ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಟಾಟಾ ಮೋಟಾರ್ಸ್ (Tata Motors) ಕಂಪನಿಯು ಇತ್ತೀಚೆಗೆ ಭಾರತದಲ್ಲಿ ತನ್ನ ಬಹು ನಿರೀಕ್ಷಿತ ಪಂಚ್ (Punch) ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಟಾಟಾ ಮೋಟಾರ್ಸ್ ಕಂಪನಿಯು ಈ ಎಸ್‌ಯುವಿಯನ್ನು ಕೈಗೆಟುಕುವ ಬೆಲೆಯಲ್ಲಿ ಹೆಚ್ಚು ವಿಶೇಷ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಿದೆ. ದೇಶಾದ್ಯಂತ ಈ ಎಸ್‌ಯುವಿಯ ಬುಕ್ಕಿಂಗ್ ಆರಂಭಿಸಲಾಗಿದೆ.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಟಾಟಾ ಮೋಟಾರ್ಸ್ ಕಂಪನಿ ಹಾಗೂ ಮಾರಾಟಗಾರರು ಈ ಎಸ್‌ಯುವಿಯ ವಿತರಣೆಯಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಹೊಸದಾಗಿ ವಿತರಿಸಲಾದ ಪಂಚ್ ಮೈಕ್ರೋ ಎಸ್‌ಯುವಿಯೊಂದು ಮಾಲೀಕರ ಮನೆಗೆ ಹೋಗುವ ಮೊದಲು ವರ್ಕ್ ಶಾಪ್'ಗೆ ಹೋಗುವಂತಹ ಘಟನೆ ವರದಿಯಾಗಿದೆ. ಹೊಸ ಪಂಚ್ ಎಸ್‌ಯುವಿಯ ವಿತರಣೆ ತೆಗೆದುಕೊಳ್ಳುವ ವೇಳೆ ಈ ಘಟನೆ ಸಂಭವಿಸಿದೆ.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ವಿತರಣೆ ಪಡೆಯುವ ವೇಳೆ ಎಸ್‌ಯುವಿಯು ನಿಯಂತ್ರಣ ಕಳೆದು ಕೊಂಡು ಅಪಘಾತಕ್ಕೀಡಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಅಚ್ಚರಿಯನ್ನುಂಟು ಮಾಡುತ್ತವೆ. ವ್ಯಕ್ತಿಯೊಬ್ಬ ಹೊಸದಾಗಿ ಕಾರು ಚಾಲನೆ ಮಾಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಈ ವ್ಯಕ್ತಿಗೆ ಕಾರು ಚಾಲನೆ ಮಾಡಿದ ಅನುಭವ ಇಲ್ಲದ ಕಾರಣ ಅಪಘಾತ ಸಂಭವಿಸಿದೆ.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಈ ವೀಡಿಯೊದಲ್ಲಿ ಕಾರು ಮಾಲೀಕ ಕಾರಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಶೋರೂಂ ಉದ್ಯೋಗಿ ಸೂಚನೆಗಳನ್ನು ನೀಡುವಾಗಲೇ ಕಾರು ಮಾಲೀಕ ಕಾರ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಾನೆ. ಈ ವೀಡಿಯೊದಲ್ಲಿ ಕಾರು ವಿತರಣೆ ಪಡೆಯುತ್ತಿರುವ ವ್ಯಕ್ತಿ ಸಂಭ್ರಮದಲ್ಲಿರುವುದನ್ನು ಗಮನಿಸಬಹುದು. ಹೊಸ ಕಾರ್ ಅನ್ನು ಚಾಲನೆ ಮಾಡಿ ಮುಂದಕ್ಕೆ ಚಲಿಸುವ ಕಾರು ಮಾಲೀಕರ ಶೋ ರೂಂ ಮುಂಭಾಗದಲ್ಲಿದ್ದ ಸಣ್ಣ ತಡೆ ಗೋಡೆಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಈ ಘಟನೆ ಶೋರೂಂ ಸಿಬ್ಬಂದಿಗಳನ್ನು ಮಾತ್ರವಲ್ಲದೆ ಆ ಪ್ರದೇಶದಲ್ಲಿ ಹಾದು ಹೋಗುವ ಪಾದಚಾರಿಗಳನ್ನೂ ಬೆಚ್ಚಿ ಬೀಳಿಸಿತು. ಈ ಘಟನೆಯಿಂದ ಟಾಟಾ ಪಂಚ್ ಕಾರಿನ ಮುಂಭಾಗದ ಬಂಪರ್ ಹಾಗೂ ರೇಡಿಯೇಟರ್ ಗೆ ತೀವ್ರ ಹಾನಿಯಾಗಿದೆ. ಹೊಸ ಕಾರು ವಿತರಣೆ ಪಡೆದ ಕೆಲವೇ ಕ್ಷಣಗಳಲ್ಲಿ ಅದರಲ್ಲೂ ಶೋರೂಂ ಆವರಣದಲ್ಲಿಯೇ ಈ ಘಟನೆ ನಡೆದಿದೆ.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಈ ಘಟನೆಯಿಂದ ಈ ಕಾರು ಅಪಘಾತಕ್ಕೀಡಾದ ಮೊದಲ ಪಂಚ್ ಕಾರು ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಟಾಟಾ ಮೋಟಾರ್ಸ್ ಪಂಚ್ ಮೈಕ್ರೊ ಎಸ್‌ಯುವಿಯು ಹೆಚ್ಚು ಸುರಕ್ಷತೆಯನ್ನು ಹೊಂದಿರುವ ವಾಹನವಾಗಿದೆ. ಈ ಕಾರು ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕಾಶ್ ಟೆಸ್ಟ್ ನಲ್ಲಿ ಸುರಕ್ಷತೆಗಾಗಿ ಐದು ಸ್ಟಾರ್ ರೇಟಿಂಗ್ ಪಡೆದಿದೆ. ಇದರಿಂದ ಈ ಕಾರಿಗೆ ಹೆಚ್ಚು ಬೇಡಿಕೆ ಉಂಟಾಗಿದೆ.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಕಡಿಮೆ ಬೆಲೆ ಹಾಗೂ ಹೆಚ್ಚು ಸುರಕ್ಷತೆ ಹೊಂದಿರುವ ಕಾರಣಕ್ಕೆ ಪಂಚ್ ಕಾರು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಹೊಸ ಪಂಚ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 5.49 ಲಕ್ಷಗಳಾಗಿದೆ. ಯಾವುದೇ ರೀತಿಯ ರಸ್ತೆಯನ್ನು ನಿಭಾಯಿಸುವ ಸಾಮರ್ಥ್ಯದೊಂದಿಗೆ ಈ ಕಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಪಂಚ್ ಕಾರ್ ಅನ್ನು ಒರಟು ರಸ್ತೆಗಳು, ವಕ್ರ ರಸ್ತೆಗಳು ಹಾಗೂ ಜಲ ಮಾರ್ಗಗಳನ್ನು ಎದುರಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಟಾಟಾ ಪಂಚ್ ಕಾರಿನಲ್ಲಿ ಪೆರಿಮೀಟರ್ ಅಲಾರ್ಮ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ರೈವರ್ ಹಾಗೂ ಸಹ ಚಾಲಕನ ಸೀಟ್‌ನಲ್ಲಿ ಸೀಟ್ ಬೆಲ್ಟ್ ರಿಮೈಂಡರ್, ಬ್ರೇಕ್ ಸ್ವೇ ಕಂಟ್ರೋಲ್, ಟಯರ್ ಪಂಕ್ಚರ್ ರಿಪೇರಿ ಕಿಟ್ ಸೇರಿದಂತೆ ಹಲವು ಫೀಚರ್ ಗಳನ್ನು ನೀಡಲಾಗಿದೆ. ಟಾಟಾ ಪಂಚ್ ಕಾರ್ ಅನ್ನು ಏಕೈಕ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ ಟಾಟಾ ಪಂಚ್ ಕಾರಿನಲ್ಲಿರುವ 1.2 ಲೀಟರಿನ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ 83 ಬಿ‌ಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಹಾಗೂ 5 ಸ್ಪೀಡ್ ಎಎಂಟಿ ಟ್ರಾನ್ಸ್‌ಮಿಷನ್ ನೀಡಲಾಗುತ್ತದೆ. ಈ ಕಾರಿನಲ್ಲಿ ಟರ್ಬೊ ಆಯ್ಕೆಇಲ್ಲದಿರುವುದು ಗ್ರಾಹಕರಿಗೆ ನಿರಾಶೆಯನ್ನುಂಟು ಮಾಡಿದೆ.