ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್ ಘೋಷಿಸಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಕಂಪನಿಯು ಹೊಸ ಕಾರು ಮಾರಾಟದಲ್ಲಿ ಹಲವು ತಿಂಗಳಿನಿಂದ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಇತ್ತೀಚೆಗೆ ಬಿಡುಗಡೆಯಾಗಲಿರುವ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ಕೋವಿಡ್ ಪರಿಣಾಮ ಕಳೆದ ವರ್ಷ ಕನಿಷ್ಠ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ಕಾರು ಕಂಪನಿಗಳಿಗೆ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿದ್ದು, ಇದೀಗ ಕೋವಿಡ್ 2ನೇ ಅಲೆ ಪರಿಣಾಮ ಮತ್ತೆ ಸಂಕಷ್ಟ ಎದುರಾಗಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಖರೀದಿದಾರರು ಹೊಸ ಯೋಜನೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳಿಗೆ ಭಾರೀ ನಷ್ಟ ಭೀತಿ ಎದುರಾಗಿದ್ದು, ಹೊಸ ವಾಹನ ಖರೀದಿಯನ್ನು ಉತ್ತೇಜಿಸಲು ಹೊಸ ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿವೆ.

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ರೆನಾಲ್ಟ್ ಕಂಪನಿಯು ಕಂಪನಿಯು ಕೂಡಾ ಹೊಸ ಕಾರು ಖರೀದಿದಾರರನ್ನು ವಿವಿಧ ಆಫರ್‌ಗಳ ಮೂಲಕ ಸೆಳೆಯಲು ಯತ್ನಿಸುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾದ ಕಿಗರ್ ಕಾರು ಖರೀದಿಯ ಮೇಲೂ ಇದೀಗ ಮೊದಲ ಬಾರಿಗೆ ಹೊಸ ಆಫರ್ ಘೋಷಿಸಿದೆ.

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ಮೇ ಅವಧಿಯಲ್ಲಿ ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ರೆನಾಲ್ಟ್ ಕಂಪನಿಯು 5 ವರ್ಷಗಳ ಹೆಚ್ಚುವರಿ ವಾರಂಟಿ ಅಥವಾ 1 ಲಕ್ಷ ಕಿ.ಮೀ ಮೇಲೆ ವಾರಂಟಿ ನೀಡುತ್ತಿದ್ದು, ನಿಗದಿತ ಅವಧಿಯಲ್ಲಿ ಕಾರು ಖರೀದಿ ಮಾಡುವ ಗ್ರಾಹಕರಿಗೆ ಮಾತ್ರ ಈ ಹೊಸ ಆಫರ್ ಲಭ್ಯವಾಗಲಿದೆ.

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ಕಿಗರ್ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹೆಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 9.55 ಲಕ್ಷ ಬೆಲೆ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಕಿಗರ್ ಕಾರಿನ ಪ್ರತಿ ಸ್ಪರ್ಧಿ ಕಾರುಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಹೊರತುಪಡಿಸಿ ಬಹುತೇಕ ಕಾರುಗಳು ಆರಂಭಿಕವಾಗಿ ರೂ. 7 ಲಕ್ಷದಿಂದ ಟಾಪ್ ಎಂಡ್ ಮಾದರಿಗಳು 13 ಲಕ್ಷ ಬೆಲೆ ಅಂತದಲ್ಲಿ ಮಾರಾಟವಾಗುತ್ತಿವೆ.

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ಹೀಗಿರುವಾಗ ಪ್ರತಿಸ್ಪರ್ಧಿ ಕಾರುಗಳಿಗೆ ಸಮನಾಗಿ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರುವ ರೆನಾಲ್ಟ್ ಕಿಗರ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ಸೆಳೆಯುತ್ತಿದೆ.

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ಕಿಗರ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಂತೆ ಹಲವಾರು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿದ್ದು, ಆಕರ್ಷಕವಾದ ಬ್ಯಾನೆಟ್, ಹನಿಕೊಂಬ್ ಆಕಾರದಲ್ಲಿರುವ ಗ್ರಿಲ್ ಕ್ರೋಮ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್, ಇಳಿಜಾರು ಆಕಾರದಲ್ಲಿರುವ ರೂಫ್‌ರೈಲ್ಸ್ ಸೌಲಭ್ಯಗಳೊಂದಿಗೆ ಎಸ್‌ಯುವಿ ಕೂಪೆ ಮಾದರಿಯಲ್ಲಿ ಗಮನಸೆಳೆಯುತ್ತಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ಹಾಗೆಯೇ ಸಿ ಆಕಾರದ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 205 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ಹೊಸ ಕಾರಿನಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಸೆಂಟ್ರಲ್ ಎಸಿ ವೆಂಟ್ಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ನಿಯಂತ್ರಣ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್ ಸೌಲಭ್ಯವಿದೆ.

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ಇದರೊಂದಿಗೆ ಹೊಸ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5-ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಆರ್ಮ್ ರೆಸ್ಟ್ ಕೆಳಭಾಗದಲ್ಲಿ 7.5 ಲೀಟರ್ ಸಾಮರ್ಥ್ಯದ ಸ್ಟೋರೆಜ್ ಬಾಕ್ಸ್ ನೀಡಲಾಗಿದ್ದು, ಕಿ ಲೆಸ್ ಎಂಟ್ರಿ, ಪುಶ್ ಬಟನ್ ಆನ್/ಆಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, 3ಡಿ ಸೌಂಡ್ ಸಿಸ್ಟಂ, ಪಿಎಂ 2.5 ಏರ್ ಫಿಲ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌‌ರೂಫ್ ಸೌಲಭ್ಯಗಳಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕಿಗರ್ ಕಾರು ಖರೀದಿಯ ಮೇಲೆ ಮೊದಲ ಬಾರಿಗೆ ಸ್ಪೆಷಲ್ ಆಫರ್

ಕಿಗರ್ ಕಾರಿನಲ್ಲಿ 1.0-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪರೆಟೆಡ್ ಮತ್ತು 1.0-ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸಾಮಾನ್ಯ ಪೆಟ್ರೋಲ್ ಮಾದರಿಯು 72 ಬಿಎಚ್‌ಪಿ ಮತ್ತು ಟರ್ಬೊ ಮಾದರಿಯು 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Monday, May 3, 2021, 20:13 [IST]
English summary
Renault Introduced Special Offer For Kiger In May 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+