ಎಲೆಕ್ಟ್ರಿಕ್ ಕಾರುಗಳಲ್ಲಿ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್‌ ಇಲ್ಲದೇ ಇರಲು ಕಾರಣಗಳಿವು

ಸಾಮಾನ್ಯ ಕಾರುಗಳಲ್ಲಿ ಮ್ಯಾನುಯಲ್ ಗೇರ್‌ಬಾಕ್ಸ್‌ಗಳನ್ನು ಕಾಣಬಹುದು. ಇವುಗಳ ಮೂಲಕ ಗೇರ್‌ಗಳನ್ನು ಬದಲಿಸಬಹುದು. ಆದರೆ ಎಲೆಕ್ಟ್ರಿಕ್ ಕಾರುಗಳಲ್ಲಿ ಅಂತಹ ಮಲ್ಟಿ-ಸ್ಪೀಡ್ ಗೇರ್‌ಬಾಕ್ಸ್‌ಗಳ ಅಗತ್ಯವಿಲ್ಲ.

ಎಲೆಕ್ಟ್ರಿಕ್ ಕಾರುಗಳಲ್ಲಿ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್‌ ಇಲ್ಲದೇ ಇರಲು ಕಾರಣಗಳಿವು

ಎಲೆಕ್ಟ್ರಿಕ್ ಕಾರುಗಳಲ್ಲಿ ಗೇರ್‌ಬಾಕ್ಸ್ ಬದಲಿಗೆ ಬೇರೆ ಯಾವ ಸಿಸ್ಟಂ ಇರುತ್ತದೆ. ಆ ಸಿಸ್ಟಂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಸರಳವಾಗಿ ಹೇಳುವುದಾದರೆ ಪೆಟ್ರೋಲ್, ಡೀಸೆಲ್ ಕಾರು ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಪವರ್‌ಟ್ರೇನ್.

ಎಲೆಕ್ಟ್ರಿಕ್ ಕಾರುಗಳಲ್ಲಿ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್‌ ಇಲ್ಲದೇ ಇರಲು ಕಾರಣಗಳಿವು

ಬಹುತೇಕ ಎಲೆಕ್ಟ್ರಿಕ್ ಕಾರುಗಳಿಗೆ ಮಲ್ಟಿ-ಸ್ಪೀಡ್ ಟ್ರಾನ್ಸ್ ಮಿಷನ್ ಅಗತ್ಯವಿಲ್ಲ. ಇದರ ಒಂದೇ ಒಂದು ಸ್ಪೀಡಿನ ಟ್ರಾನ್ಸ್ ಮಿಷನ್ ಅನ್ನು ಎಲೆಕ್ಟ್ರಿಕ್ ಮೋಟರ್ ಕಂಟ್ರೋಲ್ ಮಾಡುತ್ತದೆ. ಮ್ಯಾನುಯಲ್ ಗೇರ್‌ಬಾಕ್ಸ್ ಹೊಂದಿರುವ ಕಾರುಗಳನ್ನು ಚಾಲನೆ ಮಾಡುವವರು ನಿರಂತರವಾಗಿ ಗೇರುಗಳನ್ನು ಬದಲಿಸುತ್ತಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ಕಾರುಗಳಲ್ಲಿ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್‌ ಇಲ್ಲದೇ ಇರಲು ಕಾರಣಗಳಿವು

ಪೆಟ್ರೋಲ್, ಡೀಸೆಲ್ ಕಾರುಗಳ ಎಂಜಿನ್‌ನಲ್ಲಿ ನಿರ್ದಿಷ್ಟ ಆರ್‌ಪಿಎಂ ಶ್ರೇಣಿಯ ನಂತರ ಪವರ್ ಹೆಚ್ಚುತ್ತದೆ. ಇದರಿಂದಾಗಿ ಆ ಆರ್‌ಪಿಎಂ ಶ್ರೇಣಿಯನ್ನು ತಲುಪಿದ ನಂತರ ಗೇರ್ ಬದಲಿಸಬೇಕಾಗುತ್ತದೆ. ಈ ಕಾರಣಕ್ಕೆ ಗೇರ್ ಅನುಪಾತಗಳನ್ನು ಎಚ್ಚರಿಕೆಯಿಂದ ಲೆಕ್ಕಹಾಕಲಾಗುತ್ತದೆ.

