ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಕೆಲವು ವರ್ಷಗಳಿಂದ ಟಾಟಾ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿದೆ. ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಟಾಟಾ ಕಾರುಗಳು ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೇ ವಿದೇಶಗಳಿಲ್ಲಿಯು ಟಾಟಾ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಆದರೆ ಹಲವು ವರ್ಷಗಳ ಹಿಂದೆ ಟಾಟಾ ಕಾರುಗಳು ಬೇಡಿಕೆ ಗಣನೀಯವಾಗಿ ಕುಸಿದುಕೊಂಡಿತ್ತು. ಅದೇ ಸಮಯದಲ್ಲಿ ಬಿಡುಗಡೆಗೊಂಡ ಅತ್ಯುತ್ತಮ ಗುಣಮಟ್ಟದ ಟಾಟಾ ಜೆಸ್ಟ್ ಕಾರು ಕೂಡ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಇದಕ್ಕೆ ಕೆಲವು ಕಾರಣಗಳು ಕೂಡ ಇವೆ. ಅದರ ಬಗ್ಗೆ ತಿಳಿಯುವ ಮುನ್ನ ಈ ಟಾಟಾ ಜೆಸ್ಟ್ ಕಾರಿನ ವಿಶೇಷತೆಗಳ ಬಗ್ಗೆ ತಿಳಿಯೋಣ. ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಜೆಸ್ಟ್ ಎಂಬ ಪ್ರೀಮಿಯಂ ಸಬ್ -4 ಮೀಟರ್ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು ಈ ಟಾಟಾ ಜೆಸ್ಟ್ ವಿಭಾಗದಲ್ಲಿ ಅತಿದೊಡ್ಡ ಮತ್ತು ಅತ್ಯಂತ ವಿಶಾಲವಾದ ಸೆಡಾನ್ ಆಗಿತ್ತು.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಗಳೊಂದಿಗೆ, ಡೀಸೆಲ್ ರೂಪಾಂತರದಲ್ಲಿ ಎಎಂಟಿ ಗೇರ್ ಬಾಕ್ಸ್ ಹೊಂದಿದ ಮೊದಲ ವಿಭಾಗಗಳಲ್ಲಿ ಇದು ಒಂದಾಗಿದೆ. ಇದು ತನ್ನ ವರ್ಗದ ಸುರಕ್ಷಿತ ಸೆಡಾನ್ ಕೂಡ ಆಗಿತ್ತು. ಜೆಸ್ಟ್‌ನ ಡ್ಯುಯಲ್ ಏರ್‌ಬ್ಯಾಗ್ ರೂಪಾಂತರಕ್ಕೆ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂನಿಂದ ಕ್ರ್ಯಾಶ್ ಟೆಸ್ಟ್‌ನಲ್ಲಿ ನಾಲ್ಕು ಸ್ಟಾರ್ ರೇಟಿಂಗ್ ಕೂಡ ಲಭಿಸಿತ್ತು.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಸ್ಪೋರ್ಟಿ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಟಾಟಾ ಜೆಸ್ಟ್ ಒಟ್ಟು 11 ರೂಪಾಂತರಗಳಲ್ಲಿ ಮಾರಾಟವಾಗುತ್ತಿತ್ತು. ಇದರಲ್ಲಿ 4 ಪೆಟ್ರೋಲ್ ಮತ್ತು 7 ಡೀಸೆಲ್ ರೂಪಾಂತರಗಳಾಗಿದೆ. ಜೆಸ್ಟ್ ಎಎಂಟಿ ಗೇರ್ ಬಾಕ್ಸ್ ಅನ್ನು ಡೀಸೆಲ್ ರೂಪಾಂತರದೊಂದಿಗೆ ಹೊಂದಿದ್ದು, ಇದು ಅಗ್ಗದ ಡೀಸೆಲ್ ಆಟೋಮ್ಯಾಟಿಕ್ ಸೆಡಾನ್ ಆಗಿತ್ತು.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಜೆಸ್ಟ್ ಪ್ರೀಮಿಯೊ ವಿಶೇಷ ಆವೃತ್ತಿಯ ರೂಪಾಂತರವಾಗಿದ್ದು, ಕೆಲವು ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಟಚ್‌ಸ್ಕ್ರೀನ್ ಫೋನ್ ಆಧಾರಿತ ನ್ಯಾವಿಗೇಷನ್ ಅನ್ನು ಒಳಗೊಂಡಿತ್ತು. ಇನ್ನು ಟಾಟಾ ಜೆಸ್ಟ್ ಕಾರಿನಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಮತ್ತು 1.3 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಇದರಲ್ಲಿ ಪೆಟ್ರೋಲ್ ರೆವೊಟ್ರಾನ್ ಟ್ರಿಪಲ್ ಸಿಲಿಂಡರ್ ಎಂಜಿನ್ 90 ಬಿಎಚ್‌ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡೀಸೆಲ್ -ಚಾಲಿತ ಟ್ರಿಪಲ್ ಸಿಲಿಂಡರ್ ಕ್ವಾಡ್ರಜೆಟ್ ಎಂಜಿನ್ ಟರ್ಬೋಚಾರ್ಜ್ಡ್ ಎಂಜಿನ್ 75 ಬಿಹೆಚ್‍ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಇನ್ನೊಂದು ಡೀಸೆಲ್ ಟರ್ಬೋಚಾರ್ಜ್ಡ್ ವಿಜಿಟಿ ಎಂಜಿನ್ 90 ಬಿಹೆಚ್‌ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇದರೊಂದಿಗೆ ಡೀಸೆಲ್ ಎಂಜಿನ್ ಗಳೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಈ ಜೆಸ್ಟ್ ಕಾರಿನ ಅಭಿವೃದ್ದಿಗೆ ಐದು ದೇಶಗಳಲ್ಲಿರುವ ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ವಿನ್ಯಾಸಕಾರರು ಕಾನ್ಫಿಡೆಂಟ್ ಡೈನಾಮಿಸಂ ಎಂಬ ವಿನ್ಯಾಸ ನಿರ್ದೇಶನದಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡಿದ್ದಾರೆ. ಇದರ ಪರಿಣಾಮವಾಗಿ ಒಂದು ವಿಶಿಷ್ಟವಾದ ಬಾಹ್ಯ ವಿನ್ಯಾಸವನ್ನು ರಚಿಸಲಾಯಿತು.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಈ ಕಾರಿನಲ್ಲಿ ಫ್ರಂಟ್ ಗ್ರಿಲ್, ಕ್ರೋಮ್-ಆಕ್ಸೆಂಟೆಡ್ ಡ್ಯುಯಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಟಾಪ್ ವೆರಿಯಂಟ್‌ಗಳಿಗಾಗಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, 15 "ಅಲಾಯ್ ವೀಲ್‌ಗಳು, ಟರ್ನ್ ಲೈಟ್ಸ್ ಮತ್ತು ಬ್ಲಿಂಕರ್‌ಗಳೊಂದಿಗೆ ಬಾಡಿ ಕಲರ್ಡ್ ಒಆರ್‌ವಿಎಮ್‌ಗಳು ಮತ್ತು ಬಾಡಿ ಕಲರ್ ಬಂಪರ್‌ಗಳನ್ನು ಹೊಂದಿದೆ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಇದು ಸೊಗಸಾದ ಟೈಲ್ ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದ್ದು, ಫಸ್ಟ್-ಇನ್-ಸೆಗ್ಮೆಂಟ್ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಇನ್ನು ಟಾಟಾ ಜೆಸ್ಟ್ ಕಾರಿನ ಒಳಭಾಗದಲ್ಲಿ ಹೆಚ್ಚುವರಿ ಲೆಗ್‌ರೂಮ್ ಮತ್ತು ಹೆಡ್ ರೂಮ್ ಅನ್ನು ಹೊಂದಿದೆ. ಲ್ಯಾಟೆ ಮತ್ತು ಜಾವಾ ಬ್ಲಾಕ್‌ ಎಂಬ ಡ್ಯುಯಲ್ ಬಣ್ಣಗಳೊಂದಿಗೆ ಈ ಕಾರಿನ ಇಂಟಿರಿಯರ್ ನಿಂದ ಕೂಡಿದೆ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಈ ಕಾರಿನ ಒಳಭಾಗದ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಡ್ಯಾಶ್‌ಬೋರ್ಡ್ ಸ್ಟೈಲಿಶ್ ಆಗಿ ಸೀಟ್ ಬೆಲ್ಟ್ ರಿಮೈಂಡರ್, ಇನ್-ಗೇರ್ ಇಂಡಿಕೇಟರ್, ಡೋರ್-ಓಪನ್ ಡಿಸ್‌ಪ್ಲೇ, ಡಿಜಿಟಲ್ ಫ್ಯೂಯಲ್ ಗೇಜ್, ಇತ್ಯಾದಿಗಳೊಂದಿಗೆ ಮಲ್ಟಿ-ಫಂಕ್ಷನಲ್ ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಂಟ್ ಅನ್ನು ಹೊಂದಿದೆ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಜಿಸ್ಟ್ ತನ್ನ ಎಲ್ಲಾ ರೂಪಾಂತರಗಳಲ್ಲಿ ಕನೆಕ್ಟ್ ನೆಕ್ಸ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿತ್ತು. ಇನ್ನು 8 ಸೌಂಡ್ ಸ್ಪೀಕರ್ ಗಳನ್ನು ಹೊಂದಿದೆ. ಇನ್ನು ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಮಿರರ್ ಲಿಂಕ್ ನಂತಹ ವೈಶಿಷ್ಟ್ಯಗಳೊಂದಿಗೆ ಪರಿಷ್ಕರಿಸಲಾಗಿದೆ. ಇನ್ನು ಮ್ಯಾಪ್ಮಿಇಂಡಿಯಾ ಅಪ್ಲಿಕೇಶನ್ ಅನ್ನು ಸಹ ಹೊಂದಿತ್ತು,

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಜೆಸ್ಟ್ ಕಾರಿನಲ್ಲಿ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಇಬಿಡಿ ಮತ್ತು ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಆಟೋ ಡೋರ್ ಲಾಕ್, ಉನ್ನತ ಮಾದರಿಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಪ್ರತಿ ವೇರಿಯಂಟ್‌ಗೆ ಇಂಬೊಬಿಲೈಜರ್ ಮತ್ತು ಕಳ್ಳತನವಾಗದಿರಲು ಎಚ್ಚರಿಕೆ ನೀಡಲು ಪೆರಿಮೆಟ್ರಿಕ್ ಅಲಾರಂ ಸಿಸ್ಟಂ ಅನ್ನು ಒಳಗೊಂಡಿತ್ತು.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ವೈಫಲ್ಯದ ಹಿಂದಿನ ಕಾರಣ

2014ರಲ್ಲಿ ಟಾಟಾ ಜೆಸ್ಟ್ ಕಾರಿನ ಆರಂಭಿಕ ಬೆಲೆಯು ರೂ.5.82 ಲಕ್ಷಗಳಾಗಿತ್ತು. ಈ ಟಾಟಾ ಜೆಸ್ಟ್ ಕಾರು ಕೈಗೆಟುಕುವ ಬೆಲೆ, ಅತ್ಯಾಧುನಿಕ ಫೀಚರ್ಸ್ ಮತ್ತು ಉತ್ತಮ ಎಂಜಿನ್ ಅನ್ನು ಹೊಂದಿತ್ತು. ಆದರೂ ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರು ಗ್ರಾಹಕರನ್ನು ಸೆಳೆಯಲು ವಿಫಲವಾಯ್ತು. ಇದಕ್ಕೆ ಮುಖ್ಯ ಕಾರಣ ಆ ಸಮಯದಲ್ಲಿ ಜನರು ಟಾಟಾ ಕಾರುಗಳ ಮೇಲೆ ನಂಬಲು ಸಿದ್ಧರಿರಲಿಲ್ಲ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಏಕೆಂದರೆ ಇತರ ಟಾಟಾ ಇಂಡಿಕಾ, ಸಫಾರಿಯಂತಹ ಕಾರುಗಳು