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಇನ್ನು ಟಾಟಾ ಮೋಟಾರ್ಸ್ ಕಂಪನಿಯ ಅಕ್ಟೋಬರ್ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ, ಕಂಪನಿಯು ಕಳೆದ ತಿಂಗಳು 32,339 ಯನಿಟ್ ಕಾರುಗಳನ್ನು ಮಾರಾಟ ಮಾಡಿ 39% ನಷ್ಟು ಹೆಚ್ಚು ಪ್ರಗತಿ ಸಾಧಿಸಿದೆ. ಕಂಪನಿಯು 2020ರ ಅಕ್ಟೋಬರ್ ತಿಂಗಳಿನಲ್ಲಿ 24,652 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿತ್ತು. ಕಳೆದ ತಿಂಗಳು ಟಾಟಾ ಮೋಟಾರ್ಸ್ ಕಂಪನಿಯು ಒಟ್ಟು ವಾಹನ ಮಾರಾಟದಲ್ಲಿ 31% ನಷ್ಟು ಬೆಳವಣಿಗೆ ಸಾಧಿಸಿದೆ.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು 65,151 ವಾಹನಗಳನ್ನು ಮಾರಾಟ ಮಾಡಿದ್ದರೆ, 2020ರ ಅಕ್ಟೋಬರ್‌ ತಿಂಗಳಿನಲ್ಲಿ ಒಟ್ಟು 49,669 ಯನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಕಂಪನಿಯು ಪ್ರಯಾಣಿಕ ಕಾರು ಮಾರಾಟದಲ್ಲಿ ಮಾತ್ರವಲ್ಲದೆ ಕಮರ್ಷಿಯಲ್ ವಾಹನ ಮಾರಾಟದಲ್ಲಿಯೂ 18% ನಷ್ಟು ಮುನ್ನಡೆ ಸಾಧಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಪಂಚ್ ಕಾರು ಸಹ ಟಾಟಾ ಮೋಟಾರ್ಸ್ ಕಂಪನಿಗೆ ಹೆಚ್ಚು ಬೇಡಿಕೆ ತಂದುಕೊಟ್ಟಿದೆ.

ಹೊಸ ಕಾರು ವಿತರಣೆ ವೇಳೆ ಎಡವಟ್ಟು ಮಾಡಿಕೊಂಡ ಕಾರು ಮಾಲೀಕ

ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳಿಗೆ ಕಳೆದ ಒಂದು ವರ್ಷದಿಂದ ಭಾರೀ ಪ್ರಮಾಣದ ಬೇಡಿಕೆ ಉಂಟಾಗುತ್ತಿದೆ. ಕಂಪನಿಯ ಕಾರುಗಳ ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತಲೂ ಈ ಬಾರಿ ಮೂರು ಪಟ್ಟು ಹೆಚ್ಚಳವಾಗಿದೆ. ಕಂಪನಿಯು ದಕ್ಷಿಣ ಭಾರತದ ವಿವಿಧ ನಗರಗಳಲ್ಲಿ ಸುಮಾರು 70 ಹೊಸ ಶೋರೂಂಗಳಿಗೆ ಚಾಲನೆ ನೀಡಿದೆ.

Most Read Articles

Kannada
English summary
Punch micro suv owner hits wall during delivery video details
Story first published: Tuesday, November 2, 2021, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X