Just In
Don't Miss!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದೇ ದಿನ ಮ್ಯಾಗ್ನೈಟ್ ಎಸ್‌ಯುವಿಯ 36 ಯೂನಿಟ್'ಗಳನ್ನು ವಿತರಿಸಿದ ನಿಸ್ಸಾನ್ ಡೀಲರ್
ನಿಸ್ಸಾನ್ ಕಂಪನಿಯ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‌ಯುವಿಯು ಬಿಡುಗಡೆಯಾದಾಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್‌ಗಳನ್ನು ಪಡೆಯುತ್ತಿದೆ. ಇದುವರೆಗೂ ಈ ಕಾಂಪ್ಯಾಕ್ಟ್ ಎಸ್‌ಯುವಿಯು 32,800ಕ್ಕೂ ಬುಕ್ಕಿಂಗ್‌ಗಳನ್ನು ಪಡೆದಿದೆ.

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ ವಿತರಣೆಯನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗಿದೆ. ಇತ್ತೀಚೆಗೆ ಆಂಧ್ರಪ್ರದೇಶದ ಡೀಲರ್ ಒಬ್ಬರು ಮೆಗಾ ವಿತರಣೆಯನ್ನು ಹಮ್ಮಿಕೊಂಡಿದ್ದರು. ಈ ಮೂಲಕ ಒಂದೇ ದಿನ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ 36 ಯೂನಿಟ್'ಗಳನ್ನು ವಿತರಿಸಲಾಗಿದೆ.

ನಿಸ್ಸಾನ್ ಕಂಪನಿಯ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆ, ವಿಶಾಖಪಟ್ಟಣಂ, ವಿಜಯನಗರಂ ಹಾಗೂ ಶ್ರೀಕಾಕುಲಂ ಜಿಲ್ಲೆಯ ಅಧಿಕೃತ ಮಾರಾಟಗಾರರಾದ ಕಾಂತಿಪುಡಿ ನಿಸ್ಸಾನ್ ಡೀಲರ್ ಈ ಪ್ರಮಾಣದಲ್ಲಿ ಮ್ಯಾಗ್ನೈಟ್ ಎಸ್‌ಯುವಿಯನ್ನು ವಿತರಿಸಿದ್ದಾರೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಿಡುಗಡೆಯಾದ ಮೊದಲ ತಿಂಗಳು ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ ಕೇವಲ 560 ಯುನಿಟ್'ಗಳನ್ನು ವಿತರಿಸಲಾಗಿತ್ತು. ಈ ಕಾರಣಕ್ಕೆ ಕಂಪನಿಯು ವಿತರಣೆಯನ್ನು ಹೆಚ್ಚಿಸಬೇಕಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿದ ನಂತರ ವಿತರಣೆಯನ್ನು ಪಡೆಯಲು 8 ತಿಂಗಳವರೆಗೆ ಕಾಯಬೇಕಾಗಿದೆ. ಇಷ್ಟು ದೀರ್ಘ ಅವಧಿಗೆ ಕಾಯುವುದು ಯಾವುದೇ ಕಂಪನಿಗೆ ಒಳ್ಳೆಯದಲ್ಲ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇನ್ನು ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ ಮೆಗಾ ಡೆಲಿವರಿ ಬಗ್ಗೆ ಹೇಳುವುದಾದರೆ, ಒಂದೇ ಬಾರಿಗೆ 16 ಮಾದರಿಗಳನ್ನು ವಿತರಿಸಲಾಗಿದೆ. ಈ ಎಸ್‌ಯುವಿಯ ಹೆಚ್ಚಿನ ಮಾದರಿಗಳು ಬಿಳಿ ಹಾಗೂ ಸಿಲ್ವರ್ ಬಣ್ಣವನ್ನು ಹೊಂದಿವೆ.

ಜನವರಿ ತಿಂಗಳಿನಲ್ಲಿ ಕಂಪನಿಯು ಎಷ್ಟು ಯೂನಿಟ್'ಗಳನ್ನು ಮಾರಾಟ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಮ್ಯಾಗ್ನೈಟ್ ಎಸ್‌ಯುವಿಯ ಬೇಡಿಕೆಯನ್ನು ಪೂರೈಸಲು ನಿಸ್ಸಾನ್ ಕಂಪನಿಯು ಅದರ ಉತ್ಪಾದನೆಯನ್ನು ಹೆಚ್ಚಿಸಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಂಪನಿಯು ತಮಿಳುನಾಡಿನಲ್ಲಿರುವ ಉತ್ಪಾದನಾ ಘಟಕದಲ್ಲಿ ಮೂರನೇ ಶಿಫ್ಟ್ ಅನ್ನು ಆರಂಭಿಸಿದೆ. ಕಂಪನಿಯು ಕಾಯುವ ಅವಧಿಯನ್ನು ಎರಡು ಮೂರು ತಿಂಗಳವರೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಇತ್ತೀಚೆಗೆ ನಿಸ್ಸಾನ್ ಮ್ಯಾಗ್ನೈಟ್‌ನ ಬೇಸ್ ಮಾದರಿಯಾದ ಎಕ್ಸ್‌ಇ ಬೆಲೆಯನ್ನು ರೂ.50,000ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಹೆಚ್ಚಳದ ನಂತರ ಈ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.5.49 ಲಕ್ಷಗಳಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆದರೆ ಕಂಪನಿಯು ಬೇರೆ ಯಾವುದೇ ಮಾದರಿಯ ಬೆಲೆಯನ್ನು ಹೆಚ್ಚಿಸಿಲ್ಲ. ಮ್ಯಾಗ್ನೈಟ್ ಎಸ್‌ಯುವಿಯ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.9.59 ಲಕ್ಷಗಳಾಗಿದೆ.

ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಎಕ್ಸ್‌ಇ (ಬೇಸ್), ಎಕ್ಸ್‌ಎಲ್ (ಮಿಡ್), ಎಕ್ಸ್‌ವಿ (ಹೈ) ಹಾಗೂ ಎಕ್ಸ್‌ವಿ (ಪ್ರೀಮಿಯಂ) ಎಂಬ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮ್ಯಾಗ್ನೈಟ್ ಎಸ್‌ಯುವಿಯಲ್ಲಿ 16 ಇಂಚಿನ ವ್ಹೀಲ್, ಸ್ಕಿಡ್ ಪ್ಲೇಟ್, ಫಂಕ್ಷನ್ ರೂಫ್ ರೇಲ್, 3.5 ಇಂಚಿನ ಎಲ್'ಸಿಡಿ ಕ್ಲಸ್ಟರ್, ಪವರ್ ವಿಂಡೋ ಹಾಗೂ ಡ್ಯುಯಲ್ ಟೋನ್ ಇಂಟಿರಿಯರ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯಲ್ಲಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಪೆಟ್ರೋಲ್ ಎಂಜಿನ್'ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಹಾಗೂ ಟರ್ಬೊ ಪೆಟ್ರೋಲ್ ಎಂಜಿನ್'ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಜೋಡಿಸಲಾಗಿದೆ. ಈ ಚಿತ್ರಗಳನ್ನು ಕಾಂತಿಪುಡಿ ನಿಸ್ಸಾನ್'ನಿಂದ ಪಡೆಯಲಾಗಿದೆ.