ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ವಾಹನ ಸವಾರರ ನಾಡಿ ಮಿಡಿತವನ್ನು ಅರಿತಿರುವ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಗೆ ಆದ್ಯತೆ ನೀಡುತ್ತಿವೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಚಾರ್ಜಿಂಗ್ ಕೇಂದ್ರಗಳ ನಿರ್ಮಾಣಕ್ಕೆ ಮುಂದಾಗಿವೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಈಗ ಖ್ಯಾತ ಮರುಬಳಕೆಯಾದ ಕಂಪನಿ ನೂಪುರ್ ರಿಸೈಕ್ಲರ್ಸ್ ದೆಹಲಿಯ ದ್ವಾರಕಾದಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ 200 ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆಯುವುದಾಗಿ ತಿಳಿಸಿದೆ. ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸಲಾಗುತ್ತಿದ್ದು, ಶೀಘ್ರದಲ್ಲೇ ದೆಹಲಿ - ಎನ್‌ಸಿಆರ್‌ ಪ್ರದೇಶದಲ್ಲಿ ಈ ಚಾರ್ಜಿಂಗ್ ಸ್ಟೇಷನ್‌ಗಳು ಲಭ್ಯವಾಗಲಿವೆ ಎಂದು ಕಂಪನಿ ಹೇಳಿದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇತರ ಮೆಟ್ರೋ ನಗರಗಳಲ್ಲಿಯೂ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲು ಕಂಪನಿ ನಿರ್ಧರಿಸಿದೆ. ನೂಪುರ್ ರಿಸೈಕ್ಲರ್ಸ್ ಕಂಪನಿ ಹೇಳುವಂತೆ, ಕಂಪನಿಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹಾಗೂ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ವಿನಿಮಯ ಸೌಲಭ್ಯವನ್ನು ಒದಗಿಸಲಿದೆ. ಆದರೆ ಎಲೆಕ್ಟ್ರಿಕ್ ಕಾರುಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗುತ್ತದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಈ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ 3 ಸಾಕೆಟ್, 1 ಸಾಕೆಟ್ ಹಾಗೂ ಟೈಪ್ 2 ಸಾಕೆಟ್‌ಗಳೊಂದಿಗೆ ಸ್ಟ್ಯಾಂಡರ್ಡ್ 2000 ಎಸಿ / ಡಿಸಿ ಚಾರ್ಜಿಂಗ್ ಅನ್ನು ಒದಗಿಸಲಾಗುತ್ತದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಅಗತ್ಯ ಎಂದು ಕಂಪನಿ ಹೇಳಿದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯು ಹೆಚ್ಚಾಗಲಿದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಇದಕ್ಕಾಗಿ ಸಾಕಷ್ಟು ಸಂಖ್ಯೆಯ ಚಾರ್ಜಿಂಗ್ ಸ್ಟೇಷನ್‌ಗಳ ಲಭ್ಯತೆಯ ಬಗ್ಗೆಯೂ ಗಮನಹರಿಸುವ ಅವಶ್ಯಕತೆಯಿದೆ. ದೇಶದ ಹಲವು ಆಟೋಮೊಬೈಲ್ ಕಂಪನಿಗಳು ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಮುಂದೆ ಬರುತ್ತಿವೆ. ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಹೀರೋ ಎಲೆಕ್ಟ್ರಿಕ್ ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ ಒಂದು ಲಕ್ಷ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದಾಗಿ ತಿಳಿಸಿದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಹೀರೋ ಎಲೆಕ್ಟ್ರಿಕ್ ಮೊದಲ ವರ್ಷ 30 ನಗರಗಳಲ್ಲಿ 10,000 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ. ಹೀರೋ ಎಲೆಕ್ಟ್ರಿಕ್ ಡೀಲರ್‌ಶಿಪ್‌ಗಳಲ್ಲಿ ಚಾರ್ಜರ್‌ಗಳನ್ನು ಸಹ ನೀಡಲಾಗುತ್ತದೆ. ಹೀರೋ ಎಲೆಕ್ಟ್ರಿಕ್‌ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮೊಬೈಲ್ ಅಪ್ಲಿಕೇಶನ್ ಹಾಗೂ ವೆಬ್‌ಸೈಟ್ ಮೂಲಕ ಕಂಡುಹಿಡಿಯಬಹುದು.