ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಕೋವಿಡ್ ಎರಡನೇ ಅಲೆಯ ಪರಿಣಾಮ ತಗ್ಗಿರುವ ಹೊಸ ವಾಹನಗಳ ಖರೀದಿಯ್ನು ಸುಧಾರಿಸಲು ವಿವಿಧ ಆಟೋ ಉತ್ಪಾದನಾ ಕಂಪನಿಗಳು ಹಲವಾರು ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ನಿಸ್ಸಾನ್ ಕಂಪನಿಯು ದೀಪಾವಳಿ ಸಂಭ್ರಮಕ್ಕಾಗ ಕಿಕ್ಸ್ ಕಾರು ಖರೀದಿಯ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಹೊಸ ವಾಹನಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ವಿವಿಧ ವಾಹನ ಉತ್ಪಾದನಾ ಕಂಪನಿಗಳು ಹಬ್ಬದ ಋತುವಿನಲ್ಲಿ ಆಕರ್ಷಕ ಆಫರ್‌‌ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ನಿಸ್ಸಾನ್ ಇಂಡಿಯಾ ಕಂಪನಿಯು ಕೂಡಾ ಕಿಕ್ಸ್ ಕಾರು ಮಾದರಿಯ ಮೇಲೆ ನವೆಂಬರ್ ಅವಧಿಗಾಗಿ ಆಕರ್ಷಕ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕವು ಲಭ್ಯವಿರಲಿದ್ದು, ಹೊಸ ಆಫರ್‌ಗಳ ಮೂಲಕ ಕಂಪನಿಯು ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಿದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಕಿಕ್ಸ್ ಎಸ್‍ಯುವಿ ಮೇಲಿನ ನಿಸ್ಸಾನ್ ಕಂಪನಿಯು ರೂ.1 ಲಕ್ಷದ ಉಳಿತಾಯಕ್ಕೆ ಅವಕಾಶ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್‌ಬ್ಯಾಕ್ ಮತ್ತು ಇತರೆ ಕೊಡುಗೆಗಳೊಂದಿಗೆ ವಿವಿಧ ರೂಪಾಂತರಗಳಿಗೆ ಅನುಗುಣವಾಗಿ ಇನ್ನಷ್ಟು ಆಫರ್ ಪಡೆದುಕೊಳ್ಳಬಹುದಾಗಿದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ರೂ. 1 ಲಕ್ಷ ಮೌಲ್ಯದ ಆಫರ್‌ಗಳಲ್ಲಿ ರೂ. 70 ಸಾವಿರ ಎಕ್ಸ್‌ಚೆಂಜ್ ಬೋನಸ್, ರೂ. 15 ಸಾವಿರದಷ್ಟು ನಗದು ರಿಯಾಯಿತಿ, ರೂ. 10 ಸಾವಿರ ಕಾರ್ಪೊರೇಟ್ ರಿಯಾಯತಿ ಮತ್ತು ರೂ.5 ಸಾವಿರ ಮೌಲ್ಯದ ಇತರೆ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಹೊಸ ಆಫರ್‌ಗಳಲ್ಲಿ ಟರ್ಬೊ ಆವೃತ್ತಿಯ ಮೇಲೆ ಹೆಚ್ಚಿನ ಕೊಡುಗೆಗಳನ್ನು ನೀಡಲಾಗಿದ್ದು, ಸಾಮಾನ್ಯ ಪೆಟ್ರೋಲ್ ಆವೃತ್ತಿಯ ಮೇಲೆ ರೂ.45 ಸಾವಿರದಷ್ಟು ಆಫರ್‌ಗಳನ್ನು ಮಾತ್ರ ನೀಡಲಾಗುತ್ತಿದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದರ ಬೇಸ್ ಸ್ಪೆಕ್ ಎಕ್ಸ್‌ಎಲ್ ಮತ್ತು ಎಕ್ಸ್‌ವಿ ಆವೃತ್ತಗಳಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೊಡಿಸಲಾಗಿದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಕಿಕ್ಸ್ ಕಾರಿನ ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ಸಾಮರ್ಥ್ಯದ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 156 ಬಿಹೆಚ್‍ಪಿ ಪವರ್ ಮತ್ತು 254 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಈ ಎಂಜಿನ್‌ನೊಂದಿಗೆ ಸ್ಟ್ಯಾಂಡರ್ಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅಥವಾ ಬ್ರ್ಯಾಂಡ್‌ನ ಹೊಸ ಎಕ್ಸ್-ಟ್ರೋನಿಕ್ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದ್ದು, ನಿಸ್ಸಾನ್ ಸರಣಿಯಲ್ಲೇ ಟರ್ಬೊ ಎಂಜಿನ್ ಅತಿ ಹೆಚ್ಚು ಪವರ್ ಫುಲ್ ಮಾದರಿಯಾಗಿದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ನಿಸ್ಸಾನ್ ಹೊಸ ಕಿಕ್ಸ್ ಎಸ್‍ಯುವಿಯಲ್ಲಿ ಹಲವಾರು ನೂತನ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದ್ದು, ಟಾಪ್ ಅಂಡ್ ಮಾದರಿಯಲ್ಲಿ ರಿಮೋಟ್ ಎಂಜಿನ್ ಸ್ಟಾರ್ಟ್, ಪುಶ್-ಬಟನ್ ಸ್ಟಾರ್ಟ್ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಫೀಚರ್ಸ್ ಗಳನ್ನು ಒಳಗೊಂಡಿವೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಹಾಗೆಯೇ ಹೊಸ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, 'ಅರೌಂಡ್ ವ್ಯೂ ಮಾನಿಟರ್' 360 ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ಲೆದರ್ ಸೀಟುಗಳು, ಕಾರ್ನರಿಂಗ್ ಫಾಗ್ ಲ್ಯಾಂಪ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್, ಕ್ರೂಸ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಕೂಡ ಹೊಂದಿದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಈ ಮೂಲಕ ಹೊಸ ನಿಸ್ಸಾನ್ ಕಿಕ್ಸ್ ಪವರ್ ಫುಲ್ ಎಂಜಿನ್ ಮತ್ತು ನೂತನ ಫೀಚರ್ ಗಳನ್ನು ಒಳಗೊಂಡಿರುವ ಎಸ್‍ಯುವಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೊಸ ಕಿಕ್ಸ್ ಮಾದರಿಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೊಸ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿ ಮಾದರಿಗಳೊಂದಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಕಿಕ್ಸ್ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.50 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 14.64 ಲಕ್ಷ ಬೆಲೆ ಹೊಂದಿದ್ದು, ಇತ್ತೀಚೆಗೆ ಬಿಡುಗಡೆಯಾದ ಪ್ರಮುಖ ಎಸ್‌ಯುವಿ ಕಾರುಗಳು ಕಿಕ್ಸ್ ಮಾದರಿಗೆ ಹೆಚ್ಚಿನ ಪೈಪೋಟಿ ನೀಡುತ್ತಿವೆ.

ದೀಪಾವಳಿ ವಿಶೇಷತೆಗಾಗಿ ನಿಸ್ಸಾನ್ ಕಿಕ್ಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್

ಹೀಗಾಗಿ ಗ್ರಾಹಕರ ಬೇಡಿಕೆ ಕಾಯ್ದಕೊಳ್ಳಲು ಯತ್ನಿಸುತ್ತಿರುವ ನಿಸ್ಸಾನ್ ಕಂಪನಿಯು ಕಿಕ್ಸ್ ಕಾರಿನ ಮೇಲೆ ಹೆಚ್ಚಿನ ಮಟ್ಟದ ಕೊಡುಗೆಗಳನ್ನು ಪ್ರಕಟಿಸುತ್ತಿದ್ದು, ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು.

Article Published On: Friday, November 5, 2021, 11:17 [IST]
English summary
Nissan india announced diwali discount and attracts offers for kicks
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+