ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ರೆನಾಲ್ಟ್ ಇಂಡಿಯಾ(Renault India) ಕಂಪನಿಯು ಕೋವಿಡ್ ಸಂಕಷ್ಟದ ನಡುವೆಯೂ ಹೊಸ ಕಾರು ಮಾರಾಟದಲ್ಲಿ ಹಲವು ತಿಂಗಳಿನಿಂದ ಉತ್ತಮ ಬೇಡಿಕೆ ಕಾಯ್ದುಕೊಳ್ಳುತ್ತಿದ್ದು, ಮುಂಬರುವ ಹಬ್ಬದ ಋುತುಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಕೋವಿಡ್ ಪರಿಣಾಮದಿಂದಾಗ ಆರ್ಥಿಕ ಸಂಕಷ್ಟದ ನಡುವೆಯೂ ವಿವಿಧ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, 2ನೇ ಅಲೆ ಪರಿಣಾಮ ಕಳೆದ ಮೇ ಮತ್ತು ಜೂನ್ ಅವಧಿಯಲ್ಲಿ ತುಸು ಹಿನ್ನಡೆ ಅನುಭವಿಸಿದರೂ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟವು ಮತ್ತೆ ಹೆಚ್ಚಳವಾಗಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಹೊಸ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್‌ ಘೋಷಣೆ ಮಾಡುತ್ತಿದ್ದು, ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್ ನೀಡುತ್ತಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ರೆನಾಲ್ಟ್ ಕಂಪನಿಯು ಕ್ವಿಡ್(Kwid) ಹ್ಯಾಚ್‌‌ಬ್ಯಾಕ್, ಟ್ರೈಬರ್(Triber) ಮಿನಿ ಎಂಪಿವಿ, ಡಸ್ಟರ್(Duster) ಎಸ್‌ಯುವಿ ಮತ್ತು ಕಿಗರ್(Kiger) ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಈ ತಿಂಗಳಾಂತ್ಯದ ತನಕ ರೆನಾಲ್ಟ್ ಕಾರುಗಳ ಖರೀದಿ ಮೇಲೂ ಗ್ರಾಹಕರು ಆಕರ್ಷಕ ಆಫರ್ ಪಡೆದುಕೊಳ್ಳಬಹುದಾಗಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಹೊಸ ಆಫರ್‌ಗಳಲ್ಲಿ ಕಿಗರ್ ಕಾರಿನ ಮೇಲೆ ಕನಿಷ್ಠ ಮತ್ತು ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಲಾಗಿದ್ದು, ಆಯ್ದು ಕಾರು ಖರೀದಿ ಮೇಲೆ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ಲೊಯಾಲಿಟಿ ಆಫರ್ ಕೂಡಾ ಪ್ರಮುಖ ಆಕರ್ಷಕವಾಗಲಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಗ್ರಾಹಕರಿಗೆ ರೆನಾಲ್ಟ್ ಕಂಪನಿಯ ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿ ಮೇಲೆ ರೂ.40 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಡಸ್ಟರ್ ಎಸ್‌ಯುವಿ ಕಾರಿನ ಮೇಲೆ ರೂ.1.30 ಲಕ್ಷದ ತನಕ ಆಫರ್ ಪಡೆಯಬಹುದಾಗಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲಿನ ರೂ. 40 ಸಾವಿರ ಮೌಲ್ಯದ ಆಫರ್‌ಗಳಲ್ಲಿ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ.65 ಸಾವಿರ ಮೌಲ್ಯದ ಲೊಯಾಲಿಟಿ ಆಫರ್ ನೀಡುತ್ತಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಕ್ವಿಡ್ ಕಾರಿನ ಮೇಲೆ ಕಂಪನಿಯು ಆಯ್ದ ರಾಜ್ಯಗಳಲ್ಲಿ ಸಾಮಾನ್ಯ ಆಫರ್‌ಗಳಿಂತಲೂ ಕೆಲವು ಹೆಚ್ಚಿನ ಕೊಡುಗೆಗಳನ್ನು ಕೂಡಾ ಪ್ರಕಟಿಸಿದ್ದು, ಹೊಸ ಕಾರು ಖರೀದಿಗೆ ಸಹಕಾರಿಯಾಗುವಂತೆ 'ಬೈ ನೌವ್ ಪೇ ಇನ್ 2022' ಆಯ್ಕೆಯನ್ನು ಸಹ ನೀಡುತ್ತಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಇನ್ನು