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಎಲೆಕ್ಟ್ರಿಕ್ ವಾಹನಗಳ ಯಶಸ್ಸು ಉತ್ಪನ್ನ ಶ್ರೇಣಿಯಿಂದ ಕಾರ್ಯಕ್ಷಮತೆ ಹಾಗೂ ಚಾರ್ಜಿಂಗ್ ಸ್ಟೇಷನ್‌ಗಳ ಲಭ್ಯತೆ ಸೇರಿದಂತೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಈ ಎಲ್ಲಾ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ನೂಪುರ್ ರಿಸೈಕ್ಲರ್ಸ್ ಕಂಪನಿ ಹೇಳಿದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಭಾರತದ ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಹಾಗೂ ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಕಂಪನಿಗಳು ಸಹ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣದಲ್ಲಿ ತಮ್ಮ ಸಹಕಾರವನ್ನು ಘೋಷಿಸಿವೆ. ಇಂಡಿಯನ್ ಆಯಿಲ್ ಮುಂದಿನ 3 ವರ್ಷಗಳಲ್ಲಿ ದೇಶದಲ್ಲಿ 10,000 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಇವುಗಳಲ್ಲಿ 2,000 ಚಾರ್ಜಿಂಗ್ ಸ್ಟೇಷನ್‌ಗಳನ್ನು ಮುಂದಿನ 12 ತಿಂಗಳಲ್ಲಿ ಸ್ಥಾಪಿಸಲಾಗುವುದು. 8,000 ಚಾರ್ಜಿಂಗ್ ಸ್ಟೇಷನ್‌ಗಳನ್ನು ಮುಂದಿನ 2 ವರ್ಷಗಳಲ್ಲಿ ಸ್ಥಾಪಿಸಲಾಗುವುದು. ಇನ್ನು ದೇಶದ ಅತಿ ದೊಡ್ಡ ಪೆಟ್ರೋಲಿಯಂ ಕಂಪನಿಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಸಹ ಮುಂದಿನ 5 ವರ್ಷಗಳಲ್ಲಿ 7,000 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದಾಗಿ ತಿಳಿಸಿದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಕೇಂದ್ರ ಸರ್ಕಾರವು ದೇಶಕ್ಕೆ ಅಗತ್ಯವಿರುವ ಶಕ್ತಿಯ ಬೇಡಿಕೆಗಳನ್ನು ಪೂರೈಸಲು ನವೀಕರಿಸಬಹುದಾದ ಶಕ್ತಿಯನ್ನು ಬಳಸುವ ಬಗ್ಗೆ ನವೀಕರಿಸಿದ ಹಾಗೂ ವಿಸ್ತರಿಸಿದ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತವು, ಚೀನಾ ಹಾಗೂ ಅಮೆರಿಕಾ ದೇಶಗಳ ನಂತರ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ದೇಶವಾಗಿದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಭಾರತವು ವಿಶ್ವದ ಒಟ್ಟು ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆಯ ಸುಮಾರು 7% ಅನ್ನು ಹೊಂದಿದೆ. ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವ ಸ್ಟಾರ್ಟಪ್ ಕಂಪನಿ EVRE ಸಹ ಪಾಲುದಾರಿಕೆಯ ಅಡಿಯಲ್ಲಿ ದೇಶಾದ್ಯಂತ ಎರಡು ವರ್ಷಗಳಲ್ಲಿ 10,000 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಕಂಪನಿಯು ಶಾಪಿಂಗ್ ಕಾಂಪ್ಲೆಕ್ಸ್, ವಸತಿ ಸಮುಚ್ಚಯ, ಮಾಲ್‌ಗಳು, ಹೋಟೆಲ್‌ ಹಾಗೂ ಕಾರ್ಪೊರೇಟ್ ಟೆಕ್ ಪಾರ್ಕ್‌ಗಳಂತಹ ಹೆಚ್ಚಿನ ಬೇಡಿಕೆಯ ಪ್ರದೇಶಗಳಲ್ಲಿ ಈ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಈ ಪಾಲುದಾರಿಕೆಯು ಚಾರ್ಜಿಂಗ್ ಸ್ಟೇಷನ್‌ಗಳಿಗೆ ಜಾಗವನ್ನು ಒದಗಿಸುವುದರಿಂದ ಹಿಡಿದು ವಾಣಿಜ್ಯ ಹಾಗೂ ಖಾಸಗಿ ಎಲೆಕ್ಟ್ರಿಕ್ ವಾಹನಗಳಿಗೆ ಸ್ಮಾರ್ಟ್ ಚಾರ್ಜಿಂಗ್ ಹಾಗೂ ಪಾರ್ಕಿಂಗ್ ಹಬ್‌ಗಳನ್ನು ಒದಗಿಸುವವರೆಗೆ ಹಲವು ಸಂಗತಿಗಳನ್ನು ಒಳಗೊಂಡಿರುತ್ತದೆ.

ಇವಿಗಳಿಗಾಗಿ 200 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಿದೆ ನೂಪುರ್ ರಿಸೈಕ್ಲರ್ಸ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಫ್ರಾಂಚೈಸಿ ಗಳಿಗೆ ಆಶ್ವಾನ ನೀಡುತ್ತಿವೆ. ಚಾರ್ಜಿಂಗ್ ಸ್ಟೇಷನ್ ತೆರೆಯಲು ರೂ. 5 ಲಕ್ಷದಿಂದ ರೂ. 7 ಲಕ್ಷಗಳವರೆಗೆ ಹೂಡಿಕೆ ಮಾಡ ಬೇಕಾಗುತ್ತದೆ.

Most Read Articles

Kannada
English summary
Nupur recyclers to open 200 ev charging stations in delhi details
Story first published: Monday, November 29, 2021, 19:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X