ವರ್ಕ್ ಫ್ರಂ ವ್ಯಾನ್ ಅನುಭವವನ್ನು ನೀಡಲಿದೆ ನಿಸ್ಸಾನ್ ಕಂಪನಿಯ ಈ ವಾಹನ
ವರ್ಕ್ ಫ್ರಮ್ ಹೋಂ ಮಾಡಿ ಬೇಸರಗೊಂಡಿರುವವರಿಗಾಗಿ ನಿಸ್ಸಾನ್ ಕಂಪನಿಯು ಹೊಸ ರೀತಿಯ ಕಾರನ್ನು ಬಿಡುಗಡೆಗೊಳಿಸಿದೆ. ಈ ಕಾರಿನಲ್ಲಿ ಪ್ರಯಾಣ ಮಾಡುವಾಗಲೇ ಕೆಲಸ ಮಾಡಬಹುದು. ಈ ಕಾರಿನಲ್ಲಿ ಆಫೀಸ್ ಕ್ಯಾಬಿನ್ ನಿರ್ಮಿಸಲಾಗಿದ್ದು ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು.

ಕಂಪನಿಯು ಈ ಕಾನ್ಸೆಪ್ಟ್ ವ್ಯಾನ್ ಅನ್ನು 2021ರ ಟೋಕಿಯೊ ಆಟೋ ಸಲೂನ್‌ನಲ್ಲಿ ಪರಿಚಯಿಸಿತ್ತು. ಈ ವ್ಯಾನ್ ಅನ್ನು ವಿನ್ಯಾಸಗೊಳಿಸುವ ಉದ್ದೇಶ ಮನೆಯಲ್ಲಿ ತಿಂಗಳುಗಟ್ಟಲೆ ಕೆಲಸ ಮಾಡುವ ಜನರಿಗೆ ವಿಭಿನ್ನ ಅನುಭವವನ್ನು ನೀಡುವುದು. ಕರೋನಾ ಸಾಂಕ್ರಾಮಿಕದಿಂದಾಗಿ ವಿಶ್ವಾದ್ಯಂತ ಲಕ್ಷಾಂತರ ಜನರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ.

ಹಲವಾರು ತಿಂಗಳುಗಳ ಕಾಲ ಮನೆಯಲ್ಲಿಯೇ ಕುಳಿತುಕೊಳ್ಳುವುದರಿಂದ ಖಿನ್ನತೆಗೊಳಗಾಗುವ ಸಾಧ್ಯತೆಗಳಿರುತ್ತವೆ. ಈಗ ಮನೆಯಿಂದ ಕೆಲಸ ಮಾಡುತ್ತಿರುವ ಅಥವಾ ಮನೆಯಲ್ಲಿ ಕಚೇರಿಯಿಂದ ಕೆಲಸ ಮಾಡುವಾಗ ಕಚೇರಿ ಸೌಲಭ್ಯಗಳನ್ನು ಪಡೆಯಲು ಬಯಸುವ ಗ್ರಾಹಕರನ್ನು ಆಕರ್ಷಿಸುವುದು ಕಂಪನಿಯ ಮುಖ್ಯ ಗುರಿಯಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಕಾರಣಕ್ಕೆ ಕಂಪನಿಯು ತನ್ನ ಕಾನ್ಸೆಪ್ಟ್ ವ್ಯಾನ್ ಅನ್ನು ಪರಿಚಯಿಸಿದೆ. ಈ ವ್ಯಾನ್'ನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದ್ದು ಎಲ್ಲಿಗೆ ಬೇಕಾದರೂ ಸಾಗಿಸಬಹುದು. ಈ ವ್ಯಾನ್ ದೊಡ್ಡ ಬ್ಯಾಟರಿ ಹಾಗೂ ಕಚೇರಿ ಕ್ಯಾಬಿನ್ ಅನ್ನು ಹೊಂದಿದೆ.

ಈ ಕ್ಯಾಬಿನ್‌ನ ನೋಟ ಹಾಗೂ ವಿನ್ಯಾಸವು ಆಫೀಸ್ ಕ್ಯಾಬಿನ್‌ನಂತಿದೆ. ಈ ಕ್ಯಾಬಿನ್ ಅನ್ನು ಕಾರಿನ ಹೊರಗೆ ಸಹ ಇಡಬಹುದು. ಇದರಿಂದ ಹೊರಗಿನ ನೋಟವನ್ನು ಆನಂದಿಸುತ್ತಾ ಕೆಲಸ ಮಾಡಬಹುದು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕ್ಯಾಬಿನ್ ಅನ್ನು ವ್ಯಾನ್‌ನ ಹಿಂಭಾಗದಲ್ಲಿ ನಿರ್ಮಿಸಲಾಗಿದೆ. ಆಫೀಸ್ ಕ್ಯಾಬಿನ್ ಒಳಗೆ ಕುಳಿತು ಕೊಳ್ಳುವ ಪ್ರದೇಶವನ್ನು ನೀಡಲಾಗಿದೆ. ಅದರೊಳಗೆ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಇಡಸಲು ಸ್ಥಳ ನೀಡಲಾಗಿದೆ.

ಕ್ಯಾಬಿನ್‌ನ ಗಾತ್ರವು ಸುಲಭವಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಕ್ಯಾಬಿನ್ ಒಳಗೆ ಕೆಲಸ ಮಾಡಲು ಬೇಸರವಾದರೆ ಹೊರಗೆ ಕುಳಿತು ಕೆಲಸ ಮಾಡಬಹುದು. ಕ್ಯಾಬಿನ್ ಸ್ಲೈಡಿಂಗ್ ಸಿಸ್ಟಂ ಹೊಂದಿದ್ದು ಒಳಗೆ, ಹೊರಗೆ ಚಲಿಸಲು ನೆರವಾಗುತ್ತದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ರೂಮ್ ಹೀಟರ್, ವಾಟರ್ ಹೀಟರ್'ನಂತಹ ಸೌಲಭ್ಯಗಳನ್ನು ಕ್ಯಾಬಿನ್'ನಲ್ಲಿ ಒದಗಿಸಲಾಗಿದೆ. ಈ ವ್ಯಾನ್ ಎಲೆಕ್ಟ್ರಿಕ್ ಕೆಟಲ್ ಅನ್ನು ಸಹ ಹೊಂದಿದೆ. ಇದರಲ್ಲಿ ಚಹಾ ಅಥವಾ ಕಾಫಿಯನ್ನು ಬಿಸಿ ನೀರಿನೊಂದಿಗೆ ತಯಾರಿಸಬಹುದು.

ಕೆಲಸದ ಸಮಯದಲ್ಲಿ ವಿಶ್ರಾಂತಿ ಪಡೆಯಲು ಬಯಸಿದರೆ, ವ್ಯಾನ್‌ನ ರೂಫ್ ಮೇಲಿರುವ ರೆಸ್ಟ್ ಬೆಡ್'ನಲ್ಲಿ ವಿಶ್ರಾಂತಿ ಪಡೆಯಬಹುದು. ಈ ವ್ಯಾನ್ ಬಿಡುಗಡೆಯಾದ ನಂತರ ಅದರ ಬೆಲೆಯ ಬಗ್ಗೆ ತಿಳಿಯಲಿದೆ.


Click it and Unblock the Notifications