ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗೆ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಇಂಡಿಯಾ(Renault India) ಕಂಪನಿಯು ಕೋವಿಡ್ ಪರಿಣಾಮ ತಗ್ಗಿದ್ದ ಹೊಸ ಕಾರು ಮಾರಾಟದಲ್ಲಿ ಹಲವು ತಿಂಗಳಿನಿಂದ ಉತ್ತಮ ಬೇಡಿಕೆ ಕಾಯ್ದುಕೊಳ್ಳುತ್ತಿದ್ದು, ಕಂಪನಿಯು ದೀಪಾವಳಿ ವಿಶೇಷತೆ ಹಿನ್ನಲೆಯಲ್ಲಿ ನವೆಂಬರ್ ಅವಧಿಗಾಗಿ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಕೋವಿಡ್ ಪರಿಣಾಮ ಆರ್ಥಿಕ ಸಂಕಷ್ಟದ ನಡುವೆಯೂ ವಿವಿಧ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟವು ಮತ್ತೆ ಹೆಚ್ಚಳವಾಗಿದೆ. ಹೊಸ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್‌ ಘೋಷಣೆ ಮಾಡಿದ್ದು, ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್ ನೀಡುತ್ತಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯು ಕ್ವಿಡ್(Kwid) ಹ್ಯಾಚ್‌‌ಬ್ಯಾಕ್, ಟ್ರೈಬರ್(Triber) ಮಿನಿ ಎಂಪಿವಿ, ಡಸ್ಟರ್(Duster) ಎಸ್‌ಯುವಿ ಮತ್ತು ಕಿಗರ್(Kiger) ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಈ ತಿಂಗಳಾಂತ್ಯದ ತನಕ ರೆನಾಲ್ಟ್ ಕಾರುಗಳ ಖರೀದಿ ಮೇಲೂ ಗ್ರಾಹಕರು ಆಕರ್ಷಕ ಆಫರ್ ಪಡೆದುಕೊಳ್ಳಬಹುದಾಗಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಹೊಸ ಆಫರ್‌ಗಳಲ್ಲಿ ಕಿಗರ್ ಕಾರಿನ ಮೇಲೆ ಕನಿಷ್ಠ ಮತ್ತು ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಲಾಗಿದ್ದು, ಆಯ್ದು ಕಾರು ಖರೀದಿ ಮೇಲೆ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ಲೊಯಾಲಿಟಿ ಆಫರ್ ಕೂಡಾ ಪ್ರಮುಖ ಆಕರ್ಷಕವಾಗಲಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯ ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿಯ ಮೇಲೆ ರೂ.40 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಡಸ್ಟರ್ ಎಸ್‌ಯುವಿ ಕಾರಿನ ಮೇಲೆ ರೂ.1.30 ಲಕ್ಷದ ತನಕ ಆಫರ್ ಪಡೆಯಬಹುದಾಗಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲಿನ ರೂ. 40 ಸಾವಿರ ಮೌಲ್ಯದ ಆಫರ್‌ಗಳಲ್ಲಿ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ.65 ಸಾವಿರ ಮೌಲ್ಯದ ಲೊಯಾಲಿಟಿ ಆಫರ್ ನೀಡುತ್ತಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಕ್ವಿಡ್ ಕಾರಿನ ಮೇಲೆ ಕಂಪನಿಯು ಆಯ್ದ ರಾಜ್ಯಗಳಲ್ಲಿ ಸಾಮಾನ್ಯ ಆಫರ್‌ಗಳಿಂತಲೂ ಕೆಲವು ಹೆಚ್ಚಿನ ಕೊಡುಗೆಗಳನ್ನು ಕೂಡಾ ಪ್ರಕಟಿಸಿದ್ದು, ಹೊಸ ಕಾರು ಖರೀದಿಗೆ ಸಹಕಾರಿಯಾಗುವಂತೆ 'ಬೈ ನೌವ್ ಪೇ ಇನ್ 2022' ಆಯ್ಕೆಯನ್ನು ಸಹ ನೀಡುತ್ತಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಇನ್ನು