ಎಲೆಕ್ಟ್ರಿಕ್ ಕಾರುಗಳಲ್ಲಿ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್‌ ಇಲ್ಲದೇ ಇರಲು ಕಾರಣಗಳಿವು

ಆದರೆ ಎಲೆಕ್ಟ್ರಿಕ್ ಕಾರುಗಳಿಗೆ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್'ನ ಅಗತ್ಯವಿರುವುದಿಲ್ಲ. ಇದಕ್ಕೆ ಕಾರಣ ಎಲೆಕ್ಟ್ರಿಕ್ ಕಾರ್ ಎಂಜಿನ್ ಅಂದರೆ ಎಲೆಕ್ಟ್ರಿಕ್ ಮೋಟರ್. ಪೆಟ್ರೋಲ್, ಡೀಸೆಲ್ ಎಂಜಿನ್ ಕಾರುಗಳಲ್ಲಿ ವಿದ್ಯುತ್ ಉತ್ಪಾದನೆಗೆ ವಿಭಿನ್ನ ಅನುಪಾತಗಳಿಗೆ ತಕ್ಕಂತೆ ಅನೇಕ ಗೇರುಗಳು ಬೇಕಾಗುತ್ತವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲೆಕ್ಟ್ರಿಕ್ ಕಾರುಗಳಲ್ಲಿ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್‌ ಇಲ್ಲದೇ ಇರಲು ಕಾರಣಗಳಿವು

ಆದರೆ ಎಲೆಕ್ಟ್ರಿಕ್ ಮೋಟರ್‌ಗಳು ಯಾವುದೇ ಆರ್‌ಪಿಎಂನಲ್ಲಿ ಒಂದೇ ಪ್ರಮಾಣದ ಟಾರ್ಕ್ ಉತ್ಪಾದಿಸುತ್ತವೆ. ಎಲೆಕ್ಟ್ರಿಕ್ ಮೋಟರ್‌ಗಳು ಪೆಟ್ರೋಲ್, ಡೀಸೆಲ್ ಎಂಜಿನ್'ಗಳಂತೆ ನಿಧಾನವಾಗಿ ಟಾರ್ಕ್ ಉತ್ಪಾದಿಸುವುದಿಲ್ಲ. ಬದಲಿಗೆ ತಕ್ಷಣವೇ ಪವರ್ ಉತ್ಪಾದಿಸುತ್ತವೆ.

ಎಲೆಕ್ಟ್ರಿಕ್ ಕಾರುಗಳಲ್ಲಿ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್‌ ಇಲ್ಲದೇ ಇರಲು ಕಾರಣಗಳಿವು

ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಮೋಟರ್‌ಗಳು ಗರಿಷ್ಠ ದಕ್ಷತೆ ನೀಡುವಂತೆ ಗೇರ್ ಅನುಪಾತಗಳನ್ನು ಎಚ್ಚರಿಕೆಯಿಂದ ಮಾಪನಾಂಕ ಮಾಡುತ್ತವೆ. ಇದರಿಂದ ಎಲೆಕ್ಟ್ರಿಕ್ ಕಾರುಗಳಲ್ಲಿ ಗೇರ್ ಬದಲಾವಣೆಯ ಅಗತ್ಯವಿರುವುದಿಲ್ಲ. ಹೆಚ್ಚಿನ ಎಲೆಕ್ಟ್ರಿಕ್ ಮೋಟರ್‌ಗಳು 10,000 ಆರ್‌ಪಿಎಂನಲ್ಲಿ ಸರಾಗವಾಗಿ ಚಲಿಸುತ್ತವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲೆಕ್ಟ್ರಿಕ್ ಕಾರುಗಳಲ್ಲಿ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್‌ ಇಲ್ಲದೇ ಇರಲು ಕಾರಣಗಳಿವು

ಎಲೆಕ್ಟ್ರಿಕ್ ಮೋಟರ್‌ಗಳು ಒಂದೇ ರೀತಿಯ ಟಾರ್ಕ್ ಅನ್ನು ಹೆಚ್ಚಿನ ಆರ್‌ಪಿಎಂ ವ್ಯಾಪ್ತಿಯಲ್ಲಿ ಸುಲಭವಾಗಿ ಒದಗಿಸುತ್ತವೆ. ಪೆಟ್ರೋಲ್, ಡೀಸೆಲ್ ಎಂಜಿನ್'ಗಳು 6000 ಆರ್‌ಪಿಎಂ ಮುಟ್ಟಿದ ನಂತರ ರೆಡ್‌ಲೈನ್ ಮುಟ್ಟುತ್ತವೆ. ಮಲ್ಟಿ ಸ್ಪೀಡ್ ಟ್ರಾನ್ಸ್ ಮಿಷನ್ ಹೆಚ್ಚು ದಕ್ಷತೆಯನ್ನು ಉತ್ಪಾದಿಸುತ್ತದೆ.

ಎಲೆಕ್ಟ್ರಿಕ್ ಕಾರುಗಳಲ್ಲಿ ಮಲ್ಟಿ ಸ್ಪೀಡ್ ಗೇರ್‌ಬಾಕ್ಸ್‌ ಇಲ್ಲದೇ ಇರಲು ಕಾರಣಗಳಿವು

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಜನರು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳಲ್ಲಿರುವ ಗೇರ್‌ಬಾಕ್ಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Reasons for electric cars not having multi speed gearbox. Read in Kannada.
Story first published: Saturday, March 6, 2021, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X