ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಮುಂದಿನ ಆರು ತಿಂಗಳಲ್ಲಿ ನಗರದಲ್ಲಿ 50 ಹೊಸ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ. ಇದಕ್ಕಾಗಿ ಈಗಾಗಲೇ ಮೂರು ಕಂಪನಿಗಳಿಗೆ ಆರು ನಿವೇಶನಗಳನ್ನು ಎನ್‌ಡಿಎಂಸಿ ಪ್ರಾಥಮಿಕವಾಗಿ ಅನುಮೋದನೆ ನೀಡಿದೆ. ಕಳೆದ ವರ್ಷ, ದೆಹಲಿ ಸರ್ಕಾರವು ದೆಹಲಿ ಇವಿ ಫೋರಂ ಅನ್ನು ಆರಂಭಿಸಿತ್ತು.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ಈ ಫೋರಂ ದೆಹಲಿ ಇವಿ ನೀತಿಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲಾ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ವಾಹನ ತಯಾರಕ ಕಂಪನಿಗಳು, ಫ್ಲೀಟ್ ಆಪರೇಟರ್‌ಗಳು, ಚಾರ್ಜಿಂಗ್ ಸ್ಟೇಷನ್ ಆಪರೇಟರ್‌ಗಳು, ತಜ್ಞರು ಹಾಗೂ ವಿವಿಧ ಸರ್ಕಾರಿ ಏಜೆನ್ಸಿಗಳು ದೆಹಲಿ ಇವಿ ಫೋರಂನ ಸದಸ್ಯರಾಗಿದ್ದಾರೆ. ಈ ವೇದಿಕೆಯು ಎಲ್ಲಾ ಮಧ್ಯಸ್ಥಗಾರರ ನಡುವಿನ ಸಂವಹನಕ್ಕಾಗಿ ವೇದಿಕೆಯನ್ನು ಒದಗಿಸುತ್ತದೆ.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ದೆಹಲಿ ಸರ್ಕಾರವು 2024 ರ ವೇಳೆಗೆ ರಾಜ್ಯದಲ್ಲಿ ಎಲ್ಲಾ ಹೊಸ ವಾಹನಗಳ ಮಾರಾಟದಲ್ಲಿ 24% ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಬೇಕೆಂದು ಬಯಸುತ್ತದೆ. ಇದರಿಂದ ರಾಜ್ಯದಲ್ಲಿ ವಾಹನ ಮಾಲಿನ್ಯವನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ದೆಹಲಿ ಸರ್ಕಾರ ಹೇಳಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸಮಗ್ರ ಯೋಜನೆಯನ್ನು ರೂಪಿಸಲಾಗಿದೆ.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ಇದಕ್ಕಾಗಿ, ದೆಹಲಿ ಸರ್ಕಾರವು ನೀತಿಯನ್ನು ಸಿದ್ಧಪಡಿಸಿದ್ದು, ಅದರ ಅಡಿಯಲ್ಲಿ ಆರ್ಥಿಕ ಪ್ರೋತ್ಸಾಹ, ಆರ್ಥಿಕೇತರ ಪ್ರೋತ್ಸಾಹ, ಚಾರ್ಜಿಂಗ್ ಮೂಲಸೌಕರ್ಯಗಳ ಸೃಷ್ಟಿ ಹಾಗೂ ಇ ವಾಹನಗಳ ಬಗ್ಗೆ ಜಾಗೃತಿ ಹೆಚ್ಚಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ದೆಹಲಿಯ ಸಾರಿಕಾಲೆ ಖಾನ್ ಹಾಗೂ ಲೋನಿಯಲ್ಲಿ ಎಲೆಕ್ಟ್ರಿಕ್ ಆಟೋ ಮೇಳಕ್ಕೆ ಚಾಲನೆ ನೀಡಲಾಗಿದೆ.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ಈ ಏಳು ದಿನಗಳ ಮೇಳದಲ್ಲಿ, ಆಟೋ ಚಾಲಕರು ಎಲೆಕ್ಟ್ರಿಕ್ ರಿಕ್ಷಾ ಎಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಎಲೆಕ್ಟ್ರಿಕ್ ರಿಕ್ಷಾವನ್ನು ಖರೀದಿಸಲು ಸುಲಭ ಹಣಕಾಸು ಆಯ್ಕೆಗಳನ್ನು ಪಡೆದುಕೊಳ್ಳಬಹುದು. ಅಕ್ಟೋಬರ್ 25 ರಂದು ಆರಂಭವಾದ ಇ ಆಟೋ ಮೇಳವು ಅಕ್ಟೋಬರ್ 31 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ನಡೆಯಲಿದೆ.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ಇ ಆಟೋಗಾಗಿ ಮೇಳಕ್ಕೆ ಭೇಟಿ ನೀಡುವ ಸಂಭಾವ್ಯ ಗ್ರಾಹಕರು ಅವುಗಳನ್ನು ಖರೀದಿಸುವ ಮೊದಲು Mahindra and Mahindra, Piaggio, ETO ದಂತಹ ವಾಹನ ತಯಾರಕ ಕಂಪನಿಗಳ ತ್ರಿಚಕ್ರ ವಾಹನಗಳ ಮಾದರಿಗಳ ಟೆಸ್ಟ್ ಡ್ರೈವ್ ಮಾಡಬಹುದು. ಅವರು ಮೇಳದಲ್ಲಿ ಮಹೀಂದ್ರಾ ಫೈನಾನ್ಸ್, ಬಜಾಜ್ ಫಿನ್‌ಕಾರ್ಪ್ ಹಾಗೂ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (ಸಿ‌ಇಎಸ್‌ಎಲ್ ) ನಿಂದ ಹಣಕಾಸಿನ ಆಯ್ಕೆಗಳ ಬಗ್ಗೆ ಪರಿಶೀಲಿಸಬಹುದು.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ದೆಹಲಿ ಸರ್ಕಾರವು ತನ್ನ ಗ್ರೀನ್ ದೆಹಲಿ ಅಭಿಯಾನದ ಅಡಿಯಲ್ಲಿ 4,261 ಇ ಆಟೋಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಲ್ಲಿ 33% ನಷ್ಟು ಇ ಆಟೋ ಪರ್ಮಿಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ದೆಹಲಿ ಸರ್ಕಾರವು ಮಹಿಳೆಯರಿಗೆ 1,406 ಪರವಾನಗಿಗಳನ್ನು ನೀಡಲಿದೆ. ಎಲೆಕ್ಟ್ರಿಕ್ ಆಟೋಗಳು ಎಲೆಕ್ಟ್ರಿಕ್ ಬಸ್‌ಗಳಂತೆ ನೀಲಿ ಬಣ್ಣವನ್ನು ಹೊಂದಿರಲಿವೆ.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ಇವುಗಳನ್ನು ಶೀಘ್ರದಲ್ಲೇ ದೆಹಲಿ ಸಾರಿಗೆಗೆ ಸೇರಿಸಲಾಗುತ್ತದೆ. ಮಹಿಳಾ ಆಟೋ ಚಾಲಕರು ನೋಂದಾಯಿಸಿರುವ ಇ ಆಟೋ ಗುಲಾಬಿ ಬಣ್ಣವನ್ನು ಹೊಂದಿರಲಿದೆ. ದೆಹಲಿ ಸರ್ಕಾರವು ತನ್ನ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯ ಅಡಿಯಲ್ಲಿ ಇ ಆಟೋಗಳ ಖರೀದಿಗೆ ರೂ. 30,000 ಗಳವರೆಗೆ ಆರ್ಥಿಕ ಸಹಾಯವನ್ನು ನೀಡಲಿದೆ. ದೆಹಲಿ ವಿಳಾಸ, ಲಘು ಮೋಟಾರು ವಾಹನದ ಮಾನ್ಯ ಚಾಲನಾ ಪರವಾನಗಿ ಹೊಂದಿರುವ ಯಾವುದೇ ವ್ಯಕ್ತಿ ಆಧಾರ್ ಸಂಖ್ಯೆಯೊಂದಿಗೆ ಇ ಆಟೋ ಪರ್ಮಿಟ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ಇ ಆಟೋ ಪರ್ಮಿಟ್‌ಗೆ ಅರ್ಜಿ ಸಲ್ಲಿಸಲು ನವೆಂಬರ್ 1 ಕೊನೆಯ ದಿನವಾಗಿದೆ. ಇ ಆಟೋಗಳನ್ನು ಖರೀದಿಸುವ ಗ್ರಾಹಕರು ದೆಹಲಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಹಣಕಾಸು ಏಜೆನ್ಸಿಗಳಿಂದ 5% ಬಡ್ಡಿ ದರದೊಂದಿಗೆ ಆಟೋ ಸಾಲವನ್ನು ಪಡೆಯಬಹುದು.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