ಬಜೆಟ್ ಬೆಲೆಯಲ್ಲಿ ಸದ್ದು ಮಾಡುತ್ತಿರುವ ಟ್ರೈಬರ್ ಕಾರಿನ ಖರೀದಿಯ ಮೇಲೂ ಕೂಡಾ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಗರಿಷ್ಠ ರೂ.60 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ.75 ಸಾವಿರದಷ್ಟು ಲೊಯಾಲಿಟಿ ಬೋನಸ್‌ ನೀಡುತ್ತಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯ ಹೊಸ ಕಿಗರ್ ಕಾರು ಖರೀದಿಯ ಮೇಲೂ ವಿವಿಧ ಆಫರ್‌ಗಳು ಲಭ್ಯವಿದ್ದು, ನವೆಂಬರ್ ಅವಧಿಯಲ್ಲಿ ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ರೂ.10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್‌ನೊಂದಿಗೆ ರೂ.95 ಸಾವಿರ ಮೌಲ್ಯದ ಲೊಯಾಲಿಟಿ ಆಫರ್ ನೀಡುತ್ತಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಇನ್ನುಳಿದಂತೆ ಡಸ್ಟರ್ ಕಾರಿನ ಪ್ರಮುಖ ವೆರಿಯೆಂಟ್‌ಗಳ ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ರೂ. 1.30 ಲಕ್ಷ ಮೌಲ್ಯದ ಡಿಸ್ಕೌಂಟ್‌ ಮತ್ತು ರೂ.1.10 ಲಕ್ಷ ಮೌಲ್ಯದ ಲೊಯಾಲಿಟಿ ಕೊಡುಗೆಗಗಳನ್ನು ಘೋಷಣೆ ಮಾಡಿದ್ದು, ಡಸ್ಟರ್ ಕಾರಿನ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಡಿಸ್ಕೌಂಟ್ ಲಭ್ಯವಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಇದರ ಜೊತೆಗೆ ರೆನಾಲ್ಟ್ ಕಂಪನಿಯು ಆರ್ಥಿಕ ಸಂಕಷ್ಟದಿಂದ ಕಾರು ಖರೀದಿಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಅತ್ಯುತ್ತಮ ಫೈನಾನ್ಸ್ ಅಸಿಸ್ಟ್ ಸೌಲಭ್ಯವನ್ನು ನೀಡುತ್ತಿದ್ದು, ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಅತ್ಯತ್ತಮ ಫೈನಾನ್ಸ್ ಆಯ್ಕೆ ನೀಡಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಸದ್ಯದ ಆರ್ಥಿಕ ಪರಿಸ್ಥಿತಿ ಕಾರು ಖರೀದಿ ಮುಂದಿನ ವರ್ಷಕ್ಕೆ ಮುಂದೂಡಿರುವ ಗ್ರಾಹಕರಿಗೆ ವಿಶೇಷ ಆಫರ್ ನೀಡಿರುವ ರೆನಾಲ್ಟ್ ಕಂಪನಿಯು ಕ್ವಿಡ್, ಟ್ರೈಬರ್ ಮತ್ತು ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಇಎಂಐ ಮರುಪಾವತಿ ಆಯ್ಕೆ ನೀಡಿದೆ.

ದೀಪಾವಳಿ ವಿಶೇಷವಾಗಿ ನವೆಂಬರ್ ಅವಧಿಗಾಗಿ ವಿವಿಧ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯ ಹೊಸ ಫೈನಾನ್ಸ್ ಅಸಿಸ್ಟ್ ಯೋಜನೆಯಡಿ ಕಾರು ಖರೀದಿಸುವ ಗ್ರಾಹಕರು ಈಗ ಕಾರು ಖರೀದಿ ಮಾಡಿ ಮತ್ತು 2022ರಿಂದ ಇಎಂಐ ಪಾವತಿಸಲು ಅವಕಾಶ ನೀಡಲಾಗಿದ್ದು, ಆರ್ಥಿಕ ಸಂಕಷ್ಟ ಎದುರಾಗಬಹುದಾದ ಕಾರಣಕ್ಕೆ ಕಾರು ಖರೀದಿ ಮುಂದೂಡಿರುವ ಗ್ರಾಹಕರಿಗೆ ಇದು ಸಹಕಾರಿಯಾಗಿದೆ.

Most Read Articles

Kannada
English summary
Renault india festive season offers details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X