ಇವಿ ಸ್ಕೂಟರ್ ಜೊತೆ ಬಜೆಟ್ ಬೆಲೆಯ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ಕೆಲವೇ ತಿಂಗಳಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭಿಸಲು ಸಜ್ಜಾಗುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭವಿಷ್ಯದಲ್ಲಿ ಹಲವಾರು ಹೊಸ ಯೋಜನೆಗಳನ್ನು ಸಿದ್ದಪಡಿಸುತ್ತಿದ್ದು, ಇವಿ ಸ್ಕೂಟರ್ ಜೊತೆಗೆ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಗೊಳಿಸುವ ಯೋಜನೆಯಲ್ಲಿದೆ.

ಇವಿ ಸ್ಕೂಟರ್ ಮಾತ್ರವಲ್ಲ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಎಲಕ್ಟ್ರಿಕ್ ಮಾದರಿಯಾಗಿ ಆ್ಯಪ್ ಇವಿ ಮಾದರಿಯನ್ನು ಬಿಡುಗಡೆ ಮಾಡುವ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಹೊಸ ಸ್ಕೂಟರ್ ಮುಂಬರುವ ಜುಲೈ ಅಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ ಎನ್ನಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಸ್ಟಾಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮುಂಚೂಣಿ ಸಾಧಿಸುತ್ತಿದ್ದು, ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳೊಂದಿಗೆ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ.

ಇವಿ ಸ್ಕೂಟರ್ ಮಾತ್ರವಲ್ಲ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಆಟೋ ಉತ್ಪಾದನಾ ಕ್ಷೇತ್ರಕ್ಕೆ ಅಧಿಕೃತವಾಗಿ ಪ್ರವೇಶಿಸಿರುವ ಕ್ಯಾಬ್ ಸೇವಾ ಕಂಪನಿ ಓಲಾ ಅಂಗಸಂಸ್ಥೆಯಾದ ಓಲಾ ಎಲೆಕ್ಟ್ರಿಕ್ ಸಹ ಮೊದಲ ಬಾರಿಗೆ ವಾಹನಗಳ ಉತ್ಪಾದನೆದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಇವಿ ಸ್ಕೂಟರ್ ಮಾತ್ರವಲ್ಲ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ಭಾರತದಲ್ಲೇ ಪೂರ್ಣ ಪ್ರಮಾಣದ ವಾಹನ ಉತ್ಪಾದನೆಯ ಗುರಿಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಿಂದಲೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಇವಿ ವಾಹನಗಳನ್ನು ರಫ್ತು ಮಾಡಲು ಸಿದ್ದವಾಗಿದೆ.

ಇವಿ ಸ್ಕೂಟರ್ ಮಾತ್ರವಲ್ಲ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ಓಲಾ ಕಂಪನಿಯಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ನಂತರ ಮತ್ತಷ್ಟು ಹೊಸ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಂಪ್ಯಾಕ್ಟ್ ಎಲೆಕ್ಟ್ಕಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಯೋಜನೆಗೆ ಪೂರಕವಾಗಿ ದೇಶಾದ್ಯಂತ ಅತಿ ದೊಡ್ಡ ಚಾರ್ಜಿಂಗ್ ನೆಟ್‌ವರ್ಕ್ ತೆರೆಯುತ್ತಿರುವ ಓಲಾ ಕಂಪನಿಯು ದೇಶದ ಪ್ರಮುಖ 400 ನಗರಗಳಲ್ಲಿ 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ವಿಸ್ತರಿಸುತ್ತಿದೆ.

ಇವಿ ಸ್ಕೂಟರ್ ಮಾತ್ರವಲ್ಲ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನಗಳಿಗೆ ಹೋಂ ಚಾರ್ಜರ್ ಸೌಲಭ್ಯ ಹೊರತುಪಡಿಸಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗುತ್ತಿದ್ದು, ಹೈಪರ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಗಂಟೆಗೆ ನೂರಾರು ಎಲೆಕ್ಟ್ರಿಕ್ ವಾಹನಗಳನ್ನು ಒಂದೇ ಅವಧಿಯಲ್ಲೇ ಚಾರ್ಜ್ ಮಾಡಬಹುದಾಗಿದೆ.

ಇವಿ ಸ್ಕೂಟರ್ ಮಾತ್ರವಲ್ಲ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ಓಲಾ ಕಂಪನಿಯು ದೇಶದ 400 ನಗರಗಳಲ್ಲಿ 1 ಲಕ್ಷ ಸಾಮಾನ್ಯ ಫಾಸ್ಟ್ ಚಾರ್ಜರ್‌ಗಳನ್ನು ತೆರೆಯಲಿದ್ದರೆ ಆಯ್ದ ಮೆಟ್ರೊ ನಗರಗಳಲ್ಲಿ ಹೈಪರ್ ಚಾರ್ಜಿಂಗ್ ಪಾರ್ಕ್‌ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಹೈಪರ್ ಚಾರ್ಜಿಂಗ್ ಪಾರ್ಕ್‌ಗಳಲ್ಲಿ ಒಂದೇ ಬಾರಿಗೆ ನೂರಾರು ಇವಿ ವಾಹನಗಳನ್ನು ಚಾರ್ಜ್ ಮಾಡಬಹುದಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಇವಿ ಸ್ಕೂಟರ್ ಮಾತ್ರವಲ್ಲ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ಓಲಾ ಕಂಪನಿಯು ಈಗಾಗಲೇ ಹೊಸ ವಾಹನ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿದ್ದು, ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ಹೊಸ ಘಟಕವು ಸಿದ್ದಗಗೊಂಡಿದೆ. ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಗಳ ಜೊತೆಗೆ ವಿವಿಧ ಕಾರ್ಯಗಳಿಗಾಗಿ ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲು ನಿರ್ಧರಿಸಲಾಗುತ್ತಿದೆ.

ಇವಿ ಸ್ಕೂಟರ್ ಮಾತ್ರವಲ್ಲ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ಬರೋಬ್ಬರಿ 500 ಎಕರೆ ವ್ಯಾಪ್ತಿ ಹೊಂದಿರುವ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ಪ್ರತಿ 2 ಸೆಕೆಂಡುಗಳಲ್ಲಿ 1 ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಗೊಳ್ಳಲಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಇವಿ ಸ್ಕೂಟರ್ ಮಾತ್ರವಲ್ಲ ಇವಿ ಕಾರುಗಳನ್ನು ಸಹ ಅಭಿವೃದ್ದಿಗೊಳಿಸುತ್ತಿದೆ ಓಲಾ ಎಲೆಕ್ಟ್ರಿಕ್

ಹೊಸ ಯೋಜನೆಗಾಗಿ ಓಲಾ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಇವಿ ವಾಹನಗಳನ್ನು ಅಭಿವೃದ್ದಿಪಡಿಸಲಿದೆ.

More from DriveSpark

Article Published On: Friday, April 30, 2021, 13:01 [IST]
English summary
Ola Electric to Launch Cheapest Electric Cars in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+