ಇನ್ನು ಭಾರತದಲ್ಲಿರುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೇಳುವುದಾದರೆ, Tata Motors, Hyundai ಹಾಗೂ MG ಯಂತಹ ಕಂಪನಿಗಳು ಈಗಾಗಲೇ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿವೆ. Tata Motors ಕಂಪನಿಯು Tigor ಹಾಗೂ Nexon ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇನ್ನು Hyundai ಕಂಪನಿಯು Kona ಎಲೆಕ್ಟ್ರಿಕ್ ಕಾರ್ ಅನ್ನು ಹಾಗೂ MG ಕಂಪನಿಯು ZS ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿವೆ.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

Tata Motors ಕಂಪನಿಯು ಎರಡು ಎಲೆಕ್ಟ್ರಿಕ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇವುಗಳಲ್ಲಿ Nexon ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. Tata Motors ಶೀಘ್ರದಲ್ಲಿಯೇ Altroz ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಇದರ ಜೊತೆಗೆ ಕಂಪನಿಯು ಇತ್ತೀಚೆಗಷ್ಟೇ ಬಿಡುಗಡೆಯಾದ Punch ಮೈಕ್ರೋ ಎಸ್‌ಯು‌ವಿಯ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ನಗರದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾದ ಎನ್‌ಡಿಎಂಸಿ

Punch ಮೈಕ್ರೋ ಎಸ್‌ಯು‌ವಿಯು ಜಾಗತಿಕ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಇನ್ನು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬಗ್ಗೆ ಹೇಳುವುದಾದರೆ TVS Motor, Bajaj ನಂತಹ ಖ್ಯಾತ ಕಂಪನಿಗಳು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತವೆ. ಇದರ ಜೊತೆಗೆ ಕೆಲವು ಸ್ಟಾರ್ಟ್ ಅಪ್ ಕಂಪನಿಗಳು ಸಹ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತವೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Nmdc to setup 50 ev charging stations in north delhi details
Story first published: Saturday, October 30, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X