ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಕೋವಿಡ್ 19 ಪರಿಣಾಮ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟವು ಇದೀಗ ಚೇತರಿಸಿಕೊಳ್ಳುತ್ತಿದ್ದು, ಸ್ವಂತ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಕೂಡಾ ಜೋರಾಗುತ್ತಿದೆ.

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಕರೋನಾ ವೈರಸ್ ಪರಿಣಾಮ ಸ್ವಂತ ವಾಹನ ಬಳಕೆಯು ಹೆಚ್ಚುತ್ತಿರುವುದು ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಉತ್ಪಾದನಾ ಕಂಪನಿಗಳು ಬಜೆಟ್ ಬೆಲೆಯ ಕಾರು ಮಾದರಿಯೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿವೆ. ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ಹೊಸ ಕಾರುಗಳ ಮಾರಾಟದಲ್ಲಿ ಸಾಕಷ್ಟು ಮುನ್ನಡೆ ಸಾಧಿಸುತ್ತಿದ್ದು, ಕಿಗರ್ ಕಾರು ಮಾದರಿಯ ಬಿಡುಗಡೆಯ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಹೊಸ ಕಾರಿನ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ರೆನಾಲ್ಟ್ ಕಂಪನಿಯು ಸಹ ಹೆಚ್ಚಿನ ಮಟ್ಟದ ಗ್ರಾಹಕರನ್ನು ತಲುಪಲು ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದ್ದು, ಇಂದು ತೆಲಂಗಾಣದ ವಿವಿಧ ಕಡೆಗಳಲ್ಲಿ ಪಿಪಿಎಸ್ ಮೋಟಾರ್ಸ್ ಕಾರು ಮಾರಾಟ ಸಂಸ್ಥೆಯ ಜೊತೆಗೂಡಿ ಐದು ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದಿದೆ.

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಹೊಸ ಕಾರು ಉತ್ಪನ್ನದ ಮೂಲಕ ಗರಿಷ್ಠ ಪ್ರಮಾಣದ ಕಾರು ಮಾರಾಟ ಗುರಿಹೊಂದಿರುವ ರೆನಾಲ್ಟ್ ಕಂಪನಿಯು ಕಳೆದ 6 ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಹೊಸ ಡೀಲರ್ಸ್‌ಗಳಿಗೆ ಚಾಲನೆ ನೀಡಿದ್ದು, ಕಾರು ಮಾರಾಟದ ನಂತರದ ಗ್ರಾಹಕರ ಸೇವೆಗಳನ್ನು ಸಮರ್ಥವಾಗಿ ಪೂರೈಸಲು ಅನುಕೂಲವಾಗುವಂತೆ ಹೊಸ ಮಾರಾಟ ಮಳಿಗೆಗಳನ್ನು ಅಭಿವೃದ್ದಿಗೊಳಿಸಿ ಮಾರಾಟಕ್ಕೆ ಚಾಲನೆ ನೀಡಲಾಗುತ್ತಿದೆ.

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಕೈಗೆಟುಕುವ ಬೆಲೆಗಳಲ್ಲಿ ವಿವಿಧ ಕಾರು ಮಾದರಿಗಳ ಮಾರಾಟವನ್ನು ಹೊಂದಿದ್ದರೂ ಕೂಡಾ ಪ್ರತಿಸ್ಪರ್ಧಿ ಕಾರು ಮಾದರಿಗಳ ಅಬ್ಬರದ ಮುಂದೆ ನೆಲೆ ಕಾಣಲು ಯತ್ನಿಸುತ್ತಿದ್ದ ರೆನಾಲ್ಟ್ ಕಂಪನಿಗೆ ಕಳೆದ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾದ ಟ್ರೈಬರ್ ಮೂಲಕ ಮರುಜೀವ ಪಡೆದಿದೆ ಎಂದರೆ ತಪ್ಪಾಗುವುದಿಲ್ಲ. ರೆನಾಲ್ಟ್ ಕಂಪನಿಯ ಕಾರು ಮಾರಾಟದಲ್ಲಿ ಟ್ರೈಬರ್ ಬಿಡುಗಡೆಗೂ ಮುನ್ನ ಡಸ್ಟರ್ ಎಸ್‌ಯುವಿ ಹೊರತುಪಡಿಸಿ ಕ್ವಿಡ್ ಕಾರು ಮಾದರಿಯು ಹೆಚ್ಚಿನ ಮಟ್ಟದ ಬೇಡಿಕೆಯನ್ನು ಪಡೆದುಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿತ್ತು.

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಆದರೆ ಟ್ರೈಬರ್ ಮಿನಿ ಎಂಪಿವಿ ನಂತರ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿರುವ ರೆನಾಲ್ಟ್ ಕಂಪನಿಗೆ ಇದೀಗ ಮತ್ತೊಂದು ಬಲ ಎಂದರೆ ಅದು ಬಿಡುಗಡೆಯಾಗಿರುವ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ.

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಹೌದು, ಕಿಗರ್ ಕಾರು ಮಾದರಿಯು ರೆನಾಲ್ಟ್ ಕಾರು ಮಾರಾಟದ ದಿಕ್ಕನ್ನೇ ಬದಲಿಸುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಮಾರಾಟವನ್ನು ಹೆಚ್ಚಿಸುವ ಸಂಬಂಧ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿರುವ ರೆನಾಲ್ಟ್ ಕಂಪನಿಯು ಮಾಹಾನಗರಗಳಲ್ಲಿ ಮಾತ್ರವಲ್ಲ ಟೈರ್ 2, ಟೈರ್ 3 ಮತ್ತು ಟೈರ್ 4 ನಗರಗಳಲ್ಲೂ ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ.

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ರೆನಾಲ್ಟ್ ಕಂಪನಿಯು ಕಿಗರ್ ಕಾರು ಮಾದರಿಯನ್ನು ಹಲವಾರು ಹೊಸ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಗೊಳಿಸಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಕಿಗರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರಿನ ಆರಂಭಿಕ ಬೆಲೆಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲೇ ಅತಿ ಕಡಿಮೆ ಬೆಲೆಯ ಕಾರು ಮಾದರಿಯಾಗಿದೆ.

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 9.55 ಲಕ್ಷ ಬೆಲೆ ಹೊಂದಿದ್ದು, ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ರೆನಾಲ್ಟ್ ಕಂಪನಿಯು ತನ್ನ ಜಂಟಿ ಕಾರು ಕಂಪನಿಯಾದ ನಿಸ್ಸಾನ್ ಜೊತೆಗೂಡಿ ಅಭಿವೃದ್ದಿಗೊಳಿಸಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಕಾರುಗಳಿಗೆ ಬೇಡಿಕೆ- ಒಂದೇ ರಾಜ್ಯದಲ್ಲಿ ಐದು ಹೊಸ ಶೋರೂಂ ತೆರೆದ ರೆನಾಲ್ಟ್

ರೆನಾಲ್ಟ್ ಕಂಪನಿಯು ಹೊಸ ಕಿಗರ್ ಕಾರಿನಲ್ಲಿ ನಿಸ್ಸಾನ್ ಮಾಗ್ನೈಟ್‌ನಲ್ಲಿ ಜೋಡಣೆ ಮಾಡಲಾಗಿರುವ 1.0-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪರೆಟೆಡ್ ಮತ್ತು 1.0-ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ.

Most Read Articles

Kannada
English summary
Renault Dealer PPS Opens 5 New Showrooms In Telangana State. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X