ಅತಿ ಕಡಿಮೆ ಬೆಲೆಯೊಂದಿಗೆ ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ನಿಸ್ಸಾನ್ ಮ್ಯಾಗ್ನೈಟ್

ಬಜೆಟ್ ಬೆಲೆಗಳಲ್ಲಿ ಉತ್ತಮ ಸುರಕ್ಷಿತ ಕಾರುಗಳ ಖರೀದಿಯು ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯೂ ಕೂಡಾ ಕ್ರ್ಯಾಶ್‌ ಟೆಸ್ಟಿಂಗ್ ಉತ್ತಮ ಪ್ರದರ್ಶನ ನೀಡಿರುವ ಮಾಹಿತಿ ಲಭ್ಯವಾಗಿದೆ.

ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ಮ್ಯಾಗ್ನೈಟ್

ಭಾರತದಲ್ಲಿ ಹೊಸ ವಾಹನ ಮಾರಾಟ ಹೆಚ್ಚಳದ ನಡುವೆ ವಾಹನಗಳ ಸುರಕ್ಷಾ ರೇಟಿಂಗ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಬಜೆಟ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹಲವು ಕಂಪನಿಗಳು ಉತ್ತಮ ಗುಣಮಟ್ಟದ ವಾಹನಗಳನ್ನು ಅಭಿವೃದ್ದಿಪಡಿಸುವಲ್ಲಿ ವಿಫಲವಾಗಿವೆ. ಆದರೆ ಇತ್ತೀಚೆಗೆ ಮಾರುಕಟ್ಟೆಗೆ ಪ್ರವೇಶಿಸಿದ ಕೆಲವು ಹೊಸ ಕಾರು ಮಾದರಿಗಳು ಬಜೆಟ್ ಬೆಲೆಯಲ್ಲೂ ಪ್ರಯಾಣಿಕ ಸುರಕ್ಷತೆ ಬೇಕಾದ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಳ್ಳುವ ಮೂಲಕ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿವೆ.

ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ಮ್ಯಾಗ್ನೈಟ್

ಹೊಸ ಕಾರುಗಳ ಪೈಕಿ ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತಿ ಕಡಿಮೆ ಬೆಲೆಯೊಂದಿಗೆ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲೂ ಉತ್ತಮ ರೇಟಿಂಗ್ ಪಡೆದುಕೊಂಡಿದೆ.

ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ಮ್ಯಾಗ್ನೈಟ್

ಸದ್ಯ ಭಾರತದಲ್ಲಿ ಮಾತ್ರವೇ ಮಾರಾಟಗೊಳ್ಳುತ್ತಿರುವ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗರಿಷ್ಠ 5 ಸ್ಟಾರ್ ರೇಟಿಂಗ್ಸ್‌ನಲ್ಲಿ 4 ಸ್ಟಾರ್ ರೇಟಿಂಗ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಹೊಸ ಕಾರಿನ ಕ್ರ್ಯಾಶ್ ಟೆಸ್ಟಿಂಗ್ ಕುರಿತಾದ ಮಹತ್ವದ ಮಾಹಿತಿಯು ಲಭ್ಯವಾಗಿದೆ.

ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ಮ್ಯಾಗ್ನೈಟ್

ಹೊಸ ಮ್ಯಾಗ್ನೈಟ್ ಕಾರಿನ ಕ್ರ್ಯಾಶ್ ಟೆಸ್ಟಿಂಗ್ ಕುರಿತು ಶೀಘ್ರದಲ್ಲೇ ಏಷಿಯನ್ ಎನ್‌ಸಿಎಪಿ ಸಂಸ್ಥೆಯು ಕ್ರ್ಯಾಶ್ ಟೆಸ್ಟಿಂಗ್ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದು, ಯಾವ ವಿಭಾಗದಲ್ಲಿ ಎಷ್ಟು ಅಂಕಗಳನ್ನು ನೀಡಲಾಗಿದೆ ಎನ್ನುವ ನಿಖರ ಮಾಹಿತಿ ಲಭ್ಯವಾಗಲಿದೆ. ಹೊಸ ಕಾರಿಗೆ 4 ಸ್ಟಾರ್ ಸುರಕ್ಷಾ ರೇಟಿಂಗ್ಸ್ ಪಡೆದುಕೊಂಡಿರುವುದನ್ನು ಎನ್‌ಸಿಎಪಿ ಸಂಸ್ಥೆಯು ದೃಡಪಡಿಸಿ ನಂತರ ಹೊಸ ಕಾರಿನ ಮಾರಾಟದಲ್ಲಿ ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ಮ್ಯಾಗ್ನೈಟ್

ಹೊಸ ಕಾರು ಸದ್ಯ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ಮ್ಯಾಗ್ನೈಟ್

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.35 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ಮ್ಯಾಗ್ನೈಟ್

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸುರಕ್ಷತೆಗಾಗಿ ಐಸೋಫಿಕ್ಸ್ ಸೀಟ್, ಸೆಂಟರ್ ಡೋರ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಮೋಟ್ ಕೀ ಲೆಸ್ ಎಂಟ್ರಿ ಸೌಲಭ್ಯಗಳಿವೆ.

ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ಮ್ಯಾಗ್ನೈಟ್

ಜೊತೆಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಆ್ಯಂಟಿ ರೊಲ್ ಬಾರ್, ಸೀಟ್ ಬೆಲ್ಟ್ ಅಲರ್ಟ್, ಇಮ್‌ಮೊಬಿಲೈಸರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್, ಟೈರ್ ಪ್ರೆಷರ್ ಮಾನಿಟರಿಂಗ್ ಮತ್ತು ಬ್ರಾಂಡ್‌ನ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.

MOST READ: 2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಸುರಕ್ಷತೆಯಲ್ಲೂ ಪ್ರತಿಸ್ಪರ್ಧಿ‌ಗಳಿಗೆ ಪೈಪೋಟಿ ನೀಡಲಿದೆ ಮ್ಯಾಗ್ನೈಟ್

ಈ ಮೂಲಕ ಉತ್ತಮ ಬೆಲೆ ಪೈಪೋಟಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಮ್ಯಾಗ್ನೈಟ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಕೂಡಾ ಸೆಳೆಯುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ನಿಸ್ಸಾನ್ ಮಾಗ್ನೈಟ್ ಹೊರತುಪಡಿಸಿ ಬಹುತೇಕ ಪ್ರತಿಸ್ಪರ್ಧಿ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.70 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಗಳು ರೂ. 12.80 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿವೆ.

Article Published On: Friday, January 1, 2021, 15:52 [IST]
English summary
Nissan Magnite Gets 4-Star Safety In Asean NCAP Crash Test. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+