ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ರೆನಾಲ್ಟ್ ಇಂಡಿಯಾ(Renault India) ಕಂಪನಿಯು ಕೋವಿಡ್ ಸಂಕಷ್ಟದ ನಡುವೆಯೂ ಹೊಸ ಕಾರು ಮಾರಾಟದಲ್ಲಿ ಹಲವು ತಿಂಗಳಿನಿಂದ ಉತ್ತಮ ಬೇಡಿಕೆ ಕಾಯ್ದುಕೊಳ್ಳುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಹೊಸ ಟ್ರೈಬರ್ ಮಾರಾಟದಲ್ಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಕೋವಿಡ್ ಸಂಕಷ್ಟದ ನಡುವೆಯೂ ವಿವಿಧ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕೋವಿಡ್ 2ನೇ ಅಲೆ ಪರಿಣಾಮ ಮೇ ಮತ್ತು ಜೂನ್ ಅವಧಿಯಲ್ಲಿ ತುಸು ಹಿನ್ನಡೆ ಅನುಭವಿಸಿದರೂ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಮಾರಾಟ ಮತ್ತೆ ಹೆಚ್ಚಳವಾಗುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಹೊಸ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್‌ ಘೋಷಣೆ ಮಾಡುತ್ತಿದ್ದು, ರೆನಾಲ್ಟ್ ಕಂಪನಿಯು ಕೂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್ ನೀಡುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ರೆನಾಲ್ಟ್ ಕಂಪನಿಯು ಕ್ವಿಡ್(Kwid), ಟ್ರೈಬರ್(Triber), ಡಸ್ಟರ್(Duster) ಮತ್ತು ಕಿಗರ್(Kiger) ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಈ ತಿಂಗಳಾಂತ್ಯದ ತನಕ ರೆನಾಲ್ಟ್ ಕಾರುಗಳ ಖರೀದಿ ಮೇಲೂ ಗ್ರಾಹಕರು ಆಕರ್ಷಕ ಆಫರ್ ಪಡೆದುಕೊಳ್ಳಬಹುದಾಗಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಹೊಸ ಆಫರ್‌ಗಳಲ್ಲಿ ಕಿಗರ್ ಕಾರಿನ ಮೇಲೆ ಕನಿಷ್ಠ ಮತ್ತು ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಲಾಗಿದ್ದು, ಕಾರು ಖರೀದಿಯಲ್ಲಿರುವ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ಇಎಂಐ ಮರುಪಾವತಿ ಆಯ್ಕೆಯು ಕೂಡಾ ಪ್ರಮುಖ ಆಕರ್ಷಕವಾಗಲಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಗ್ರಾಹಕರು ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿ ಮೇಲೆ ರೂ.40 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಡಸ್ಟರ್ ಎಸ್‌ಯುವಿ ಕಾರಿನ ಮೇಲೆ ರೂ.80 ಸಾವಿರ ತನಕ ಆಫರ್ ಪಡೆಯಬಹುದಾಗಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲಿನ ರೂ. 40 ಸಾವಿರ ಮೌಲ್ಯದ ಆಫರ್‌ಗಳಲ್ಲಿ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.10 ಸಾವಿರ ಎಕ್ಸ್‌ಚೆಂಜ್ ಬೋನಸ್, ರೂ.10 ಸಾವಿರ ಲೊಯಾಲಿಟಿ, ರೂ. 10 ಸಾವಿರ ತನಕ ಗ್ರಾಮೀಣ ಗ್ರಾಮದ ಗ್ರಾಹಕರಿಗೆ ಸ್ಪೆಷಲ್ ಡಿಸ್ಕೌಂಟ್ ಮತ್ತು ರೂ.5 ಸಾವಿರ ಮೌಲ್ಯದ ಫ್ರೀಡಂ ಕೊಡುಗೆಗಳನ್ನು ಪಡೆಯಬಹುದು.