ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಟೋಕಿಯೋ ಒಲಿಂಪಿಕ್ಸ್‌‌ನ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ನೀರಜ್‌ ಚೋಪ್ರಾ ಅವರಿಗೆ ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ದುಬಾರಿ ಉಡುಗೊರೆ ನೀಡಿದ್ದಾರೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಜಾವಲಿನ್ ಎಸೆತ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದ ನೀರಜ್ ಚೋಪ್ರಾ ಅವರಿಗೆ ಅದೇ ದಿನವೇ ವಿಶೇಷ ಉಡುಗೊರೆಯೊಂದನ್ನು ಪ್ರಕಟಿಸಿದ್ದ ಆನಂದ್ ಮಹೀಂದ್ರಾ ಅವರು ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್‌ಯುವಿ700 ಸ್ಪೆಷಲ್ ಎಡಿಷನ್ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಸಾಮಾಜಿಕ ಮತ್ತು ಕ್ರಿಡಾ ಕ್ಷೇತ್ರದಲ್ಲಿ ಸಾಧನೆಗೈದ ಹಲವರಿಗೆ ವಿಶೇಷ ಉಡುಗೊರೆ ನೀಡಿರುವ ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಕಳೆದ ಒಲಿಂಪಿಕ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಕ್ರಿಡಾಪಟುಗಳಿಗೆ ವಿಶೇಷ ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದರು.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಆನಂದ್ ಮಹೀಂದ್ರಾ ಅವರು ಕೊಟ್ಟ ಮಾತಿನಂತೆ ಇತ್ತೀಚೆಗೆ ಬಿಡುಗಡೆಯಾದ ಹೊಸ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿಯೇ ಕ್ರಿಡಾ ಸಾಧಕರಿಗಾಗಿಯೇ ವಿಶೇಷ ವೈಶಿಷ್ಟ್ಯತೆಗಳನ್ನು ಒಳಗೊಂಡ ಗೋಲ್ಡ್ ಎಡಿಷನ್ ಅಭಿವೃದ್ದಿಗೊಳಿಸಿ ಹಸ್ತಾಂತರ ಮಾಡಲಾಗಿದೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಮಹೀಂದ್ರಾ ಕಂಪನಿಯ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್ ಚೋಪ್ರಾ ಅವರು ತಮ್ಮ ಟ್ವಿಟರ್ ಖಾತೆ ಹೊಸ ಕಾರಿನ ಮಾಹಿತಿ ಹಂಚಿಕೊಂಡಿದ್ದು, ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ನೀರಜ್ ಚೋಪ್ರಾ ಅವರಿಗೆ ನೀಡಲಾದ ಎಕ್ಸ್‌ಯುವಿ700 ಸ್ಪೆಷಲ್ ಎಡಿಷನ್ ಕಾರು ಕೆಲವು ಹೊಸ ವಿಶಿಷ್ಟ ವಿನ್ಯಾಸಗಳೊಂದಿಗೆ ಅಭಿವೃದ್ದಿಪಡಿಸಲಾಗಿದ್ದು, ಸ್ಯಾಟಿನ್ ಚಿನ್ನದ ಲೇಪವನ್ನೂ ಹೊಂದಿರುವ ವಿಶೇಷ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಆಕರ್ಷಕವಾಗಿದೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಚಿನ್ನದ ಲೇಪಿತ ಬ್ಯಾಡ್ಜ್‌ ಹೊಂದಿರುವ ವಿಶೇಷ ಆವೃತ್ತಿಯಲ್ಲಿ ತಾಂತ್ರಿಕ ಅಂಶಗಳು ಸಾಮಾನ್ಯ ಮಾದರಿಯಲ್ಲಿರುವಂತೆ ಮುಂದುವರಿಸಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷ ಬೆಲೆ ಹೊಂದಿದೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಉಡುಗೊರೆಯಾಗಿರುವ ನೀಡಿರುವ ಎಕ್ಸ್‌ಯುವಿ700 ಸ್ಪೆಷಲ್ ಎಡಿಷನ್ ಮಾದರಿಯು ಟಾಪ್ ಎಂಡ್ ಆವೃತ್ತಿಯಾಗಿದ್ದು, ಹೊಸ ಕಾರು ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳನ್ನು ಹೊಂದಿದೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಎಎಕ್ಸ್7 ಲಗ್ಷುರಿ ಮಾದರಿಯನ್ನೇ ಇದೀಗ ಉಡುಗೊರೆಯಾಗಿ ನೀಡಲಾಗಿದ್ದು, ಹೊಸ ಕಾರು ಹೊಸ ಕಾರಿನಲ್ಲಿ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದ್ದು, ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿ ಗೇರ್‌ಬಾಕ್ಸ್‌ ಆಯ್ಕೆ ಹೊಂದಿದೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಫ್ರಂಟ್ ಫಾಸಿಯಾದೊಂದಿಗೆ ಸಂಯೋಜನೆಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್ಎಸ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18-ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಎಕ್ಸ್‌ಯುವಿ700 ಮಾದರಿಯ ಸೈಡ್ ಪ್ರೋಫೈಲ್ ಮತ್ತು ಹಿಂಬದಿಯ ವಿನ್ಯಾಸವು ಕೂಡಾ ಸಾಕಷ್ಟು ಹೊಸತನದಿಂದ ಕೂಡಿದ್ದು, ಹಿಂಬದಿಯ ಫೆಂಡರ್‌ನೊಂದಿಗೆ ಹರಡಿಕೊಂಡಿರುವ ವಿಭಜಿತ ಟೈಲ್‌ಲ್ಯಾಂಪ್, ವಿನೂತನ ವಿನ್ಯಾಸದ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಪಡೆದುಕೊಂಡಿದೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಹಾಗೆಯೇ ಹೊಸ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಮತ್ತು ಇನ್ಪೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ, 60 ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಕಾರ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಅಸಿಸ್ಟೆನ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 2 ಮತ್ತು 3ನೇ ಸಾಲಿನಲ್ಲೂ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್ ಮತ್ತು ಏರ್ ಪ್ಯೂರಿಫ್ಲೈರ್ ಸೌಲಭ್ಯಗಳಿವೆ.

ಆನಂದ್ ಮಹೀಂದ್ರಾ ಅವರಿಂದ ದುಬಾರಿ ಉಡುಗೊರೆ ಪಡೆದುಕೊಂಡ ನೀರಜ್‌ ಚೋಪ್ರಾ!

ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಸೌಲಭ್ಯವು ಹೊಸ ಕಾರಿನ ಪ್ರಮುಖ ಸುರಕ್ಷಾ ಸೌಲಭ್ಯವಾಗಿದ್ದು, ಇದರ ಜೊತೆಗೆ 7-ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯ ಹೊಂದಿದೆ.

Article Published On: Monday, November 1, 2021, 15:02 [IST]
English summary
Olympic gold winner neeraj chopra rceives mahindra xuv700 gold edition details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+