ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಹೊಸ ಕಾರು ಮಾದರಿಯೊಂದಿಗೆ ವಿದೇಶಿ ಮಾರುಕಟ್ಟೆಗಳಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ಭಾರತದಿಂದಲೇ ರೆನಾಲ್ಟ್ ಕಂಪನಿಯು ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ವಿವಿಧ ಕಾರು ಮಾದರಿಗಳ ರಫ್ತು ಕೈಗೊಳ್ಳುತ್ತಿದ್ದು, ಇದೀಗ ಕಿಗರ್ ಮಾದರಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಸದ್ಯ ಭಾರತದಲ್ಲಿ ಖರೀದಿಗೆ ಲಭ್ಯವಿರುವ ಕಿಗರ್ ಮಾದರಿಯೇ ದಕ್ಷಿಣ ಆಫ್ರಿಕಾದಲ್ಲೂ ಮಾರಾಟಗೊಳ್ಳಲಿದ್ದು, ಇತ್ತೀಚೆಗೆ ಹೊಸ ಕಾರನ್ನು ನೇಪಾಳದಲ್ಲೂ ಸಹ ಬಿಡುಗಡೆ ಮಾಡಿದೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ವಿದೇಶಿ ಮಾರುಕಟ್ಟೆಗಳಿಗಾಗಿ ರೆನಾಲ್ಟ್ ಕಂಪನಿಯು ಲೆಫ್ಟ್ ಹ್ಯಾಂಡ್ ಕಿಗರ್ ಮಾದರಿಯ ರಫ್ತು ಕೈಗೊಳ್ಳುತ್ತಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ಎಂಜಿನ್ ಆಯ್ಕೆಯನ್ನೇ ವಿದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಿಗರ್‌ ಮಾದರಿಯಲ್ಲೂ ಒಂದೇ ಎಂಜಿನ್ ಆಯ್ಕೆ ನೀಡಿದೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ರೆನಾಲ್ಟ್ ಹೊಚ್ಚ ಹೊಸ ಕಿಗರ್ ಕಾರು ಮಾದರಿಯು ಅತಿ ಕಡಿಮೆ ಅವಧಿಯಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಉತ್ಪಾದನೆ ಹೆಚ್ಚಳದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ವಿತರಣೆ ಕೈಗೊಳ್ಳುತ್ತಿದೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ಕಿಗರ್ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 9.75 ಲಕ್ಷ ಬೆಲೆ ಹೊಂದಿದೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ಪ್ರತಿಸ್ಪರ್ಧಿ ಕಾರುಗಳಿಗೆ ಸಮನಾಗಿ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರುವ ರೆನಾಲ್ಟ್ ಕಿಗರ್ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾದರನ್ನು ಸಹ ಸೆಳೆಯುತ್ತಿದೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ಕಿಗರ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಂತೆ ಹಲವಾರು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿದ್ದು, ಆಕರ್ಷಕವಾದ ಬ್ಯಾನೆಟ್, ಹನಿಕೊಂಬ್ ಆಕಾರದಲ್ಲಿರುವ ಗ್ರಿಲ್ ಕ್ರೋಮ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್, ಇಳಿಜಾರು ಆಕಾರದಲ್ಲಿರುವ ರೂಫ್‌ರೈಲ್ಸ್ ಸೌಲಭ್ಯಗಳೊಂದಿಗೆ ಎಸ್‌ಯುವಿ ಕೂಪೆ ಮಾದರಿಯಲ್ಲಿ ಗಮನಸೆಳೆಯುತ್ತಿದೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ಹಾಗೆಯೇ ಸಿ ಆಕಾರದ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 205 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ಹೊಸ ಕಾರಿನಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಸೆಂಟ್ರಲ್ ಎಸಿ ವೆಂಟ್ಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ನಿಯಂತ್ರಣ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್ ಸೌಲಭ್ಯವಿದೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ಇದರೊಂದಿಗೆ ಹೊಸ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5-ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಆರ್ಮ್ ರೆಸ್ಟ್ ಕೆಳಭಾಗದಲ್ಲಿ 7.5 ಲೀಟರ್ ಸಾಮರ್ಥ್ಯದ ಸ್ಟೋರೆಜ್ ಬಾಕ್ಸ್ ನೀಡಲಾಗಿದ್ದು, ಕಿ ಲೆಸ್ ಎಂಟ್ರಿ, ಪುಶ್ ಬಟನ್ ಆನ್/ಆಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, 3ಡಿ ಸೌಂಡ್ ಸಿಸ್ಟಂ, ಪಿಎಂ 2.5 ಏರ್ ಫಿಲ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌‌ರೂಫ್ ಸೌಲಭ್ಯಗಳಿವೆ.

ಭಾರತದಿಂದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ರಫ್ತು ಆರಂಭಿಸಿದ ರೆನಾಲ್ಟ್

ಕಿಗರ್ ಕಾರಿನಲ್ಲಿ 1.0-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪರೆಟೆಡ್ ಮತ್ತು 1.0-ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸಾಮಾನ್ಯ ಪೆಟ್ರೋಲ್ ಮಾದರಿಯು 72 ಬಿಎಚ್‌ಪಿ ಮತ್ತು ಟರ್ಬೊ ಮಾದರಿಯು 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

Article Published On: Monday, August 2, 2021, 21:14 [IST]
English summary
Renault India Begins Exporting Kiger Sub-Compact SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+