Just In
Don't Miss!
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಯುಗಾದಿ ಆರ್ಥಿಕ ಭವಿಷ್ಯ 2021: ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷ ಆದಾಯ ಸ್ಥಿತಿ ಹೇಗಿರಲಿದೆ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನವದೆಹಲಿಯಲ್ಲಿ ಮೊದಲ ಡೀಲರ್'ಶಿಪ್ ಆರಂಭಿಸಿದ ಒಮೆಗಾ ಸೀಕಿ
ಒಂಗ್ಲಿಯಾ ಒಮೆಗಾದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಒಮೆಗಾ ಸೀಕಿ ಪ್ರೈವೇಟ್ ಲಿಮಿಟೆಡ್ ಒಹೆಚ್ಎಂ ಆಟೋಮೋಟಿವ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆಯ ಭಾಗವಾಗಿ ಕಂಪನಿಯು ನವದೆಹಲಿಯಲ್ಲಿ ತನ್ನ ಮೊದಲ ಡೀಲರ್ ಶಿಪ್ ಅನ್ನು ಆರಂಭಿಸಿದೆ.

ಕಂಪನಿಯ ಹೊಸ ಡೀಲರ್ ಶಿಪ್ ನವದೆಹಲಿಯ ಪಾಂಡವ್ ನಗರದಲ್ಲಿದೆ. ಈ ಡೀಲರ್ ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮ / ಪಶುಸಂಗೋಪನೆ, ಡೈರಿ ಹಾಗೂ ಮೀನುಗಾರಿಕೆ ರಾಜ್ಯ ಸಚಿವರಾದ ಪ್ರತಾಪ್ ಚಂದ್ರ ಸಾರಂಗಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರತಾಪ್ ಚಂದ್ರ ಸಾರಂಗಿರವರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕರೋನಾ ಸಾಂಕ್ರಾಮಿಕದ ನಡುವೆ ಪ್ರಧಾನಿ ನರೇಂದ್ರ ಮೋದಿರವರು ದೇಶವನ್ನು ಸ್ವಾವಲಂಬಿಯನ್ನಾಗಿಸುವ ಸಲುವಾಗಿ ಸ್ವಾವಲಂಬಿ ಭಾರತ ಅಭಿಯಾನವನ್ನು ಆರಂಭಿಸಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಅಭಿಯಾನದ ಅಂಗವಾಗಿ ಕಾರ್ಯ ನಿರ್ವಹಿಸುತ್ತಿರುವ ಒಮೆಗಾ ಸೀಕಿ ಮೊಬಿಲಿಟಿಯನ್ನು ನಾವು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ ಎಂದು ಹೇಳಿದರು. ಸ್ವಾವಲಂಬಿ ಭಾರತ ಅಭಿಯಾನವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ.

ವಿಶ್ವದಾದ್ಯಂತವಿರುವ ದೇಶಗಳು ಒಂದು ಶತಮಾನದಿಂದ ಉಪ ಉತ್ಪನ್ನಗಳಿಗಾಗಿ ಹೆಚ್ಚು ಸಂಪನ್ಮೂಲಗಳನ್ನು ಹಾಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿವೆ. ಕಡಿಮೆ ಬೆಲೆಗೆ ದೊರೆಯುವ ಪ್ರಕೃತಿಯಲ್ಲಿ ಹೇರಳವಾಗಿರುವ ಮಾನವ ನಿರ್ಮಿತ ಸಂಪನ್ಮೂಲಗಳನ್ನು ನಾವು ಯಾವಾಗಲೂ ನಿರ್ಲಕ್ಷಿಸುತ್ತೇವೆ ಎಂದು ಅವರು ಹೇಳಿದರು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಮೆಗಾ ಸೀಕಿ ಮೊಬಿಲಿಟಿಯು ದೆಹಲಿ-ಎನ್‌ಸಿಆರ್ ಪ್ರದೇಶದ ಮೇಲಿನ ಹಿಡಿತವನ್ನು ಬಲಪಡಿಸುವುದು. ಇ-ಕಾಮರ್ಸ್ ಹಾಗೂ ಎಫ್‌ಎಂಸಿಜಿ ವಿತರಣೆಯಲ್ಲಿ ನಿಯೋಜಿಸಲಾದ ಗ್ರಾಹಕರಿಗೆ ಅದರ ಉತ್ಪನ್ನಗಳನ್ನು ಒದಗಿಸುವುದರತ್ತ ಪ್ರಮುಖವಾಗಿ ಗಮನ ಹರಿಸಿದೆ.

ಸದ್ಯಕ್ಕೆ ಒಮೆಗಾ ಸೀಕಿ ಮೊಬಿಲಿಟಿ ಡೀಲರ್‌ಶಿಪ್‌ಗಳಲ್ಲಿ ಪ್ರದರ್ಶಿಸಲು ಸುಮಾರು 6 ವಿಭಿನ್ನ ವಾಹನಗಳನ್ನು ಹೊಂದಿದೆ. ಇದರಲ್ಲಿ ಫಾರ್ಮಾ ವಿತರಣಾ ಪ್ರಕ್ರಿಯೆಗಾಗಿ ಹೊಸದಾಗಿ ಆರಂಭಿಸಲಾದ ರೇಜ್ ಪ್ಲಸ್ ಫ್ರಾಸ್ಟ್ ಸಹ ಸೇರಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಮೆಗಾ ಸೀಕಿ ಮೊಬಿಲಿಟಿ ಅಧ್ಯಕ್ಷರಾದ ಉದಯ ನಾರಂಗ್ ತಮ್ಮ ಮೊದಲ ಡೀಲರ್ ಶಿಪ್ ಆರಂಭವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಒಮೆಗಾ ಸೀಕಿ ಮೊಬಿಲಿಟಿ ವೇಗವಾಗಿ ಬೆಳೆಯುತ್ತಿದೆ. ನಾವು ಗ್ರಾಹಕರು ಹಾಗೂ ಡೀಲರ್'ಗಳಿಂದ ಹೆಚ್ಚು ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೇವೆ.

ಎಲೆಕ್ಟ್ರಿಕ್ ವಾಹನಗಳ ಭವಿಷ್ಯವು ಉಜ್ವಲವಾಗಿದ್ದು, ನಾವು ಒಇಇಎಂ ಆಗಿ ಉತ್ತಮ ವಾಹನಗಳು ಹಾಗೂ ಗುಣಮಟ್ಟದ ಸೇವಾ ಅನುಭವವನ್ನು ನಮ್ಮ ಗ್ರಾಹಕರಿಗೆ ಪ್ರಾಮಾಣಿಕವಾಗಿ ನೀಡುತ್ತೇವೆ ಎಂದು ಅವರು ಹೇಳಿದರು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದೆಹಲಿಯಲ್ಲಿ ನಮ್ಮ ಹೊಸ ಡೀಲರ್ ಶಿಪ್ ಉದ್ಘಾಟಿಸಿದ್ದಕ್ಕಾಗಿ ಕೇಂದ್ರ ಸಚಿವರಾದ ಪ್ರತಾಪ್ ಚಂದ್ರ ಸಾರಂಗಿರವರಿಗೆ ನಾವು ಆಭಾರಿಯಾಗಿದ್ದೇವೆ ಎಂದು ಅವರು ಹೇಳಿದರು.