ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ರೆನಾಲ್ಟ್ ಹೊಚ್ಚ ಹೊಸ ಕಿಗರ್ ಕಾರು ಮಾದರಿಯು ಅತ್ಯುತ್ತಮ ಬೇಡಿಕೆಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಿದೆ.

ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ಸದ್ಯ ಅತಿ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿರುವ ಕಿಗರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಆಸಕ್ತ ಗ್ರಾಹಕರು ಹೊಸ ಕಾರಿಗಾಗಿ ಹೆಚ್ಚುವರಿ ದರಗಳೊಂದಿಗೆ ವಿಭಿನ್ನವಾದ ಕಸ್ಟಮೈಜ್ಡ್ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್

ಕಿಗರ್ ಕಾರು ಮಾದರಿಗಾಗಿ ರೆನಾಲ್ಟ್ ಪ್ರಮುಖ ಡೀಲರ್ಸ್‌ಗಳಲ್ಲಿ ಅಧಿಕೃತವಾದ ಕಸ್ಟಮೈಜ್ಡ್ ಪ್ರೀಮಿಯಂ ಸೌಲಭ್ಯಗಳನ್ನು ಜೋಡಣೆ ಮಾಡಲಾಗುತ್ತಿದ್ದು, ಕಾರಿನ ಒಳಭಾಗದ ನೋಟಕ್ಕೆ ಮತ್ತಷ್ಟು ಮೆರಗು ನೀಡಲು ಹಲವು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.

ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನ ಆಸನ ಸೌಲಭ್ಯವನ್ನು ಉನ್ನತೀಕರಿಸಲು ಬ್ರೌನ್ ಶೇಡ್ ಮತ್ತು ಬಿಜ್ ಶೇಡ್ ಎನ್ನುವ ಮಾದರಿಯ ಕಸ್ಟಮೈಜ್ಡ್ ಪ್ಯಾಕೇಜ್ ಮೂಲಕ ಆಸನ ಸೌಲಭ್ಯ ಮತ್ತು ಡ್ಯಾಶ್‌ಬೋರ್ಡ್‌ಗಳಲ್ಲಿ ಹೊಸ ವಿನ್ಯಾಸ ನೀಡಲಾಗಿದೆ. ಹೊಸ ಬಣ್ಣಗಳನ್ನು ಆಧರಿಸಿರುವ ಪ್ರೀಮಿಯಂ ಆಸನ ಸೌಲಭ್ಯವು ಕಂಪನಿಯು ನೀಡುವ ಆಸನಗಳಿಂತಲೂ ಉತ್ತಮ ಸ್ಥಳಾವಕಾಶ ಒದಗಿಸುವುದರ ಜೊತೆಗೆ ಫ್ಲಕ್ಸ್ ವುಡನ್ ಪ್ಯಾನೆಲ್ ಮತ್ತು ಲೆದರ್ ಕೋಟಿಂಗ್ ಹೊಂದಿರುವ ಸ್ಪೀರಿಂಗ್ ವೀಲ್ಹ್ ಪಡೆದುಕೊಂಡಿದೆ.

ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್

ಜೊತೆಗೆ ಹೊಸ ಕಾರಿನ ಒಳಭಾಗದಲ್ಲಿ ಡೋರ್‌ಗಳಲ್ಲಿ ಲೆದರ್ ಪ್ಯಾಡಿಂಗ್, ಕಾಂಟ್ರಾಸ್ಟ್ ಸ್ಟೀಚ್ ಹೊಂದಿರುವ ಆಸನಗಳು ಮತ್ತು ಆಕರ್ಷಕವಾದ ಹೆಡ್ ರೆಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ. ಕಿಗರ್ ಕಾರಿನ ಕಸ್ಟಮೈಜ್ಡ್ ಸೌಲಭ್ಯಗಳು ಡೀಲರ್ಸ್ ಮಟ್ಟದಲ್ಲೇ ಮಾರಾಟಗೊಳ್ಳುತ್ತಿದ್ದು, ಆಸಕ್ತ ಗ್ರಾಹಕರು ವಿವಿಧ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡ ಕಸ್ಟಮೈಜ್ಡ್ ಪ್ಯಾಕೇಜ್‌ ಅನ್ನು ರೂ.35 ಸಾವಿರ ಪಾವತಿಸಿ ಹೊಸ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್

ಇನ್ನು ಕಿಗರ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಂತೆ ಹಲವಾರು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿದ್ದು, ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.45 ಲಕ್ಷದಿಂದ ರೂ. 9.75 ಲಕ್ಷ ಪಡೆದುಕೊಂಡಿದೆ.

ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್

ಹೊಸ ಕಾರಿನಲ್ಲಿ ಆಕರ್ಷಕವಾದ ಬ್ಯಾನೆಟ್, ಹನಿಕೊಂಬ್ ಆಕಾರದಲ್ಲಿರುವ ಗ್ರಿಲ್ ಕ್ರೋಮ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್, ಇಳಿಜಾರು ಆಕಾರದಲ್ಲಿರುವ ರೂಫ್‌ರೈಲ್ಸ್ ಸೌಲಭ್ಯಗಳೊಂದಿಗೆ ಸಿ ಆಕಾರದ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 205 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್

ಕಿಗರ್ ಕಾರಿನಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಸೆಂಟ್ರಲ್ ಎಸಿ ವೆಂಟ್ಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ನಿಯಂತ್ರಣ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್ ಸೌಲಭ್ಯವಿದೆ.

ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್

ಇದರೊಂದಿಗೆ ಹೊಸ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5-ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಆರ್ಮ್ ರೆಸ್ಟ್ ಕೆಳಭಾಗದಲ್ಲಿ 7.5 ಲೀಟರ್ ಸಾಮರ್ಥ್ಯದ ಸ್ಟೋರೆಜ್ ಬಾಕ್ಸ್ ನೀಡಲಾಗಿದ್ದು, ಕಿ ಲೆಸ್ ಎಂಟ್ರಿ, ಪುಶ್ ಬಟನ್ ಆನ್/ಆಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, 3ಡಿ ಸೌಂಡ್ ಸಿಸ್ಟಂ, ಪಿಎಂ 2.5 ಏರ್ ಫಿಲ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌‌ರೂಫ್ ಸೌಲಭ್ಯಗಳಿವೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಕಸ್ಟಮೈಜ್ಡ್ ಆಕ್ಸೆಸರಿಸ್‌ಗಳೊಂದಿಗೆ ಮಿಂಚಿದ ರೆನಾಲ್ಟ್ ಕಿಗರ್

ಕಿಗರ್ ಕಾರಿನಲ್ಲಿ 1.0-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪರೆಟೆಡ್ ಮತ್ತು 1.0-ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸಾಮಾನ್ಯ ಪೆಟ್ರೋಲ್ ಮಾದರಿಯು 72 ಬಿಎಚ್‌ಪಿ ಮತ್ತು ಟರ್ಬೊ ಮಾದರಿಯು 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
Renault Kiger Interior Customized, Looks Premium. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X