ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ರೆನಾಲ್ಟ್ ಇಂಡಿಯಾ ಕಂಪನಿಯು ಹೊಸ ಕಾರು ಮಾರಾಟದಲ್ಲಿ ಹಲವು ತಿಂಗಳಿನಿಂದ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಇತ್ತೀಚೆಗೆ ಬಿಡುಗಡೆಯಾಗಲಿರುವ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಹೊಸ ಟ್ರೈಬರ್ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ಕೋವಿಡ್ ಪರಿಣಾಮ ಕಳೆದ ವರ್ಷ ಕನಿಷ್ಠ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ಕಾರು ಕಂಪನಿಗಳಿಗೆ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿದ್ದು, ಇದೀಗ ಕೋವಿಡ್ 2ನೇ ಅಲೆ ಪರಿಣಾಮ ಮತ್ತೆ ಸಂಕಷ್ಟ ಎದುರಾಗಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಖರೀದಿದಾರರು ಹೊಸ ಯೋಜನೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳಿಗೆ ಭಾರೀ ನಷ್ಟ ಭೀತಿ ಎದುರಾಗಿದ್ದು, ಹೊಸ ವಾಹನ ಖರೀದಿಯನ್ನು ಉತ್ತೇಜಿಸಲು ಹೊಸ ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿವೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ರೆನಾಲ್ಟ್ ಕಂಪನಿಯು ಪ್ರಮುಖ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿವೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ರೆನಾಲ್ಟ್ ಇಂಡಿಯಾ ಕೂಡಾ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ಹೊಸ ಆಫರ್‌ಗಳಲ್ಲಿ ಕ್ವಿಡ್ ಮೇಲೆ ಕನಿಷ್ಠ ಮತ್ತು ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ಒದಗಿಸಿದ್ದು, ಕಾರು ಖರೀದಿಯಲ್ಲಿರುವ ಗ್ರಾಹಕರಿಗೆ ಆಕರ್ಷಕ ಬಡ್ಡಿದರವು ಪ್ರಮುಖ ಆಕರ್ಷಣೆಯಾಗಲಿದೆ. ಗ್ರಾಹಕರು ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿ ಮೇಲೆ ರೂ.52 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಡಸ್ಟರ್ ಎಸ್‌ಯುವಿ ಕಾರಿನ ಮೇಲೆ ರೂ.35 ಸಾವಿರ ತನಕ ಆಫರ್ ಪಡೆಯಬಹುದಾಗಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲಿನ ರೂ. 52 ಸಾವಿರ ಮೌಲ್ಯದ ಆಫರ್‌ಗಳಲ್ಲಿ ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್, ರೂ.10 ಸಾವಿರ ಲೊಯಾಲಿಟಿ ಆಫರ್ ಮತ್ತು ಆನ್‌ಲೈನ್ ಬುಕ್ಕಿಂಗ್ ಮೇಲೆ ರೂ.2 ಸಾವಿರ್ ಡಿಸ್ಕೌಂಟ್ ನೀಡಲಾಗುತ್ತಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ಬಜೆಟ್ ಬೆಲೆಯಲ್ಲಿ ಸದ್ದು ಮಾಡುತ್ತಿರುವ ಟ್ರೈಬರ್ ಕಾರಿನ ಖರೀದಿ ಮೇಲೂ ಕೂಡಾ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಗರಿಷ್ಠ ರೂ.55 ಸಾವಿರದಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಇದರಲ್ಲಿ ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್, ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ.10 ಸಾವಿರದಷ್ಟು ಲೊಯಾಲಿಟಿ ಬೋನಸ್‌ನೊಂದಿಗೆ ರೂ.5 ಸಾವಿರ ಪಂಚಾಯ್ತಿ ಸದಸ್ಯರಿಗಾಗಿ ಹೆಚ್ಚುವರಿ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ಇನ್ನುಳಿದ ರೂ. 9 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಆಗಿ ಪಡೆಯಬಹುದುಗಾಗಿದ್ದು, ಹೊಸ ಕಾರನ್ನು ಖರೀದಿಸಲು ಶೇ. 5.99 ಬಡ್ಡಿದರದಲ್ಲಿ ಗರಿಷ್ಠ ರೂ.3.89 ಲಕ್ಷದ ತನಕ ಸಾಲ ಪಡೆದುಕೊಳ್ಳಬಹುದಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ರೆನಾಲ್ಟ್ ಕಂಪನಿಯು ಈ ಬಾರಿ ಕಿಗರ್ ಕಾರು ಖರೀದಿಯ ಮೇಲೂ ಇದೀಗ ಮೊದಲ ಬಾರಿಗೆ ಹೊಸ ಆಫರ್ ಘೋಷಿಸಿದ್ದು, ಮೇ ಅವಧಿಯಲ್ಲಿ ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ರೆನಾಲ್ಟ್ ಕಂಪನಿಯು 5 ವರ್ಷಗಳ ಹೆಚ್ಚುವರಿ ವಾರಂಟಿ ಅಥವಾ 1 ಲಕ್ಷ ಕಿ.ಮೀ ಮೇಲೆ ವಾರಂಟಿ ನೀಡುತ್ತಿದೆ.

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ಇನ್ನು ಡಸ್ಟರ್ ಕಾರು ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ರೂ. 75 ಸಾವಿರ ಮೌಲ್ಯದ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಕಾರಿನ ಟರ್ಬೊ ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಡಿಸ್ಕೌಂಟ್ ಲಭ್ಯವಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ಮೇ ತಿಂಗಳ ಆಫರ್ ಘೋಷಣೆ

ಹೊಸ ಆಫರ್‌ನಲ್ಲಿ ರೂ.30 ಸಾವಿರ ಎಕ್ಸ್‌ಚೆಂಜ್ ಆಫರ್, ರೂ.30 ಸಾವಿರ ಲೊಯಾಲಿಟಿ ಆಫರ್‌ ಮತ್ತು ಟರ್ಬೋ ಮಾದರಿಯ ಮೇಲೆ ಹೆಚ್ಚುವರಿಯಾಗಿ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್ ಪಡೆಯಬಹುದಾಗಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

More from DriveSpark

Article Published On: Wednesday, May 5, 2021, 17:46 [IST]
English summary
Renault Announced Discounts And Offers For Duster, Kwid, Triber And Kiger In May 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+