ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಬ್ಯಾಟರಿ ವಿನಿಯಮ ಕೇಂದ್ರಗಳಿಗೆ ಚಾಲನೆ
ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಕಳೆದ ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಸರ್ಕಾರದ ಜೊತೆಗೆ ವಿವಿಧ ಖಾಸಗಿ ಕಂಪನಿಗಳು ಸಹ ಇವಿ ವಾಹನ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿವೆ.

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸುವಲ್ಲಿ ಬ್ಯಾಟರಿ ವಿನಿಯಮ ಕೇಂದ್ರಗಳು ಪ್ರಮುಖ ಪಾತ್ರವಹಿಸುತ್ತಿದ್ದು, ತ್ವರಿತವಾಗಿ ಬ್ಯಾಟರಿ ಸೌಲಭ್ಯಗಳನ್ನು ಒದಗಿಸುವ ಬ್ಯಾಟರಿ ವಿನಿಯಮ ಕೇಂದ್ರಗಳ ಮೇಲೆ ಹೆಚ್ಚಿನ ಹೂಡಿಕೆ ಹರಿದುಬರುತ್ತಿದೆ.

ಬ್ಯಾಟರಿ ವಿನಿಯಮ ಕೇಂದ್ರಗಳ ಮೇಲೆ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲ ಖಾಸಗಿ ಕಂಪನಿಗಳು ಸಹ ಹೊಸ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದು, ಇತ್ತೀಚೆಗೆ ತಿರುಪತಿಯಲ್ಲಿ ಆಂಧ್ರ ಸರ್ಕಾರವು ಹಸಿರು ವಾಹನಗಳನ್ನು ಉತ್ತೇಜಿಸಲು ಬ್ಯಾಟರಿ ವಿನಿಯಮ ಕೇಂದ್ರಗಳಿಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಆಂಧ್ರಪ್ರದೇಶದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ(NREDCAP) ಜೊತೆಗೂಡಿರುವ ರೇಸ್ಎನರ್ಜಿ(RACEenergy) ಕಂಪನಿಯು ಹೊಸ ಬ್ಯಾಟರಿ ವಿನಿಯಮ ಕೇಂದ್ರಕ್ಕೆ ಚಾಲನೆ ನೀಡಿದ್ದು, ಸಾಮಾನ್ಯ ಚಾರ್ಜರ್ ಮೂಲಕ ಚಾರ್ಜ್ ಮಾಡಲು ಆಗಬಹುದಾದ ಸಮಯ ವ್ಯರ್ಥವನ್ನು ತಡೆಯಲು ಬ್ಯಾಟರಿ ವಿನಿಯಮ ಕೇಂದ್ರ ಸಹಕಾರಿಯಾಗಿವೆ.

ಬ್ಯಾಟರಿ ವಿನಿಯಮ ಕೇಂದ್ರಗಳಲ್ಲಿ ಬ್ಯಾಟರಿ ರೇಂಜ್ ಆಧಾರದ ಮೇಲೆ ಇಂತಿಷ್ಟು ಪ್ರಮಾಣದ ದರ ಪಾವತಿಸಿಬೇಕಿದ್ದು, ವಿವಿಧ ಮಾದರಿಯ ಬ್ಯಾಟರಿ ಮಾದರಿಗಳಿಗೆ ಅನುಗುಣವಾಗಿ ಬ್ಯಾಟರಿ ಸೌಲಭ್ಯವನ್ನು ಬದಲಿಸಿಕೊಳ್ಳಬಹುದಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಯಾವುದೇ ಒಂದು ಇವಿ ವಾಹನವನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಕನಿಷ್ಠ 90 ನಿಮಿಷಗಳಿಂದ 8 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, ಸ್ವಂತ ಬಳಕೆಯ ವಾಹನಗಳಿಗೆ ಇದು ಅನುಕೂಲವಾಗಿದ್ದರೂ ವಾಣಿಜ್ಯ ಬಳಕೆಯ ಇವಿ ವಾಹನಗಳ ಬ್ಯಾಟರಿ ಚಾರ್ಜಿಂಗ್ ಮಾಡಲು ಇಷ್ಟು ಸಮಯವನ್ನು ತೆಗೆದುಕೊಂಡಲ್ಲಿ ಖಂಡಿತವಾಗಿಯೂ ಅದು ಇವಿ ವಾಹನಗಳ ಹೆಚ್ಚಳ ಗುರಿಯನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ.

ಹೀಗಾಗಿ ಪೆಟ್ರೋಲ್ ಬಂಕ್‌ಗಳ ಮಾದರಿಯಲ್ಲಿ ಬ್ಯಾಟರಿ ವಿನಿಯಮ ಕೇಂದ್ರಗಳನ್ನು ಹೆಚ್ಚಿಸಲು ಮುಂದಾಗಿರುವ ಪ್ರಮುಖ ಕಂಪನಿಗಳು ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಹೆಚ್ಚಿಸಲು ಮುಂದಾಗುತ್ತಿವೆ.

ಬ್ಯಾಟರಿ ವಿನಿಮಯದ ವೇಳೆ ಗ್ರಾಹಕರು ತಮ್ಮ ಬಳಿಯಿರುವ ಚಾರ್ಜ್ ಖಾಲಿಯಾಗಿರುವ ಬ್ಯಾಟರಿಯನ್ನು ವಿನಿಮಯ ಕೇಂದ್ರಗಳಿಗೆ ಹಿಂದಿರುಗಿಸುವ ಮೂಲಕ ಚಾರ್ಜ್ ಮಾಡಲಾದ ಬ್ಯಾಟರಿ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದ್ದು, ಹೊಸ ಸೌಲಭ್ಯವು ಚಾರ್ಜಿಂಗ್ ಸಮಯವನ್ನು ಉಳಿಸುವ ಮೂಲಕ ಬ್ಯಾಟರಿ ಖಾಲಿಯಾದ ತಕ್ಷಣವೇ ಮತ್ತೊಂದು ಬ್ಯಾಟರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

ಬ್ಯಾಟರಿ ವಿನಿಯಮ ಕೇಂದ್ರಗಳಿಗೆ ಈಗಾಗಲೇ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಕೂಡಾ ಚಾಲನೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಬ್ಯಾಟರಿ ವಿನಿಯಮ ಕೇಂದ್ರಗಳನ್ನು ನಾವು ನೋಡಬಹುದಾಗಿದೆ.

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲೂ ವಿವಿಧ ರಾಜ್ಯ ಸರ್ಕಾರಗಳು ಸಹ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು ಕೇಂದ್ರ ಫೇಮ್ 2 ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಕೂಡಾ ಹೊಸ ಇವಿ ನೀತಿ ಘೋಷಣೆ ಮಾಡುತ್ತಿವೆ.


Click it and Unblock the Notifications