿಸಿದೆ.
MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

3ಡಿ ರೆಂಡರಿಂಗ್ ಚಿತ್ರದಲ್ಲಿ ನ್ಯೂ ಜನರೇಷನ್ ಸ್ವಿಫ್ಟ್ ತುಂಬಾ ದೊಡ್ಡದಾದ ಏರ್ ಡ್ಯಾಮ್, ಅಡ್ದಲಾಗಿರುವ ಫಾಗ್ ಲ್ಯಾಂಪ್ ಮತ್ತು ಮುಂಭಾಗದಲ್ಲಿ ತೆಳ್ಳನೆಯ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಒಳಗೊಂಡಿದೆ. ಸೈಡ್ ಪ್ರೊಫೈಲ್‌ನಲ್ಲಿ ಶಾರ್ಪ್ ಲೈನ್ ಗಳನ್ನು ಹೊಂದಿವೆ.

ಭಾರತದಲ್ಲಿ ಸ್ವಿಫ್ಟ್ ಕಾರಿಗೆ ಹೆಚ್ಚು ಬೇಡಿಕೆ ಹೊಂದಿರುವುದರಿಂದ ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು ಜಪಾನ್ ನಲ್ಲಿ ಬಿಡುಗಡೆಗೊಳಿಸಿದ ಬಳಿಕ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಮುಂದಿನ ವರ್ಷ ಸ್ವಿಫ್ಟ್‌ನ ನ್ಯೂ ಜನರೇಷನ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications