ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಕಾರನ್ನು ಬಿಡುಗಡೆಗೊಳಿಸಿ ವಿತರಣೆಗೆ ಸಿದ್ದವಾಗುತ್ತಿದೆ.

ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ಕಿಗರ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಕಂಪನಿಯು ಆಸಕ್ತ ಗ್ರಾಹಕರಿಗೆ ಹೆಚ್ಚುವರಿ ಫೀಚರ್ಸ್ ಹೊಂದಿರುವ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದೆ. ಆಕ್ಸೆಸರಿಸ್ ಪ್ಯಾಕೇಜ್ ಕಾರಿನ ಹೊರ ಮತ್ತು ಒಳನೋಟಕ್ಕೆ ಮತ್ತಷ್ಟು ಮೆರಗು ನೀಡಲಿದ್ದು, ಆಕ್ಸೆಸರಿಸ್ ಪ್ಯಾಕೇಜ್ ವಿವಿಧ ದರ ಪಟ್ಟಿಯಲ್ಲಿ ಖರೀದಿಗೆ ಲಭ್ಯವಿವೆ.

ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಫ್ರಂಟ್ ಗ್ರಿಲ್ ಕ್ರೊಮ್ ಗಾರ್ನಿಶ್, ಫ್ರಂಟ್ ಗ್ರಿಲ್ ಕ್ರೊಮ್ ಲೈನರ್, ಬಂಪರ್ ಕ್ರೋಮ್, ಡೋರ್ ಸ್ಕಟರ್ಲ್, ಬಾಡಿ ಸೈಡ್ ಕ್ಲಾಡಿಂಗ್ ಜೊತೆ ಕ್ರೊಮ್, ವೀಲ್ಹ್ ಇನ್ಸರ್ಟ್, ರಿಯರ್ ಬಂಪರ್ ಕ್ರೋಮ್, ಟೈಲ್‌ ಗೇಟ್ ಕ್ರೋಮ್, ವಿಂಡೋ ಫ್ರೇಮ್ ಲಭ್ಯವಿದೆ.

ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ಹಾಗೆಯೇ ಕಾರಿನ ಒಳಭಾಗಕ್ಕಾಗಿ 3ಡಿ ಮ್ಯಾಟ್ಸ್, ಆರ್ಮರೆಸ್ಟ್ ಕನ್ಸೊಲ್ ಆರ್ಗನೈಸರ್, ಟ್ರಂಕ್ ಲೈಟ್ ಸೌಲಭ್ಯಗಳಿದ್ದು, ಕಿಗರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ಹೊಸ ಕಾರು ಆರಂಭಿಕವಾಗಿ ರೂ. 5.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 9.55 ಲಕ್ಷ ಬೆಲೆ ಹೊಂದಿದ್ದು, ಸದ್ಯಕ್ಕೆ ಮಾರುಕಟ್ಟೆಯಲ್ಲಿನ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಕಡಿಮೆ ಬೆಲೆ ಹೊಂದಿರುವ ಕಾರು ಮಾದರಿಯಾಗಿ ಕಿಗರ್ ಗುರುತಿಕೊಂಡಿದೆ. ಪ್ರತಿಸ್ಪರ್ಧಿ ಕಾರು ಮಾದರಿಗಳಂತೆ ಹಲವಾರು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿದ್ದು, ಆಕರ್ಷಕವಾದ ಬ್ಯಾನೆಟ್, ಹನಿಕೊಂಬ್ ಆಕಾರದಲ್ಲಿರುವ ಗ್ರಿಲ್ ಕ್ರೋಮ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್, ಇಳಿಜಾರು ಆಕಾರದಲ್ಲಿರುವ ರೂಫ್‌ರೈಲ್ಸ್ ಸೌಲಭ್ಯಗಳೊಂದಿಗೆ ಎಸ್‌ಯುವಿ ಕೂಪೆ ಮಾದರಿಯಲ್ಲಿ ಗಮನಸೆಳೆಯಲಿದ್ದು, ಹೊಸ ಕಾರಿನಲ್ಲಿ ಬ್ಲ್ಯಾಕ್ ಔಟ್ ಹೊಂದಿರುವ ಸಿ ಪಿಲ್ಲರ್, ಸ್ಪೋಟಿಯಾಗಿರುವ ಬೂಟ್ ಸ್ಪಾಯ್ಲರ್ ಆಕರ್ಷಕವಾಗಿದೆ.

ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ಹಾಗೆಯೇ ಸಿ ಆಕಾರದ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 205 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಕಾರಿನ ಒಳಭಾಗದಲ್ಲೂ ಸಾಕಷ್ಟು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಿರುವುದು ಪ್ರತಿಸ್ಪರ್ಧಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲು ನೆರವಾಗಲಿದ್ದು, ಕಿಗರ್ ಕಾರಿನಲ್ಲಿ ಗ್ರೆ ಲೆಯರ್ ಹೊಂದಿರುವ ಡ್ಯಾಶ್‌ಬೋರ್ಡ್ ಜೋಡಣೆ ಮಾಡಲಾಗಿದೆ.

ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ಹೊಸ ಕಾರಿನಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಸೆಂಟ್ರಲ್ ಎಸಿ ವೆಂಟ್ಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ನಿಯಂತ್ರಣ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್ ಸೌಲಭ್ಯವಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ಇದರೊಂದಿಗೆ ಹೊಸ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5 -ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಆರ್ಮ್ ರೆಸ್ಟ್ ಕೆಳಭಾಗದಲ್ಲಿ 7.5 ಲೀಟರ್ ಸಾಮರ್ಥ್ಯದ ಸ್ಟೋರೆಜ್ ಬಾಕ್ಸ್ ನೀಡಲಾಗಿದ್ದು, ಕಿ ಲೆಸ್ ಎಂಟ್ರಿ, ಪುಶ್ ಬಟನ್ ಆನ್/ಆಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, 3ಡಿ ಸೌಂಡ್ ಸಿಸ್ಟಂ, ಪಿಎಂ 2.5 ಏರ್ ಫಿಲ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌‌ರೂಫ್ ಸೌಲಭ್ಯಗಳಿವೆ.

ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ಎಂಜಿನ್ ಮತ್ತು ಪರ್ಫಾಮೆನ್ಸ್

ರೆನಾಲ್ಟ್ ಕಂಪನಿಯು ಹೊಸ ಕಿಗರ್ ಕಾರಿನಲ್ಲಿ ನಿಸ್ಸಾನ್ ಮಾಗ್ನೈಟ್‌ನಲ್ಲಿ ಜೋಡಣೆ ಮಾಡಲಾಗಿರುವ 1.0-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪರೆಟೆಡ್ ಮತ್ತು 1.0-ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸಾಮಾನ್ಯ ಪೆಟ್ರೋಲ್ ಮಾದರಿಯು 72 ಬಿಎಚ್‌ಪಿ ಮತ್ತು ಟರ್ಬೊ ಮಾದರಿಯು 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಿಗರ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರೆನಾಲ್ಟ್

ಈ ಮೂಲಕ ರೆನಾಲ್ಟ್ ಕಂಪನಿಯು ಹೊಸ ಕಿಗರ್ ಮಾದರಿಯೊಂದಿಗೆ ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ರೆನಾಲ್ಟ್ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿರುವುದು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದೆ.

More from DriveSpark

Article Published On: Wednesday, February 17, 2021, 11:38 [IST]
English summary
Renault Introduced Official Accessories For Kiger. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+