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಕ್ವಿಡ್ ಕಾರಿನ ಮೇಲೆ ಕಂಪನಿಯು ಆಯ್ದ ರಾಜ್ಯಗಳಲ್ಲಿ ಸಾಮಾನ್ಯ ಆಫರ್‌ಗಳಿಂತಲೂ ಹೆಚ್ಚಿನ ಕೊಡುಗೆಗಳನ್ನು ಪ್ರಕಟಿಸಿದ್ದು, ಹೊಸ ಕಾರು ಖರೀದಿಗೆ ಸಹಕಾರಿಯಾಗುವಂತೆ 'ಬೈ ನೌವ್ ಪೇ ಇನ್ 2022' ಆಯ್ಕೆ ನೀಡುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಬಜೆಟ್ ಬೆಲೆಯಲ್ಲಿ ಸದ್ದು ಮಾಡುತ್ತಿರುವ ಟ್ರೈಬರ್ ಕಾರಿನ ಖರೀದಿಯ ಮೇಲೂ ಕೂಡಾ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಗರಿಷ್ಠ ರೂ.60 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಕ್ಯಾಶ್ ಡಿಸ್ಕೌಂಟ್, ಲೊಯಾಲಿಟಿ ಬೋನಸ್‌ ಮತ್ತು ಫ್ರೀಡಂ ಕೊಡುಗೆಗಳನ್ನು ನೀಡುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ರೆನಾಲ್ಟ್ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಲಾದ ಕಿಗರ್ ಕಾರು ಖರೀದಿಯ ಮೇಲೂ ವಿವಿಧ ಆಫರ್‌ಗಳನ್ನು ಘೋಷಿಸಿದ್ದು, ಅಗಸ್ಟ್ ಅವಧಿಯಲ್ಲಿ ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ರೂ.10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್‌ನೊಂದಿಗೆ ರೂ.80 ಸಾವಿರ ಮೌಲ್ಯ ಲೊಯಾಲಿಟಿ ಆಫರ್ ನೀಡುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಡಸ್ಟರ್ ಕಾರು ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ರೂ. 80 ಸಾವಿರ ಮೌಲ್ಯದ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಕಾರಿನ ಟರ್ಬೊ ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಡಿಸ್ಕೌಂಟ್ ಲಭ್ಯವಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಜೊತೆಗೆ ಹೊಸ ಡಸ್ಟರ್ ಕಾರು ಖರೀದಿಸುವ ರೂ. 1.10 ಲಕ್ಷ ಮೌಲ್ಯದ ಲೊಯಾಲಿಟಿ ಕೊಡುಗೆಗಳನ್ನು ನೀಡುತ್ತಿದ್ದು, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ ರಾಜ್ಯದಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಸುಮಾರು ರೂ. 2.15 ಲಕ್ಷ ತನಕ ಆಫರ್ ನೀಡುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಡಸ್ಟರ್ ಕಾರು ಖರೀದಿಸುವ ಗ್ರಾಹಕರಿಗೆ ರೂ. 1.05 ಲಕ್ಷ ಮೌಲ್ಯದ ವಿವಿಧ ಆಫರ್‌ಗಳು ಮತ್ತು ರೂ. 1.10 ಲಕ್ಷ ಮೌಲ್ಯದ ಲೊಯಾಲಿಟಿ ಆಫರ್ ನೀಡುತ್ತಿದೆ.

ಸೆಪ್ಟೆಂಬರ್ ಅವಧಿಯಲ್ಲಿ Renault ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಇದರ ಜೊತೆಗೆ ರೆನಾಲ್ಟ್ ಕಂಪನಿಯು ಆರ್ಥಿಕ ಸಂಕಷ್ಟದಿಂದ ಕಾರು ಖರೀದಿಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಅತ್ಯುತ್ತಮ ಫೈನಾನ್ಸ್ ಅಸಿಸ್ಟ್ ಆರಂಭಿಸಿದ್ದು, ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರಿನ ಖರೀದಿಯ ಯೋಜನೆಯಿದ್ದಲ್ಲಿ ಮುಂದೂಡದೆ ಖರೀದಿ ಮಾಡಿ ಮತ್ತು 2022ರಿಂದ ಇಎಂಐ ಪಾವತಿಸಿ ಎನ್ನುವ ಆಫರ್ ನೀಡುತ್ತಿದೆ.

Article Published On: Wednesday, September 8, 2021, 13:32 [IST]
English summary
Renault cars discounts and savings offers in september details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+