ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಹೊಸ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹೆಚ್ಚಿನ ಮಟ್ಟದ ಆಫರ್‌ಗಳನ್ನು ಮುಂದುವರಿಸಿದ್ದು, ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ತನ್ನ ವಿವಿಧ ಕಾರು ಮಾದರಿಗಳ ಮೇಲೆ ಏಪ್ರಿಲ್ ಅವಧಿಗಾಗಿ ಭರ್ಜರಿ ಆಫರ್ ನೀಡುತ್ತಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಕೋವಿಡ್ ಭೀತಿ ನಡುವೆಯೂ ಹೊಸ ವಾಹನಗಳಿಗೆ ನೀರಿಕ್ಷೆಗೂ ಮೀರಿ ಬೇಡಿಕೆ ಹರಿದುಬರುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳಿನಿಂದ ಹೊಸ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ರೆನಾಲ್ಟ್ ಕಂಪನಿಯು ಕೂಡಾ ಕಳೆದ ಕೆಲ ತಿಂಗಳಿನಿಂದ ಕಾರು ಮಾರಾಟದಲ್ಲಿ ಭಾರೀ ಪ್ರಮಾಣದ ಬೆಳವಣಿಗೆ ಸಾಧಿಸುತ್ತಿದ್ದು, ಯುಗಾದಿ ಸಂಭ್ರಮಕ್ಕಾಗಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ರೆನಾಲ್ಟ್ ಕಂಪನಿಯು ಪ್ರಮುಖ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿವೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ರೆನಾಲ್ಟ್ ಇಂಡಿಯಾ ಕೂಡಾ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಹೊಸ ಆಫರ್‌ಗಳಲ್ಲಿ ಕ್ವಿಡ್ ಮೇಲೆ ಕನಿಷ್ಠ ಮತ್ತು ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ಒದಗಿಸಿದ್ದು, ಕಾರು ಖರೀದಿಯಲ್ಲಿರುವ ಗ್ರಾಹಕರಿಗೆ ಆಕರ್ಷಕ ಬಡ್ಡಿದರವು ಪ್ರಮುಖ ಆಕರ್ಷಣೆಯಾಗಲಿದೆ. ಗ್ರಾಹಕರು ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿ ಮೇಲೆ ರೂ.50 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಡಸ್ಟರ್ ಎಸ್‌ಯುವಿ ಕಾರಿನ ಮೇಲೆ ರೂ. 75 ಸಾವಿರ ತನಕ ಆಫರ್ ಪಡೆಯಬಹುದಾಗಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲಿನ ರೂ. 50 ಸಾವಿರ ಮೌಲ್ಯದ ಆಫರ್‌ಗಳಲ್ಲಿ ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.10 ಸಾವಿರ ಲೊಯಾಲಿಟಿ ಆಫರ್ ನೀಡಲಾಗುತ್ತಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಇದಲ್ಲದೆ ಕ್ವಿಡ್ ಕಾರು ಖರೀದಿಯ ಮೇಲೆ ರೂ. 9 ಸಾವಿರದಷ್ಟು ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ರೂ. 5 ಸಾವಿರದಷ್ಟು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಹೆಚ್ಚುವರಿಯಾಗಿ ಆಫರ್ ನೀಡಲಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ಆಕರ್ಷಕ ಬಡ್ಡಿದರದಲ್ಲಿ ಗರಿಷ್ಠ ಸಾಲ ಸೌಲಭ್ಯಗಳನ್ನು ಸಹ ಪಡೆದುಕೊಳ್ಳಬಹುದು.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಬಜೆಟ್ ಬೆಲೆಯಲ್ಲಿ ಸದ್ದು ಮಾಡುತ್ತಿರುವ ಟ್ರೈಬರ್ ಕಾರಿನ ಖರೀದಿ ಮೇಲೂ ಕೂಡಾ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಗರಿಷ್ಠ ರೂ.55 ಸಾವಿರದಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಇದರಲ್ಲಿ ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್, ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ.10 ಸಾವಿರದಷ್ಟು ಲೊಯಾಲಿಟಿ ಬೋನಸ್‌ನೊಂದಿಗೆ ರೂ.5 ಸಾವಿರ ಪಂಚಾಯ್ತಿ ಸದಸ್ಯರಿಗಾಗಿ ಹೆಚ್ಚುವರಿ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಇನ್ನುಳಿದ ರೂ. 9 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಆಗಿ ಪಡೆಯಬಹುದುಗಾಗಿದ್ದು, ಹೊಸ ಕಾರನ್ನು ಖರೀದಿಸಲು ಶೇ. 5.99 ಬಡ್ಡಿದರದಲ್ಲಿ ಗರಿಷ್ಠ ರೂ.3.89 ಲಕ್ಷದ ತನಕ ಸಾಲ ಪಡೆದುಕೊಳ್ಳಬಹುದಾಗಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಡಸ್ಟರ್ ಕಾರು ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ರೂ. 75 ಸಾವಿರ ಮೌಲ್ಯದ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಕಾರಿನ ಟರ್ಬೊ ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಡಿಸ್ಕೌಂಟ್ ಲಭ್ಯವಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಏಪ್ರಿಲ್ ತಿಂಗಳ ಆಫರ್ ಘೋಷಣೆ

ಹೊಸ ಆಫರ್‌ನಲ್ಲಿ ರೂ.30 ಸಾವಿರ ಎಕ್ಸ್‌ಚೆಂಜ್ ಆಫರ್, ರೂ.30 ಸಾವಿರ ಲೊಯಾಲಿಟಿ ಆಫರ್‌ ಮತ್ತು ಟರ್ಬೋ ಮಾದರಿಯ ಮೇಲೆ ಹೆಚ್ಚುವರಿಯಾಗಿ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್ ಪಡೆಯಬಹುದಾಗಿದ್ದು, ಕ್ವಿಡ್, ಟ್ರೈಬರ್ ಮತ್ತು ಡಸ್ಟರ್ ಹೊರತುಪಡಿಸಿ ಕಿಗರ್ ಕಾರಿನ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲ.

Most Read Articles

Kannada
English summary
Renault Car Discount April 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X