ಬಜೆಟ್ ಬೆಲೆಯಲ್ಲಿ ಸದ್ದು ಮಾಡುತ್ತಿರುವ ಟ್ರೈಬರ್ ಕಾರಿನ ಖರೀದಿಯ ಮೇಲೂ ಕೂಡಾ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಗರಿಷ್ಠ ರೂ.60 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ.75 ಸಾವಿರದಷ್ಟು ಲೊಯಾಲಿಟಿ ಬೋನಸ್‌ ನೀಡುತ್ತಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ರೆನಾಲ್ಟ್ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಲಾದ ಕಿಗರ್ ಕಾರು ಖರೀದಿಯ ಮೇಲೂ ವಿವಿಧ ಆಫರ್‌ಗಳನ್ನು ಘೋಷಿಸಿದ್ದು, ಅಗಸ್ಟ್ ಅವಧಿಯಲ್ಲಿ ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ರೂ.10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್‌ನೊಂದಿಗೆ ರೂ.95 ಸಾವಿರ ಮೌಲ್ಯದ ಲೊಯಾಲಿಟಿ ಆಫರ್ ನೀಡುತ್ತಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಇನ್ನುಳಿದಂತೆ ಡಸ್ಟರ್ ಕಾರಿನ ಪ್ರಮುಖ ವೆರಿಯೆಂಟ್‌ಗಳ ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ರೂ. 1.30 ಲಕ್ಷ ಮೌಲ್ಯದ ಡಿಸ್ಕೌಂಟ್‌ ಮತ್ತು ರೂ.1.10 ಲಕ್ಷ ಮೌಲ್ಯದ ಲೊಯಾಲಿಟಿ ಕೊಡುಗೆಗಗಳನ್ನು ಘೋಷಣೆ ಮಾಡಿದ್ದು, ಡಸ್ಟರ್ ಕಾರಿನ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಡಿಸ್ಕೌಂಟ್ ಲಭ್ಯವಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಇದರ ಜೊತೆಗೆ ರೆನಾಲ್ಟ್ ಕಂಪನಿಯು ಆರ್ಥಿಕ ಸಂಕಷ್ಟದಿಂದ ಕಾರು ಖರೀದಿಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಅತ್ಯುತ್ತಮ ಫೈನಾನ್ಸ್ ಅಸಿಸ್ಟ್ ಸೌಲಭ್ಯವನ್ನು ನೀಡುತ್ತಿದ್ದು, ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಅತ್ಯತ್ತಮ ಫೈನಾನ್ಸ್ ಆಯ್ಕೆ ನೀಡಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ಸದ್ಯದ ಆರ್ಥಿಕ ಪರಿಸ್ಥಿತಿ ಕಾರು ಖರೀದಿ ಮುಂದಿನ ವರ್ಷಕ್ಕೆ ಮುಂದೂಡಿರುವ ಗ್ರಾಹಕರಿಗೆ ವಿಶೇಷ ಆಫರ್ ನೀಡಿರುವ ರೆನಾಲ್ಟ್ ಕಂಪನಿಯು ಕ್ವಿಡ್, ಟ್ರೈಬರ್ ಮತ್ತು ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಇಎಂಐ ಮರುಪಾವತಿ ಆಯ್ಕೆ ನೀಡಿದೆ.

ದಸರಾ ಸಂಭ್ರಮಕ್ಕಾಗಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

ರೆನಾಲ್ಟ್ ಕಂಪನಿಯ ಹೊಸ ಫೈನಾನ್ಸ್ ಅಸಿಸ್ಟ್ ಯೋಜನೆಯಡಿ ಕಾರು ಖರೀದಿಸುವ ಗ್ರಾಹಕರು ಈಗ ಕಾರು ಖರೀದಿ ಮಾಡಿ ಮತ್ತು 2022ರಿಂದ ಇಎಂಐ ಪಾವತಿಸಲು ಅವಕಾಶ ನೀಡಲಾಗಿದ್ದು, ಆರ್ಥಿಕ ಸಂಕಷ್ಟ ಎದುರಾಗಬಹುದಾದ ಕಾರಣಕ್ಕೆ ಕಾರು ಖರೀದಿ ಮುಂದೂಡಿರುವ ಗ್ರಾಹಕರಿಗೆ ಇದು ಸಹಕಾರಿಯಾಗಿದೆ.

Article Published On: Wednesday, October 6, 2021, 20:36 [IST]
English summary
Renault cars discounts and savings offers in october details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+