ನಡು ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿತ್ತು, ಈ ಕಾರುಗಳು ಹಲವು ಬಾರಿ ತಾಂತ್ರಿಕ ತೊಂದರೆ ಅನುಭವಿಸುತ್ತಿತ್ತು. ಇದರಿಂದ ಜನರು ಟಾಟಾ ಕಾರುಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡರು. ಇದರಿಂದ ಟಾಟಾ ಅತ್ಯುತ್ತಮ ಜೆಸ್ಟ್ ಕಾರು ಬಿಡುಗಡೆಗೊಳಿಸಿದರು ಯಶಸ್ವಿಯಾಗಿಲ್ಲ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಇನ್ನು ಟಾಟಾ ಜೆಸ್ಟ್ ಕಾರಿಗೆ ಮಾರುತಿ ಸುಜುಕಿ ಡಿಜೈರ್ ಪ್ರಬಲ ಪೈಪೋಟಿಯನ್ನು ನೀಡುತ್ತಿತ್ತು. ಜೆಸ್ಟ್ ಕಾರಿಗಿಂತ ಮಾರುತಿ ಡಿಜೈರ್ ತುಸು ದುಬಾರಿಯಾದರೂ ಮಾರುತಿ ಡಿಜೈರ್ ಕಾರು ಹೆಚ್ಚಿನ ಗ್ರಾಹಕರನ್ನು ಸೆಳೆಯಿತ್ತು. ಮಾರುತಿ ಕಾರುಗಳು ನಿರ್ವಹಣೆ ವೆಚ್ಚ ಕಡಿಮೆಯಾಗಿತ್ತು. ಅಲ್ಲದೇ ಅಷ್ಟು ತಾಂತ್ರಿಕ ತೊಂದರೆಯನ್ನು ಎದುರಿಸುತ್ತಿರಲಿಲ್ಲ. ಇನ್ನು 2017 ರಲ್ಲಿ ಈ ಟಾಟಾ ಜೆಸ್ಟ್ ಕಾರನ್ನು ಸ್ಥಗಿತಗೊಳಿಸಿತ್ತು. ನಂತರ ಕಮರ್ಷಿಯಲ್ ಆಗಿ ಮಾರಾಟ ಮಾಡಲಾಗುತ್ತಿತ್ತು, ಇದನ್ನು ಕಳೆದ ವರ್ಷ ಸ್ಥಗಿತಗೊಳಿಸಲಾಗಿದೆ.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಇನ್ನು ಆ ಸಮಯದಲ್ಲಿ ಟಾಟಾ ಮೋಟಾರ್ಸ್ ಕಾರು ಸರ್ವಿಸ್ ಬಗ್ಗೆ ಗ್ರಾಹಕರಿಗೆ ಅಸಮಾಧಾನವಿತ್ತು. ಡೀಲರುಗಳ ವರ್ತನೆ ಬಗ್ಗೆ ಸಾಕಷ್ಟು ಜನರು ಉತ್ತಮ ಅಭಿಪ್ರಾಯವನ್ನು ಹೊಂದಿರಲಿಲ್ಲ, ಆದರೆ ಮಾರುತಿ ಸುಜುಕಿ ಉತ್ತಮ ಸರ್ವಿಸ್ ನಿಂದ ಜನಪ್ರಿಯತೆಗಳಿಸಿದ್ದರು.

ಗುಣಮಟ್ಟದ ಟಾಟಾ ಜೆಸ್ಟ್ ಕಾರು ಭಾರತದಲ್ಲಿ ವಿಫಲವಾಗಲು ಪ್ರಮುಖ ಕಾರಣಗಳಿವು

ಟಾಟಾ ಮೋಟಾರ್ಸ್ ಹೀಗೆ ಹಲವು ಕಾರಣಗಳಿಂದ ವೈಫಲ್ಯವನ್ನು ಕಂಡಿತ್ತು. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಬಗ್ಗೆಹರಿಸಿ ಇಂದು ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿಂದ ಟಾಟಾ ಕಾರುಗಳು ಮಾರಾಟವಾಗುತ್ತಿವೆ. ಇಂದು ಟಾಟಾ ನಂಬಿಕೆಯ ಬ್ರ್ಯಾಂಡ್ ಆಗಿದೆ. ಇಂದು ಟಾಟಾ ಕಾರುಗಳು ಹೆಚ್ಚು ಸುರಕ್ಷತೆಗಾಗಿ ಜನಪ್ರಿಯತೆಯನ್ನು ಗಳಿಸಿದೆ. ಅಲ್ಲದೇ ಟಾಟಾ ನಂಬಿಕೆಯ ಬ್ರ್ಯಾಂಡ್ ಜೊತೆಗೆ ಹೆಮ್ಮೆಯ ಸ್ವದೇಶಿ ಕಾರು ಉತ್ಪಾದನಾ ಬ್ರ್ಯಾಂಡ್ ಆಗಿದೆ.

Most Read Articles

Kannada
English summary
One of the best compact sedan from the past tata zest features engine details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X